ಗುಳೇಗುಡ್ಡ

ಪತ್ತಾರಗೆ ಸಂಗೀತ ಬ್ರಹ್ಮ ಪ್ರಶಸ್ತಿ

ಪತ್ತಾರಗೆ ಸಂಗೀತ ಬ್ರಹ್ಮ ಪ್ರಶಸ್ತಿ

ಗುಳೇದಗಡ್ಡ 12: ಪಟ್ಟಣದ ಸಂಗೀತ ವಿದ್ವಾನ, ಹಿರಿಯ ಪತ್ರಕರ್ತ ಅಖಂಡೇಶ್ವರ ಪತ್ತಾರ ಅವರಿಗೆ ಪ್ರತಿಷ್ಠಿತರ ಸಂಗೀತ ಬ್ರಹ್ಮ ಪ್ರಶಸ್ತಿ ಲಭಿಸಿದೆ. 

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ತಿಳಗೋಳ ಗ್ರಾಮದ ಶಕ್ತಿಪೀಠ ಬ್ರಹ್ಮ ವಿದ್ಯಾಶ್ರಮದ ವತಿಯಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಸಂಗೀತ ಬ್ರಹ್ಮ ಪ್ರಶಸ್ತಿಗೆ ಈ ವರ್ಷ ಗುಳೇದಗುಡ್ಡ ಪಟ್ಟಣದ ಹಿಂದುಸ್ಥಾನಿ ಗಾಯಕ ಹಾಗೂ ಗಾನಯೋಗಿ ಪಂಚಾಕ್ಷರಿ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಅಖಂಡೇಶ್ವರ ಪತ್ತಾರ ಅವರನ್ನು ಆಯ್ಕೆ ಮಾಡಿದ್ದಾರೆ 

ಸಂಗೀತ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಪತ್ರಕರ್ತ ಸಂಗೀತ ಸಾಧಕ ಅಖಂಡೇಶ್ವರ ಪತ್ತಾರ ಅವರ ಅವಿರತ ಸಂಗೀತ ಸಾಧನೆ ಪರಿಗಣಿಸಿ ಅವರನ್ನು ಈ ಪ್ರತಿಷ್ಠಿತ ಸಂಗೀತ ಬ್ರಹ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸುದ್ದಿ ಓದಿ