ರಾಣೆಬೆನ್ನೂರ

ಪರಸ್ಪರ ಪ್ರೀತಿ- ವಿಶ್ವಾಸ ಹೊಂದಾಣಿಕೆ ಅಗತ್ಯ: ಸುಭಾಶ

ಪರಸ್ಪರ ಪ್ರೀತಿ- ವಿಶ್ವಾಸ ಹೊಂದಾಣಿಕೆ ಅಗತ್ಯ: ಸುಭಾಶ

ರಾಣೇಬೆನ್ನೂರು 01:  ಸಮಾಜದಲ್ಲಿ ಬದುಕಿ ಬಾಳುವ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಭಾವೈಕ್ಯತೆಯ ಬದುಕು ಸಾಗಿಸುವಂತಹದಾಗ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ರಾಣೇಬೆನ್ನೂರು ತಾಲೂಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಶ ಸಾಹುಕಾರ್ ಹೇಳಿದರು.        

ಅವರು ನಗರ   ಹೊರ ವಲಯ, ಆರ್‌. ಟಿ. ಇ.ಎಸ್ ಕಾಲೇಜು ಭವನದಲ್ಲಿ ಕಲಾ ವಾಣಿಜ್ಯ ವಿಜ್ಞಾನ ಕಾನೂನು ಮಹಾ ವಿದ್ಯಾಲಯ ಜಿಲ್ಲಾ ನೆಹರು ಯುವ ಕೇಂದ್ರ, ಕಾಲೇಜು ಐಕ್ಯೂಎ ಸಿ, ರಾಷ್ಟ್ರೀಯ ಸೇವಾ  ಯೋಜನಾ ಘಟಕ ಆಯೋಜಿಸಿದ್ದ,2024- ನೆರೆ ಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಬಡವರು, ಬಲ್ಲಿದರು ಇಂದು  ಸಮಾನತೆಯಿಂದ ಬದುಕನ್ನು ಸಾಧಿಸುವಲ್ಲಿ ಮುಂದಾಗಿದ್ದಾರೆ. ಅದಕ್ಕೆ ಯಾವುದೇ ಜಾತಿ ಮತ ಭೇದ ಭಾವ ಕಾಣದೆ ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಭಾರತದ ಭದ್ರತೆಗಾಗಿ ಪಣತೊಡಬೇಕಾದ ಇಂದಿನ ಅಗತ್ಯವಿದೆ ಎಂದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತಾ ಕೋಟಿ ಅವರು ಮಹಿಳಾ ಸಬಲೀಕರಣ ಹಾಗೂ ನಾರಿ ಶಕ್ತಿ ಯೋಜನೆ ಮತ್ತು ಅದರ ಮಹತ್ವ ಕುರಿತು ಉಪನ್ಯಾಸ ನೀಡಿದರು. ನೆಹರು ಯುವ ಕೇಂದ್ರದ ನಿರ್ದೇಶಕಿ ಲತಾ ಬಿ. ಹೆಚ್ ಅವರು ಮೈ ಬಾರತ್ ಪೋರ್ಟಲ್ ನೋಂದಣಿ ವಿಷಯವಾಗಿ ಮಾಹಿತಿ ನೀಡಿದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಅವರು  ಯುವ ಸಂಸತ್ತು ಉದ್ದೇಶಿತ ಯೋಜನೆ  ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀವನ ಕೌಶಲ್ಯ ಮತ್ತುರಿ ಗ್ರಾಮೀಣಾಭಿವೃದ್ಧಿಯಲ್ಲಿ ಯುವಜನತೆ ವಿಷಯವಾಗಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ್ ಬಡಿಗೇರ್ ಅವರು ಉಪನ್ಯಾಸ ನೀಡಿದರು.        

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ: ಸರಸ್ವತಿ ಹೆಚ್ ಬಮ್ಮನಾಳ ಅವರು ಪ್ರಧಾನ ಮಂತ್ರಿಗಳು ಕಂಡ ಕನಸಿನ ಭಾರತ ವಿಷಯ ಕುರಿತು ಮಾತನಾಡಿದರು.      ಕಾಲೇಜು ಪ್ರಾಚಾರ್ಯ ಸಿ.ಎ. ಹರಿಹರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೊಟ್ರೇಶ್ ಬಸಾಪುರ, ನೆಹರು ಯುವ ಕೇಂದ್ರದ ಹೆಮಗಿರಿ ಅಂಗಡಿ ಅವರು ಕ್ರೀಡಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ರೇಖಾ ಜಾದವ ಸಂಗಡಿಗರು  ಪ್ರಾರ್ಥಿಸಿದರು. ದೀಪಾ ಕೆ.ವಿ. ಸ್ವಾಗತಿಸಿ, ನಿರೂಪಿಸಿದರು.     ಡಾ ಪಿ.ಬಿ ಕೊಪ್ಪದ ವಂದಿಸಿದರು. ಐಕ್ಯೂಎಸಿ ಸಂಯೋಜಕ ಡಾ: ಮಧುಕುಮಾರ ಆರ್, ಅಂಜನಾ ಪವಾರ ಹಾಗೂ ಪದವಿ, ಶಿಕ್ಷಣ ಕಾನೂನು ಮಹಾವಿದ್ಯಾಲಯದ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ನೆಹರು ಯುವ ಕೇಂದ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ