ವಕೀಲರ ನ್ಯಾಯಯುತ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲ: ಶಾಸಕ ಕಾಗೆ
ವಕೀಲರ ನ್ಯಾಯಯುತ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲ: ಶಾಸಕ ಕಾಗೆ
ಕಾಗವಾಡ 13: ವಕೀಲರ ಬೇಡಿಕೆ ನ್ಯಾಯಯುತವಾಗಿದ್ದು, ಅವರ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿರುತ್ತದೆ. ಅದರೇ ಸರ್ಕಾರದ ಮಟ್ಟದಲ್ಲಾಗಬೇಕಾದ ಕಾರ್ಯಗಳಿಗೆ ಮುಷ್ಕರ ಒಂದೇ ಪರಿಹಾರವಲ್ಲ. ನಿಮ್ಮ ಬೇಡಿಕೆಗೆ ಸರ್ಕಾರ ಮಟ್ಟದಲ್ಲಿ ಮುಖ್ಯಮಂತ್ರಿಗಳಿಗೆ, ಕಾನೂನು ಸಚಿವರಿಗೆ ಮತ್ತು ಎಪಿಎಂಸಿ ಸಚಿವರ ಗಮನಕ್ಕೆ ತಂದು ಸ್ಥಳ ಒದಗಿಸುವಲ್ಲಿ ಶ್ರಮಿಸುವುದಾಗಿ ಶಾಸಕ ರಾಜು ಕಾಗೆ ಹೇಳಿದರು.ಅವರು ಬುಧವಾರ ದಿ. 13 ರಂದು ಪಟ್ಟಣದಲ್ಲಿ ತಾಲೂಕಾ ವಕೀಲರ ಸಂಘದ ವತಿಯಂದ ನಡೆಯುತ್ತಿರುವ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡುತ್ತಿದ್ದರು. ಸರ್ಕಾರ ಎಪಿಎಂಸಿಗೆ ಸ್ಥಳ ನೀಡಿದೆ. ಅದು ಎಪಿಎಂಸಿಗೆ ಅವಶ್ಯಕತೆ ಇರುವುದಿಲ್ಲ. ಕಳೆದ ಅನೇಕ ವರ್ಷಗಳಿಂದ ಅದು ಖಾಲಿ ಬಿದ್ದಿದೆ. ಈಗ ಅದನ್ನು ಸರ್ಕಾರವೇ ಜಿಲ್ಲಾಧಿಕಾರಿಗಳ ಮೂಲಕ ಎಪಿಎಂಸಿಯಿಂದ ವಾಪಸ್ಸ ಪಡೆದು, ನ್ಯಾಯಾಲಯ ಕಟ್ಟಡಕ್ಕೆ ನೀಡಬೇಕು. ಇದನ್ನು ಆದಷ್ಟು ಬೇಗನೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಾವು ತಿಳಿಸುವುದಾಗಿ ಭರವಸೆ ನೀಡಿದರು.
ಆದರೇ ವಕೀಲರು ಮಾತ್ರ ಜಿಲ್ಲಾಧಿಕಾರಿಗಳೇ ಇಲ್ಲಿಗೆ ಬಂದು ಲಿಖಿತ ರೂಪದಲ್ಲಿ ಭರವಸೆ ನೀಡಿದಾಗ ಮಾತ್ರ ನಾವು ಮುಷ್ಕರ ಹಿಂಪಡೆಯುತ್ತೇವೆ. ಅಲ್ಲಿಯ ವರೆಗೆ ಹೋರಾಟವನ್ನು ಇನ್ನಷ್ಟು ತೀವೃಗೊಳಿಸುತ್ತೇವೆ ಎಂದು ಪಟ್ಟು ಹಿಡಿದು, ಮುಷ್ಕರ ಮುಂದುವರೆಸಿದ್ದಾರೆ.ಇನ್ನೂ ವಕೀಲರ ಮುಷ್ಕರಕ್ಕ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳು, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ಸದಸ್ಯರುಗಳಿಂದ ಬೆಂಬಲ ವ್ಯಕ್ತಗಾಗುತ್ತಿದ್ದು, ವಕೀಲರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.
ಮುಖಂಡರಾದ ಜ್ಯೋತಿಕುಮಾರ ಪಾಟೀಲ, ರಮೇಶ ಚೌಗುಲೆ, ಚಿದಾನಂದ ಅವಟಿ, ಕಾಕಾ ಪಾಟೀಲ, ಶಾಂತಿನಾಥ ಕರವ, ಕಾಕಾಸಾಬ ಪಾಟೀಲ, ಉಮೇಶ ಪಾಟೀಲ, ಸಂಜಯ ತಳವಳಕರ, ವಿಜಯ ಅಕಿವಾಟೆ, ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ, ಉಪಾಧ್ಯಕ್ಷ ಬಿ.ಎ. ಮಗದುಮ್ಮ, ಹಿರಿಯ ವಕೀಲರಾದ ಅಭಯಕುಮಾರ ಅಕಿವಾಟೆ, ಬಾಬಾಸಾಬ ಗಣೆ, ಅರವಿಂದ ಭಂಡಾರೆ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.