ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ
ಇಂಡಿ: ಪಟ್ಟಣದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನ.18 ರಿಂದ 23 ರ ವರೆಗೆ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಈರನಗೌಡ ಪಾಟೀಲ ಹೇಳಿದರು.
ಗುರುವಾರ ಪಟ್ಟಣದ ಬೀರ್ಪ ನಗರದ ದೇವಸ್ಥಾನದ ಆವರಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 18 ರಿಂದ 22 ರ ವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಗೆ ಪ್ರವಚನಕಾರ ಸಿಂದಗಿಯ ಶ್ರೀ ಗುರುರಾಜ ಶಾಸ್ತ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ನಂತರ ಅನ್ನಪ್ರಸಾದ ವಿತರಣೆ, 23 ರಂದು ಬೆಳಗ್ಗೆ 5:30 ಗಂಟೆಗೆ ಉದಯ ಸ್ವಾಮಿಗಳಿಂದ ರುದ್ರಾಭಿಷೇಕ, ಬಸವೇಶ್ವರ ಮಹಿಳಾ ಸಂಘ, ಅಂಬಿಕಾ ಮಹಿಳಾ ಸಂಘ, ಸಿದ್ಧಾರೂಢ ಮಹಿಳಾ ಸಂಘ, ಲಕ್ಷ್ಮೀ ಮಹಿಳಾ ಸಂಘ ಇವರ ನೇತೃತ್ವದಲ್ಲಿ ಕುಂಭ ಮೆರವಣೆಗೆ, ಪಲ್ಲಕ್ಕಿ ಉತ್ಸವ ಜರುಗುವವು. ದಾವಣಗೆರೆಯ ಶ್ರೀ ಗುರುರಾಜ ಮೆಲೋಡಿಸ್ ಇವರಿಂದ ರಸಮಂಜರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌರವಾಧ್ಯಕ್ಷ ಬಿ.ಆರ್. ಜಾಲಗೇರಿ, ಎನ್.ಎಸ್. ದಿಂಡೂರ, ಎಸ್.ಎಂ. ಕಡಕೋಳ ಗುರುಗಳು, ವಿಠ್ಠಲ ಬಡಿಗೇರ, ಕೆ.ವಿ. ಪಾಟೀಲ, ವೈ.ಬಿ. ತಮಶೆಟ್ಟಿ, ಪ್ರಕಾಶ ಬಿರಾದಾರ, ಬಿ.ಆರ್. ಭವಿಕಟ್ಟಿ, ಶ್ರೀಶೈಲಗೌಡ ಬಿರಾದಾರ, ಮಂಜು ದೇವರ, ಸಚೀಲ ವಾಲಿಕಾರ, ಅಕ್ಷಯ ಶೇಡಬಾಳ, ಪ್ರಶಾಂತ ಗವಳಿ, ಎಸ್.ಸಿ. ಗಂಗನಹಳ್ಳಿ ನಿಂಗನಗೌಡ ಬಿರಾದಾರ, ವೇದಮೂರ್ತಿ ದಾನಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.