ಇಂಡಿ

ಎನ್‌ಎಸ್‌ಎಸ್ ದಿನಾಚರಣೆ ಕಾರ್ಯಕ್ರಮ

ಎನ್‌ಎಸ್‌ಎಸ್ ದಿನಾಚರಣೆ ಕಾರ್ಯಕ್ರಮ

ಇಂಡಿ: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಜಿ.ಆರ್‌. ಗಾಂಧಿ ಕಲಾ, ವಾಯ್‌.ಎ. ಪಾಟೀಲ ವಾಣಿಜ್ಯ ಹಾಗೂ ಎಮ್‌ಎಫ್ ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಎನ್‌ಎಸ್‌ಎಸ್ ದಿನಾಚರಣೆ ಕಾರ್ಯಕ್ರಮ ಜರುಗಿತು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಝಳಕಿಯ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಪಿ.ಬಿ. ಬಿರಾದಾರ  ಅವರು ಮಾತನಾಡಿ, ಎನ್‌.ಎಸ್‌.ಎಸ್‌ನ ಘೋಷವಾಕ್ಯ ‘ನನಗಾಗಿ ಅಲ್ಲ, ನಿನಗೆ’ ಎಂಬುದಾಗಿದೆ. ಈ ವಾಕ್ಯ ನಿಸ್ವಾರ್ಥ ಸೇವೆಯ ಮಹತ್ವವನ್ನು ಮತ್ತು ಪ್ರಜಾಪ್ರಭುತ್ವದಲ್ಲಿ ಸಹಬಾಳ್ವೆ ಮತ್ತು ಸಹೋದರತೆಯ ಮಹತ್ವವನ್ನು ಸಾರಿಹೇಳುತ್ತದೆ. ಈ ವಾಕ್ಯ ಮನುಷ್ಯ ಮನುಷ್ಯನಿಗೆ ಸಹಾಯ ಮಾಡಿ ಪರಸ್ಪರ ನಂಬಿಕೆ, ವಿಶ್ವಾಸ, ಹೊಂದಾಣಿಕೆಯಿಂದ ಸಹಬಾಳ್ವೆಯ ಜೀವನ ಸಡೆಸಬೇಕೆಂದು ಪ್ರತಿಪಾದಿಸುತ್ತದೆ. ಅಲ್ಲದೆ ವೈಯಕ್ತಿಕ ಹಿತಾಸಕ್ತಿ, ಸಮಾಜದ ಹಿತಾಸಕ್ತಿಯನ್ನು ಅವಲಂಬಿಸಿರುತ್ತದೆ. ‘ಸ್ವಂತಕ್ಕೆ ಸ್ವಲ್ಪ  ಮತ್ತು ಸಮಾಜಕ್ಕೆ ಸರ್ವಸ್ವ’ ಎಂಬ ಸಂದೇಶದೊಂದಿಗೆ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯ ಸದುದ್ದೇಶವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಸೇವಾಯೋಜನೆಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಆ ಮೂಲಕ ರಾಷ್ಟ್ರದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ವಿಕಸನ ಉಂಟಾಗುತ್ತದೆ.’ ಎಂದು ಹೇಳಿದರು. 

 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್‌.ಬಿ. ಜಾಧವ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಧ್ಯೇಯವೆಂದರೆ ಮಕ್ಕಳು ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವುದರ ಜೊತೆಗೆ ಸಮುದಾಯದ ಜನರೊಂದಿಗೆ ಬೆರೆತು, ಅವರ ನೋವು, ನಲಿವು, ಸುಖ-ದಃಖ, ಕಷ್ಟ-ಕಾರ​‍್ಪಣಯಗಳಲ್ಲಿ ಪಾಲ್ಗೊಳ್ಳುವುದಾಗಿದೆ ಎಂದು ಹೇಳಿದರು. 

 

ಕಾರ‌್ಯಕ್ರಮದ ನಿರ್ವಹಣೆಯನ್ನು ಎನ್‌ಎಸ್‌ಎಸ್ ವಿದ್ಯಾರ್ಥಿಯಾದ ಮಲ್ಲಿಕಾರ್ಜುನ ತೊಂಟಾಪುರ, ಸ್ವಾಗತ ಮತ್ತು ಪರಿಚಯವನ್ನು ಎನ್‌.ಎಸ್‌.ಎಸ್ ಕಾರ್ಯಕ್ರಮ ಅಧಿಕಾರಿಯಾದ ಡಾ.ವಿಶ್ವಾಸ ಕೋರವಾರ, ವಂದನಾರೆ​‍್ಣಯನ್ನು ಎನ್‌.ಎಸ್‌.ಎಸ್ ವಿದ್ಯಾರ್ಥಿನಿಯಾದ ಸೋನಾಲಿ ಗೋಡಕೆ ನಿರ್ವಹಿಸಿದರು.  

ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಜಯಪ್ರಸಾದ ಡಿ. ಉಪಸ್ಥಿತರಿದ್ದರು.  

ಕಾರ‌್ಯಕ್ರಮದಲ್ಲಿ ಡಾ. ಆನಂದ ನಡುವಿನಮನಿ, ಡಾ. ಸುರೇಂದ್ರ ಕೆ, ಡಾ. ಸಿ.ಎಸ್‌. ಬಿರಾದಾರ, ಡಾ. ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ರಾಘವೇಂದ್ರ ಇಂಗನಾಳ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.  

25 ಇಂಡಿ 6: 

ಇಂಡಿ: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಎನ್‌.ಎಸ್‌.ಎಸ್ ದಿನಾಚರಣೆ ಕಾರ‌್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕ ಪ್ರೊ. ಪಿ.ಬಿ. ಬಿರಾದಾರ ಉದ್ಘಾಟಿಸಿದರು. 


ಸುದ್ದಿ ಓದಿ