ನರೇಗಾ ಬಲ ಚೆಕ್ ಡ್ಯಾಂಗೆ ಜೀವ ಜಲ: ಡಾ: ಶಂಕರ್
ರಾಣಿಬೆನ್ನೂರು ಜುಲೈ 13: ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ಹಳ್ಳದ ಚೆಕ್ ಡ್ಯಾಮ್ ಹೂಳನ್ನು ಸುಮಾರು ನಾಲ್ಕು ಲಕ್ಷ ರೂಗಳ ಅನುದಾನದಲ್ಲಿ ಕಾಮಗಾರಿಯನ್ನು ನಡೆಸಲಾಯಿತು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಕೋಟುಮಚಗಿ ಹೇಳಿದರು.
ಅವರು ತಾಲೂಕಿನ ನಿಟ್ಟೂರು ಗ್ರಾಮದ ಹಳ್ಳದಲ್ಲಿ ನಡೆಸಲಾದ ನರೇಗಾ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿ ಕುರಿತು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆ ತುಂಬಾ ಪರಿಣಾಮಕಾರಿಯಾಗಿ ತನ್ನ ಕಾರ್ಯ ನಿರ್ವಹಿಸುತ್ತಲಿದೆ ಇದರಿಂದ ಕೂಲಿಕಾರ್ಮಿಕರು, ಊರಿಂದ ಊರಿಗೆ ಅಲೇಯುವುದನ್ನು ತಪ್ಪಿಸಿದಂತಾಗಿದೆ. ಅಲ್ಲದೆ ಅವರಿರುವ ಪ್ರದೇಶದಲ್ಲಿಯೇ ಕೂಲಿಯನ್ನು ನೀಡಿದಂತಾಗಿದೆ ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬರು ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಹೂಳನ್ನು ತೆಗೆದಿದ್ದರಿಂದ ಒಂದೇ ಮಳೆಗೆ, ಚೆಕ್ ಡ್ಯಾಮ್ ಸಂಪೂರ್ಣ ಬರ್ತಿಯಾಗಿದೆ ಮತ್ತು ಪ್ರಸಕ್ತ ವರ್ಷದಲ್ಲಿ ಮೂರು ಚೆಕ್ ಡ್ಯಾಮ್ ಗಳ ಹೂಳನ್ನು ತೆಗೆಯಲಾಗಿದ್ದು, ಪರಿಣಾಮ ಚೆಕ್ ಡ್ಯಾಮ್ಗಳಿಗೆ ನರೇಗಾ ಯೋಜನೆ ಬಲವನ್ನು ನೀಡಿದಂತಾಗಿದೆ ಎಂದರು.
ನಿಟ್ಟೂರು ಗ್ರಾಮದ ಹಳ್ಳದ ಪಕ್ಕದಲ್ಲಿರುವ ಜಮೀನಿನ ರೈತರಾದ ಬಸಪ್ಪ ನೂಲಗೇರಿ, ಅವರು ಮಾತನಾಡಿ ನರೇಗಾ ಯೋಜನೆ ಅಡಿ ಹೂಳು ತೆಗೆದಿದ್ದರಿಂದ ಜಾನುವಾರುಗಳಿಗೆ, ಪಶು ಪಕ್ಷಿಗಳಿಗೆ ಹಾಗೂ ಬೋರ್ವೆಲ್ ಗಳಿಗೆ ಅಂತರ್ಜಲ ಮಟ್ಟ ಹೆಚ್ಚಳ ವಾದಂತಾಗಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.ತಾಲೂಕಾ ಐಈಸಿ ಸಂಯೋಜಕ ದಿಂಗಾಲೇಶ್ ಅಂಗೂರ್ ಮಾತನಾಡಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳನ್ನು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಿದ್ದರಿಂದ ರೈತರ ಹೊಲಗಳಿಗೆ ತೇವಾಂಶ ಹೆಚ್ಚಳವಾಗಿದೆ ಮತ್ತು ಜೀವ ಜಲಕ್ಕಾಗಿ ಪರದಾಡುವುದನ್ನು ತಪ್ಪಿಸುವಲ್ಲಿ, ಇದರಿಂದ ಅಂತರ್ಜಲ ಹೆಚ್ಚಳವಾದಂತಾಗಿದೆ ಎಂದರು.
ನರೇಗಾ ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ಚೆಕ್ ಡ್ಯಾಮುಗಳನ್ನು ವೀಕ್ಷಿಸಲೆಂದೇ ಸುತ್ತಮುತ್ತಲ ಗ್ರಾಮಗಳ ರೈತರು, ಕೃಷಿಕರು, ಕೃಷಿ ಕಾರ್ಮಿಕರು ಧಾವಿಸುತ್ತಿರುವುದು ಸಾಮಾನ್ಯವಾಗಿತ್ತು.