ರಾಣೆಬೆನ್ನೂರ

ಕರ್ನಾಟಕ ಸಂಘದಲ್ಲಿ ನಾಡ ಹಬ್ಬ ಸಾಂಸ್ಕೃತಿಕ ಸಂಭ್ರಮ

ಕರ್ನಾಟಕ ಸಂಘದಲ್ಲಿ ನಾಡ ಹಬ್ಬ ಸಾಂಸ್ಕೃತಿಕ ಸಂಭ್ರಮ

ರಾಣೇಬೆನ್ನೂರು:ಸ್ಟೇಷನ್ ರಸ್ತೆಯಲ್ಲಿರುವ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ, 2023 ನೇ ಸಾಲಿನ  ಸಾಂಸ್ಕೃತಿಕ ಸಂಭ್ರಮದ ನಾಡ ಹಬ್ಬ ಕಾರ್ಯಕ್ರಮಗಳು ಜರುಗಲಿವೆ.ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅವರು ಪ್ರಕಟಣೆಲ್ಲಿ ತಿಳಿಸಿದ್ದಾರೆ.   

ಅಕ್ಟೋಬರ್ 15ರಿಂದ ಪ್ರಾರಂಭವಾಗುವ ನಾಡ ಹಬ್ಬದ ಕಾರ್ಯಕ್ರಮವು ನಿತ್ಯ ಸಂಜೆ 6-30 ಪ್ರಾರಂಭವಾಗಲಿದ್ದು, ವಾರಗಳ ಕಾಲ ನಡೆಯಲಿದೆ. ಅಂಕಣಕಾರ- ರೋಹಿತ್ ಚಕ್ರವರ್ತಿ ಉದ್ಘಾಟಿಸಿ ರಾಷ್ಟ್ರೀಯ  ಶಿಕ್ಷಣ - ಇಂದಿನ ಅನಿವಾರ್ಯ ಅವಶ್ಯಕತೆ. ವಿಷಯವಾಗಿ ಉಪನ್ಯಾಸ ನೀಡುವರು. ಬ್ಯಾಡಗಿಯ ಪ್ರಾಧ್ಯಾಪಕ ಡಾ: ಎಸ್‌. ಜಿ. ವೈದ್ಯ ಅತಿಥಿಗಳಾಗಿದ್ದಾರೆ. ಎರಡನೇ ದಿವಸ :- ಬೆಂಗಳೂರಿನ ವಸುದೇಂದ್ರ ವೈದ್ಯ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ. ಡಾ: ವೆಂಕಟೇಶ್ ಎಚ್ ಬಸವರಾಜ ಪಾಟೀಲ ಅತಿಥಿಗಳು. ದಿವಸ 3,- ಬೆಂಗಳೂರಿನ ಕಡಬ ಶ್ರೀನಿವಾಸ ಅವರಿಂದ ಹಾಸ್ಯ ಜಾದು. ಅತಿಥಿಗಳಾಗಿ ಬಿ.ಎಸ್‌. ಗೌಡರ ಹಾಗೂ ಜಿ.ಜಿ.ಹಟ್ಟಿಗೌಡ್ರ ಪಾಲ್ಗೊಳ್ಳುವರು.4, ನೇದಿನ :- ದೇವರ ಹುಬ್ಬಳ್ಳಿಯ ಮಲ್ಲಪ್ಪ ಹೊಂಗಲ್ ಅವರಿಂದ ಹಾಸ್ಯ ಸಂಜೆ. ಪ್ರಭು ಹಲಗೇರಿ, ಲಕ್ಷ್ಮಣ್ ಕೆಂಗೊಂಡ, ಅತಿಥಿಗಳು.  ದಿನ,5:- ತಾಯಿಯಾಗುವುದೆಂದರೆ- ಏಕ-ವ್ಯಕ್ತಿ ನಾಟಕ ಹಾಸನದ ಶ್ರೀಮತಿ ಸೂಜಾ ರಘುನಂದನ್ ಅವರಿಂದ. ಅತಿಥಿಗಳಾಗಿ ಲಕ್ಷ್ಮಿ ಅಡಿಕೆ- ವೀರೇಶ  ಮಕರಿ. 20- ರಂದು ಶುಕ್ರವಾರ ಶಿಗ್ಗಾವಿಯ ಎಸ್‌ಎಸ್ ಹಿರೇಮಠ ತಂಡದವರಿಂದ ಜಾನಪದ ಸಂಜೆ. ಶಿವಾನಂದ ಹಂಚಿನಾಳ- ಹನುಮಂತಪ್ಪ ಮುಕ್ತೇನಹಳ್ಳಿ, ಅತಿಥಿಗಳು. 6ನೇ ದಿವಸ- ಶನಿವಾರ ಶ್ರೀ ಮಹಾಗಣಪತಿ ಯಕ್ಷ ಕಲಾ ವೃಂದದವರಿಂದ " ಶರಸೇತು ಬಂಧನ", ಪೌರಾಣಿಕ ಯಕ್ಷಗಾನ ಪ್ರದರ್ಶನ. ರತ್ನಾಕರ ಕುಂದಾಪುರ ಶ್ರೀನಿವಾಸ ಕಾಕಿ, ಅತಿಥಿಗಳು. ದಿನಾಂಕ 22- ಮಮತಾ ನಾಡಿಗೇರ ಸಂಗಡಿಗರಿಂದ, ಶಾಸ್ತ್ರೀಯ ನೃತ್ಯ ಕಾರ್ಯಕ್ರಮ. ಡಾ: ಅಭಿನಂದನ ಸಾವಕಾರ- ಷಣ್ಮುಖ ಕೋಟೂರ ಅತಿಥಿಗಳು. 23 ರಂದು ಸೋಮವಾರ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯ ಸುಶಾಂತ ಡ್ಯಾನ್ಸ್‌ ಅಕಾಡೆಮಿ ಅವರಿಂದ ಪಾಶ್ಚಿಮಾತ್ಯ  ಶೈಲಿಯ ನೃತ್ಯ. ವೇದಮೂರ್ತಿ ಎಸ್‌.ಟಿ. ಹಾಗೂ ರಮೇಶ ಎಳೆಹೊಳೆ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು. 


ಸುದ್ದಿ ಓದಿ