ಕಾಗವಾಡ

ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ: ಶಾಸಕ ರಮೇಶ

ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ: ಶಾಸಕ ರಮೇಶ

ಲೋಕದರ್ಶನ ವರದಿ 


ಕಾಗವಾಡ 18: ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಹಾಗೂ ವಿವೇಕರಾವ್ ಪಾಟೀಲ ಅವರ ಗೆಲುವಿಗೆ ಶ್ರಮಿಸಿದ್ದೆ, ಈಗ ನಾನು ಅಧಿಕೃತವಾಗಿ ಬಿಜೆಪಿಯಲ್ಲಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನನ್ನ ಗುರಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರು ಗ್ರಾಮ ಪಂಚಾಯತ್ ಸದಸ್ಯರನ್ನುದ್ದೇಶಿಸಿ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದರು. 

 ಅವರು ಗುರುವಾರ ರಂದು ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಬಿಜೆಪಿ ಪಕ್ಷದ ಮುಖಂಡ ಶೀತಲಗೌಡ ಪಾಟೀಲರ ಜನಸಂಪರ್ಕ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರನ್ನುದೇಶಿಸಿ ಮಾತನಾಡುತ್ತಿದ್ದರು. 

 ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ಮಹಾಂತೇಶ ಕವಟಗಿಮಠ ಇವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿದೆ. ಎರಡನೇ ಅಭ್ಯರ್ಥಿಯಾಗಿ ಪಕ್ಷ ಇನ್ನೂ ಘೋಷಣೆ ಮಾಡಿಲ್ಲ. ಎರಡು ದಿನಗಳಲ್ಲಿ ಪಕ್ಷದ ವರಿಷ್ಠರು ನಿರ್ಣಯ ಕೈಗೊಳ್ಳಲಿದ್ದಾರೆ. ನನ್ನಸಹೋದರ ಲಖನ ಜಾರಕಿಹೊಳಿ ಇವರನ್ನು ಅಭ್ಯರ್ಥಿಯನ್ನಾಗಿ ಮಾಡಲು ನಿರ್ಣಯ ಕೈಗೊಂಡಿದ್ದೇವೆ. ಗ್ರಾಮ ಪಂಚಾಯತ್ ಸದಸ್ಯರು ಎರಡು ಮತಗಳನ್ನು ಚಲಾಯಿಸಿ ವಿಧಾನ ಪರಿಷತ್ತಿಗೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದ ರಮೇಶ ಜಾರಕಿಹೊಳಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಧ್ಯೇಯ ನನ್ನದಾಗಿದೆ ಎಂದರು. 

  ಬಿಜೆಪಿ ಮುಖಂಡ ಶೀತಲಗೌಡ ಪಾಟೀಲ ಮಾತನಾಡಿ ಉಗಾರ ಬಿಕೆ ಗ್ರಾಮದಲ್ಲಿ 26 ಗ್ರಾಮ ಪಂಚಾಯತ್ ಸದಸ್ಯರಿದ್ದು ತಾವು ಸೂಚಿಸಿದ ಅಭ್ಯರ್ಥಿಯ ಪರ ಮತ ಚಲಾಯಿಸುವ ಭರವಸೆ ನೀಡಿದರು. ಅಪ್ಪಾಸಾಬ ಚೌಗುಲೆ, ಪ್ರಮೋದ ಹೊಸುರೆ, ಮನೋಜ ಕುಸನಾಳೆ, ವಿಜಯ ಶಿಂಧೆ, ವಿನಾಯಕ ಶಿಂಧೆ, ಸೇರಿದಂತೆ ಅನೇಕರು ಇದ್ದರು. 

  ನನ್ನದು ರಮೇಶ ಜಾರಕಿಹೊಳಿ ಪಕ್ಷ;- ಅರಿಹಂತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಹಾಗೂ ಬೋರಗಾಂವ ಗ್ರಾಮದ ಉತ್ತಮ ಪಾಟೀಲರನನ್ನು ಪತ್ರಕರ್ತರು ತಾವು ಯಾವ ಪಕ್ಷದ ನಾಯಕರು ಎಂದು ಪ್ರಶ್ನಿಸಿದಾಗ, ನಾನು ರಮೇಶ ಜಾರಕಿಹೊಳಿ ಸಾಹುಕಾರರ ಪಕ್ಷ. ಅವರು ಎಲ್ಲಿ ಇರುತ್ತಾರೋ ನಾನು ಅಲ್ಲಿ ಇರುತ್ತೇನೆ ಎಂದು ಆಶ್ಚರ್ಯಕರ ಹೇಳಿಕೆ ನೀಡಿದರು.  

 ದೇವರಾಣೆಗೂ ನನಗೆಬಿಟ್ ಕ್ವಾಯಿನ್ ಎಂದರೆ ಗೊತ್ತಿಲ್ಲ;- 

ಮಾಧ್ಯದವರು ಶಾಸಕ ರಮೇಶ ಜಾರಕಿಹೊಳಿಯವರನ್ನು ಬಿಟ್ ಕ್ವಾಯಿನ್ ಆರೋಪದ ಬಗ್ಗೆ ಕೇಳಿದಾಗ ದೇವರಾಣೆಗೂ ನನಗೆ ಈಗಲೂ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡರು. 


ಸುದ್ದಿ ಓದಿ