ಜಮಖಂಡಿ

ನಂದಿ ಮಹಾರಾಜನ ಕೊಲೆ ಹಂತಕರನ್ನು ಗಲ್ಲಿಗೇರಿಸಿ: ಮುತ್ಯಾ

ನಂದಿ ಮಹಾರಾಜನ ಕೊಲೆ ಹಂತಕರನ್ನು ಗಲ್ಲಿಗೇರಿಸಿ: ಮುತ್ಯಾ

ಲೋಕದರ್ಶನ ವರದಿ,

ಜಮಖಂಡಿ10: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಸಮಾಜ ತಲೆ ತಗ್ಗುಸುವಂತೆ ಮಾಡಿದೆ ಅದನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ, ಸರ್ಕಾರ ಕೂಡಲೇ ಎಚ್ಚರ ವಹಿಸಿ ಕ್ರಮ ತೆಗೆದುಕೊಳ್ಳಬೇಕು, ಕೊಲೆ ಮಾಡಿದವರನ್ನು ಗಲ್ಲಿಗೆರಿಸಬೇಕು ಎಂದು ಆಲಗೂರ ಧರಿದೇವರ ಮಠದ ಲಕ್ಷ್ಮಣ ಮುತ್ಯಾ  ತಿಳಿಸಿದ್ದಾರೆ.

ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶ್ರೀಗಳಿಗೆ ಇಂತಹ ಪರಿಸ್ಥಿತಿ ಬಂದಿರುವದು ನಮ್ನ ಸಮಾಜದಲ್ಲಿ ಮೊದಲನೆಯ ಘಟನೆಯಾಗಿದೆ. ಎಲ್ಲ ಸ್ವಾಮಿಗಳು, ಮತ್ತು ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು, ಸಮಾಜದಲ್ಲಿ ಇಂತಹ ಘಟನೆ ಮರುಕಳಿಸಬಾರದು, ಸಮಾಜ ಸೇವೆ ಮಾಡುವವರ ಕಷ್ಟ, ಸುಖಗಳನ್ನು ಸರ್ಕಾರ ನೋಡಬೇಕು ಎಂದು ಒತ್ತಾಯಿಸಿದರು.

ಈ ಕೊಲೆ ಪ್ರಕರಣದ ತನಿಖೆ ಸಿಬಿಐ ಮೂಲಕ ಪಾರದರ್ಶಕವಾಗಿ ತನಿಖೆ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ, ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಸುದ್ದಿ ಓದಿ