ರಾಣೆಬೆನ್ನೂರ

ಸಂಪ್ರದಾಯ ಬದ್ದವಾಗಿ ಆಚರಿಸಲಾದ ನಾಗರ ಪಂಚಮಿಯ ಹಬ

ಸಂಪ್ರದಾಯ ಬದ್ದವಾಗಿ ಆಚರಿಸಲಾದ ನಾಗರ ಪಂಚಮಿಯ ಹಬ

ರಾಣಿಬೆನ್ನೂರು:9 ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಬಹುತೇಕವಾಗಿ ಸಡಗರ ಸಂಭ್ರಮದ ಮಧ್ಯ ಸಂಪ್ರದಾಯ ಬದ್ದವಾಗಿ ಗುರುವಾರ ಆಚರಿಸಲಾಯಿತು. ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಪರಿವಾರದ ಜೊತೆಗೆ ನಾಗರ ಮೂರ್ತಿಗಳಿಗೆ ಹಾಲು ಎರೆದು ಭಕ್ತಿ ಭಾವ ಮೆರೆದರು.  

ಕಲ್ಲು ಅಥವಾ ಮಣ್ಣಿನ ನಾಗಪ್ಪನಿಗೆ ಪೂಜೆ ಸಲ್ಲಿಸಿ ಶೇಂಗಾ, ಎಳ್ಳು, ಕಡಲಿ, ಹುರಳಿ, ತಂಬಿಟ್ಟು ಸೇರಿದಂತೆ ವಿವಿಧ ಬಗೆಯ ಉಂಡಿಗಳನ್ನು ನೈವೇದ್ಯ ಮಾಡಿ, ನಂತರ ಭೋಜನ ಸವಿದು ಹಬ್ಬವನ್ನು ಆಚರಿಸಿದ್ದು ಕಂಡು ಬಂದಿತು. ಮಹಿಳೆಯರು ಮತ್ತು ಮಕ್ಕಳು ಜೋಕಾಲಿಯ ಸಂಭ್ರಮದಲ್ಲಿ ನಿರತರಾಗಿದ್ದರೆ, ಇನ್ನೊಂದಡೆ ಯುವಕರು, ಹಬ್ಬದ ಖುಷಿ ಮೋಜಿಗಾಗಿ ಜೂಜಾಟದಲ್ಲಿ ತೊಡಗಿದ್ದು ಕಂಡು ಬಂದಿತು. 


ಸುದ್ದಿ ಓದಿ