ಕಾಗವಾಡ

ಉಗಾರ ಖುರ್ದ ಪುರಸಭೆ: ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ

ಉಗಾರ ಖುರ್ದ ಪುರಸಭೆ: ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಹಣಾಹಣಿ

ಲೋಕದರ್ಶನ ವರದಿ 


ಕಾಗವಾಡ 22: ಉಗಾರ ಖುರ್ದ ಪುರಸಭೆಯ 23 ಸ್ಥಾನಕ್ಕಾಗಿ 69 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳಲ್ಲಿ ನೇರ ಹಣಾಹಣಿ ತುರಿಶಿನಿಂದ ಪ್ರಾರಂಭಗೊಂಡಿದೆ. ಬಿಜೆಪಿ ಪಕ್ಷದ ಯುವನಾಯಕ ಶ್ರೀನಿವಾಸ ಶ್ರೀಮಂತ ಪಾಟೀಲ ಠಿಕಾಣಿ ಹೂಡಿ ಮನೆ ಮನೆಗೆ ತೆರಳಿ ಮತಯಾಚನೆಗೆ ಮುಂದಾಗಿದ್ದಾರೆ. 

ತಾಲೂಕಿನಲ್ಲಿ ಸುಮಾರು 25ಸಾವಿರ ಜನಸಂಖ್ಯೆ ಹೊಂದಿರುವ ಉಗಾರ ಖುರ್ದ ಪಟ್ಟಣ ಫರೀದಖನವಾಡಿ, ವಿನಾಯಕವಾಡಿ ಒಳಗೊಂಡು 23 ಪುರಸಭೆ ಸದಸ್ಯರ ಅತಿದೊಡ್ಡ ಪಟ್ಟಣವಾಗಿದೆ. 

ಕಳೆದ ಪುರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತವಿರಲಿಲ್ಲ. ಇದರಿಂದ ಕೇವಲ ಹೊಂದಾಣಿಕೆ ರಾಜಕಾರಣ ಮಾಡಲಾಗಿತ್ತು. ಆದರೆ, ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಜು ಕಾಗೆ ತಮ್ಮ ಎಲ್ಲ ಶಕ್ತಿ ಉಗಾರ ಪಟ್ಟಣದ ಮೇಲೆ ಕೇಂದ್ರಿಕೃತ ಮಾಡಿದ್ದು, ಪ್ರಚಾರದಲ್ಲಿ ಧುಮಕಿದ್ದಾರೆ. ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. 

ಬಿಜೆಪಿಯ ಶ್ರೀನಿವಾಸ ಶ್ರೀಮಂತ ಪಾಟೀಲ ಇವರು ಸ್ವತಂತ್ರ ಪ್ರಚಾರ ಕಾರ್ಯಾಲಯ ಸ್ಥಾಪಿಸಿ ಅವರ ಕಾರ್ಯಕರ್ತರನ್ನು ಪ್ರಚಾರದಲ್ಲಿ ತೊಡಗಿಸಿದ್ದಾರೆ. ಸೋಮವಾರ ದಿ. 20ರಂದು ಚುನಾವಣೆ ಪ್ರಚಾರ ರಾ​‍್ಯಲಿ ಕೈಗೊಂಡು ಶಕ್ತಿ ಪ್ರದರ್ಶನ ಮಾಡಿದರು. ಅವರೊಂದಿಗೆ ಕಾರ್ಯಕರ್ತರು ಗ್ರಾಮದೇವತೆ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದಾರೆ. 


ಸುದ್ದಿ ಓದಿ