ರಾಣೆಬೆನ್ನೂರ

ನರೇಗಾ ಯೋಜನೆ ಕೂಲಿ ಕಾರ್ಮಿಕರ ಸಂಘಟನೆಗೆ ಬಲ ನೀಡಿದೆ: ಪೂಜಾರ

ನರೇಗಾ ಯೋಜನೆ ಕೂಲಿ ಕಾರ್ಮಿಕರ ಸಂಘಟನೆಗೆ ಬಲ ನೀಡಿದೆ: ಪೂಜಾರ

ರಾಣಿಬೆನ್ನೂರು 26:  ಕೂಲಿ ಕಾರ್ಮಿಕರ ಸಂಘಟನೆಗಳು ಇಂದು ಬಲವರ್ಧನೆ ಆಗಲು ನರೇಗಾ ಯೋಜನೆ ಕೂಲಿ ಕಾರ್ಮಿಕರ ಸಂಘಟನೆಗೆ ಬಲ ನೀಡಿದೆ ಎಂದು ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಹೇಳಿದರು 

ಬುಧವಾರ ತಾಲೂಕಿನ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಕನಹಳ್ಳಿ ಗ್ರಾಮದ ಗೋಮಾಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೂಲಿ ಕಾರ್ಮಿಕರ ಸಂಘಟನೆಗಳು ಸುಸ್ಥಿರವಾಗಿ ಇರಬೇಕಾದರೆ ನರೇಗಾ ಯೋಜನೆ ಕೂಲಿ ಕಾರ್ಮಿಕರ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದರು. 

ಎಂಐಎಸ್ ಸಂಯೋಜಕರಾದ ಸುನಿತಾ ಮಾತನಾಡಿ, ಇಂದು ಗೋಮಾಳ ಅಭಿವೃದ್ಧಿಯಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಅರಣ್ಯ ಸಂರಕ್ಷಣೆ ಆಗಿದೆ ಅಲ್ಲದೆ ಸಾಕಷ್ಟು ಪಕ್ಷಿಗಳ ಆಶ್ರಯ ತಾಣ ವಾಗಿದೆ. ಇದರ ಅಭಿವೃದ್ಧಿಯ ಜೊತೆಗೆ ತಮಗೆಲ್ಲರಿಗೂ ನರೇಗಾ ಯೋಜನೆಯ ಕೂಲಿ ಹಣ ಪಾವತಿ ಆಗುವುದರೊಂದಿಗೆ ನೈಸರ್ಗಿಕ ಪುನರ್ಜೀವನ ಗೊಳಿಸಿದಂತಾಗಿದೆ ಎಂದು ತಿಳಿಸಿದರು 

ಗ್ರಾಮ ಪಂಚಾಯಿತಿಯ ಸದಸ್ಯರಾದ ನಾಗರಾಜ್ ಸಣ್ಣಮನಿ, ಬೀರ​‍್ಪ ಕರೆಣ್ಣನವರ, ಪಿಡಿಓ ಪ್ರಕಾಶ್ ಎಂಕೆ, ಕಾರ್ಯದರ್ಶಿ ಹನುಮಂತಪ್ಪ ಹರಿಹರ, ತಾಂತ್ರಿಕ ಸಹಾಯಕ ಕಿರಣ್ ಕುಮಾರ್,  ಐಇಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ, ಹನುಮಂತಗೌಡ ಚಂದ್ರಶೇಖರ್‌ಮಠ, ರವಿಕಿರಣ,  ಹೊನ್ನಪ್ಪ ಅಜ್ಜರ, ವೀರಣ್ಣ, ಚನ್ನಬಸಪ್ಪ ತುಪ್ಪದ, ಉಮೇಶಗೌಡ ಪಾಟೀಲ, ಶಾಂತಮ್ಮ ಬಾರ್ಕಿ, ರೇಣುಕಾ ಶಂಕ್ರಿಹಳ್ಳಿಮಠ ಮತ್ತು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ