ರಾಣೆಬೆನ್ನೂರ

ಕಾರ್ಮಿಕರಿಗೆ ನರೇಗಾ ಯೋಜನೆ ಬಲ ನೀಡಿದೆ

ಕಾರ್ಮಿಕರಿಗೆ ನರೇಗಾ ಯೋಜನೆ ಬಲ ನೀಡಿದೆ

ರಾಣಿಬೆನ್ನೂರ 18:  ತಾಲೂಕಿನ ಬೆನಕನಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಕೆರೆಯ ಕಾಮಗಾರಿ ವೀಕ್ಷಣೆ ಮಾಡಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಬಲ ನೀಡಿದೆ ಎಂದು ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಹೇಳಿದರು 

ತಾಲೂಕಿನ ಬೆನಕನಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಕೆರೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರೋಜ್‌ಗಾರ ದಿನಾಚರಣೆ ಮತ್ತು ಕೂಲಿ ಕಾರ್ಮಿಕರ ದಿನಾಚರಣೆಯ ಅಂಗವಾಗಿ ನಡೆದ ಕೂಲಿ ಕಾರ್ಮಿಕರ ಹಬ್ಬದಲ್ಲಿ ಮಾತನಾಡಿದ ಅವರು, ಬೇಸಿಗೆ ಕಾಲ ಇದ್ದ ಕಾರಣ ಏಪ್ರಿಲ್ ಮೇ ಜೂನ್ ತಿಂಗಳಲ್ಲಿ ಶೇ. 30ರಷ್ಟು ಕೂಲಿ ಕೆಲಸದಲ್ಲಿ ರಿಯಾಯಿತಿ ಇದೆ ಎಂದು ತಿಳಿಸಿದರು. 

ನರೇಗಾ ಯೋಜನೆ ಈ ದೇಶದಲ್ಲಿ ಕಾಯ್ದೆ ರೂಪದಲ್ಲಿ ಜಾರಿಗೆ ಬಂದಿದ್ದು ಕೂಲಿ ಕಾರ್ಮಿಕರಿಗೆ ಬಲ ತಂದಿದೆ ಸ್ಥಳೀಯವಾಗಿ ಕೆಲಸ ನೀಡುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಪುನರ್ಜೀವನಗೊಳಿಸಲು ಮೂಲ ಉದ್ದೇಶ ಹೊಂದಿದೆ ಎಂದರು 

ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಎಸ್‌.ಡಿ. ಬಳೆಗಾರ ಮಾತನಾಡಿ, ನರೇಗಾ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ದುಡಿಯುವ ಕೈಗಳಿಗೆ ಕೆಲಸ ನೀಡಿದೆ ಸಮಾನ ವೇತನ ಇದೆ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಯೋಜನೆ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.  

ಗ್ರಾಪಂ ಸದಸ್ಯ ಗಣೇಶ ಹಳ್ಳಿಗುಡಿ, ಮಂಜವ್ವ ಅಸುಂಡಿ, ಚನ್ನಬಸಪ್ಪ ಬಿದರಿ, ರೇವಣಪ್ಪ ಬಿದರಿ, ರಾಜಶೇಖರ್‌ಗೌಡ ಆದಿಮನಿ, ಕರೆಗೌಡ ನಾಗನಗೌಡ್ರ,  ಶಿವಪ್ಪ ಹಳ್ಳಿಗುಡಿ, ರಾಜು ಕಳ್ಳಿಮನಿ, ಹನುಮಂತಪ್ಪ ನಿಟ್ಟೂರ, ಪಿಡಿಓ ರಂಗಪ್ಪ ಕೊರಕಲಿ, ಸಂಯೋಜಕ ದಿಂಗಾಲೇಶ್ವರ ಅಂಗೂರ, ತಾಂತ್ರಿಕ ಸಹಾಯಕ ಕಿಶೋರ, ಬಿಎಫ್‌ಟಿ ಚಂದ್ರ​‍್ಪ ಬಾಲನಾಯಕ, ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕರ್ತ ಫಕೀರೇಶ. ಹನುಮಂತಪ್ಪ ಮತ್ತಿತರರು ಇದ್ದರು. 


ಸುದ್ದಿ ಓದಿ