ನಂದಿಬಸವೇಶ್ವರ ಜಾತ್ರಾ ಮಹೋತ್ಸವ
ಇಂಡಿ: ಮಾನವ ಯಾವುದನ್ನು ಪವಿತ್ರ ಭಾವನೆಯಿಂದ ನೋಡುವನೋ ಅದರೊಡನೆ ಇರಿಸಿಕೊಳ್ಳುವ ಸಂಬಂಧವೇ ಧರ್ಮವೆಂಬ ಶಬ್ದದ ವಿಶಾಲಾರ್ಥ ಎಂದು ಬಂಥನಾಳ ಮತ್ತು ಲಚ್ಯಾಣದ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಹೇಳಿದರು. ತಾಲೂಕಿನ ಆಳೂರ ಗ್ರಾವ್ಮದ ನಂದಿಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ಮ್ನ ಮರೆಯದೆ ಅದನ್ನು ಮುನ್ನಡೆಸುತ್ತ ಹೋಗಬೇಕಿದೆ ಎಂದರು. ದೇವರ ಕಾರ್ಯವೆಂದು ಭಾವಿಸಿ ಮಾಡುವ ಪ್ರತಿಯೊಂದು ಕಾರ್ಯವೂ ಭಗವಂತನಿಗೆ ಸಮರೆ್ಣಯಾಗುತ್ತದೆ. ಶೂನ್ಯ ಭಾವದಿಂದ ಮಾಡುವ ಸೇವೆಗೆ ದೇವರು ಸಂಂಪ್ರೀತರಾಗುತ್ತಾರೆ. ಭಗವಂತನ ಸೇವೆಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಭಾಗವಹಿಸಿದ್ದು ಶ್ರೇಷ್ಠ ವಿಚಾರವಾಗಿದೆ ಎಂದರು.
ಧರ್ಮ ಸಭೆಯಲ್ಲಿ ಆಳೂರ ಸಿದ್ಧರೂಡ ಮಠದ ಶ್ರೀ ಶಂಕರಾನಂದ ಶ್ರೀಗಳು, ಬಿ.ಎಂ ಪಾಟೀಲ, ಬಸವರಾಜ ವಾಲಿಕಾರ, ಹುಚ್ಚಪ್ಪ ತಳವಾರ ಸೇರಿದಂತೆ ಅನೇಕರು ಇದ್ದರು. ಆಳೂರ ಗ್ರಾಮದ ನಂದಿಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಸಭೆಯಲ್ಲಿ ವೃಷಭಲಿಂಗ ಶ್ರೀಗಳು ಆಶೀರ್ವಚನ ನೀಡಿದರು.