ಮುರಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮನೆಗಳ್ಳನ ಬಂಧನ
ಯರಗಟ್ಟಿ 20: ಯರಗಟ್ಟಿ ಮತ್ತು ಸಮೀಪದ ಬೂದಿಗೊಪ್ಪ ಗ್ರಾಮದ ಮನೆಗಳಲ್ಲಿ ಕಳ್ಳತನ ಮಾಡಿರುವ ಆರೋಪಿಯನ್ನು ಸೋಮವಾರ ರಾತ್ರಿ ಪೊಲೀಸರು ಯರಗಟ್ಟಿಯಲ್ಲಿ ಬಂಧಿಸಿದ್ದಾರೆ.
ಪಟ್ಟಣದ ಮುನಾವರಲಿ ಹಣಬರಹಟ್ಟಿ ಎಂಬುವರ ಮನೆ ಬಾಗಿಲು ಮುರಿದು 15 ಸಾವಿರ ನಗದು ಹಾಗೂ ಬಂಗಾರದ ಮಂಗಳಸೂತ್ರ, ಕಿವಿ ಓಲೆ ಕಳ್ಳತನ, ಬೂದಿಕೊಪ್ಪ ಗ್ರಾಮದ ಫಕೀರ್ಪ ತೆನಗಿ ಅವರ ಮನೆಯಲ್ಲಿ 25 ಸಾವಿರ ನಗದು ಮತ್ತು ಬಂಗಾರದ ಚೈನ್, ಸರ, ತಾಯತ ಕಳ್ಳತನ ಹಾಗೂ ಅದೆ ಗ್ರಾಮದ ಮಹಾದೇವ ದಂಡೈನವರ ಎಂಬುವರ ಮನೆಯಲ್ಲಿ ಬಂಗಾರದ ಸರ, ಜುಮಕಿ, ಬುಗಡಿ, ತಾಲೂಕ, ರಿಂಗ್, ಮತ್ತು ಬೆಳ್ಳಿಯ ಕಾಲಚೈನ ಮತ್ತು ರಿಂಗ್ ಕಳ್ಳತನ ಮಾಡಿದ್ದಾನೆ.
ಈ ಪೈಕಿ ಆರೋಪಿಯಿಂದ ಒಟ್ಟು 60 ಗ್ರಾಮ ಬಂಗಾರ, 210ಗ್ರಾಂ ತೂಕದ ಬೆಳ್ಳಿ, ಹಾಗೂ 8300 ರೂಪಾಯಿ ನಗದು ಮತ್ತು ಕಬ್ಬಿಣದ ಸಣ್ಣ ಚಕ್ಕಡಿಯನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಡಿ.ಎಸ್.ಪಿ. ರಾಮನಗೌಡ ಹಟ್ಟಿ ಸಿ.ಪಿ.ಐ ಮೌನೇಶ್ವರ ಮಾಲಿಪಾಟೀಲ, ಮುರಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಕೆ. ಬಿ. ಅಲಗರಾವುತ, ವಿ. ಡಿ. ಸಕ್ರಿ, ಎಮ್. ಬಿ. ಸಣ್ಣನಾಯ್ಕ, ಎ. ವಿ. ಜೊತೆನ್ನವರ, ಬಿ. ಎಸ್. ಅಂತರಗಟ್ಟಿ, ಐ. ಎಸ್. ವಕ್ಕುಂದ, ಎಸ್. ಎಮ್. ಜವಳಿ, ಆರ್. ಬಿ. ಸಸಾಲಟ್ಟಿ, ಎಮ್. ಎಸ್. ಅವರಾದಿ ಮತ್ತು ಎಚ್. ಆರ್. ನ್ಯಾಮಗೌಡ್ರ ಇವರ ತಂಡ ಈ 03 ಪ್ರಕರಣಗಳನ್ನು ಪತ್ತೆ ಮಾಡಿದ್ದು ಈ ತಂಡದಲ್ಲಿ ಇರುವ ಅಧಿಕಾರಿಗಳಿಗೆ ಹಾಗೂ ಎಲ್ಲ ಸಿಬ್ಬಂದಿ ಬೆಳಗಾವಿ ಎಸ್. ಪಿ. ಡಾ. ಸಂಜೀವ ಪಾಟೀಲ ಮತ್ತು ಹೆಚ್ಚುವರಿ ಎಸ್. ಪಿ ಬೆಳಗಾವಿ ಅವರು ಶ್ಲಾಘಿಸಿದ್ದಾರೆ.
ಪಟ್ಟಣಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ
ಯರಗಟ್ಟಿ: ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು ಜು.21 ರಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ. ಯರಗಟ್ಟಿ ಪಟ್ಟಣದ ಪೊಲೀಸ್ ಕಾರ್ಯಾಲಯದ ವೀಕ್ಷಣೆಗೆಂದು ಆಗಮಿಸುತ್ತಿರುವ ಅಲೋಕ್ ಕುಮಾರ್ ಅವರು ಅಂದು ಬೆಳಿಗ್ಗೆ ಯರಗಟ್ಟಿ ಉಪ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಸಭೆ ನಡೆಸುವರು. ನಂತರ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸುವುದರ ಜೊತೆಗೆ ಪೊಲೀಸ್ ವ್ಯವಸ್ಥೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ತಮ್ಮ ಸಲಹೆ, ಸೂಚನೆಗಳನ್ನು ನೀಡಬಹುದು ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ ತಿಳಿಸಿದ್ದಾರೆ.