ರಸ್ತೆ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷ ಮನಗೂಳಿ ಭೂಮಿಪೂಜೆ
ಸಿಂದಗಿ08: ಪಟ್ಟಣದ ಸೋಮಲಿಂಗೇಶ್ವರ ಚೌಕನಲ್ಲಿ ಪುರಸಭೆ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ವಾರ್ಡ ನಂ 10 ರಲ್ಲಿ ರೂ. 6ಲಕ್ಷ ಅನುದಾನದಲ್ಲಿ ಸೋಮಲಿಂಗೇಶ್ವರ ದೇವಸ್ಥಾನದಿಂದ ದುರ್ಗಿ ಮನೆಯವರೆಗೆ ಹಾಗೂ ಮಸೂತಿ ಹಿಂದುಗಡೆಯಿಚಿದಸಂಗಮ ಮನೆಚಿುವರೆಗೆ ಜಿ.ಐ.ಪೈಪ್ ಅಳವಡಿಸುವ ಮತ್ತು ಕುಲಕರ್ಣಿ ಮನೆಯಿಚಿದ ಸಂಕರಗೌಡ ಪಾಟೀಲ ಮನೆಯವರೆಗೆ ಸಿಸಿ ರಸ್ತೆ ಹಾಗೂ ವಾರ್ಡ 13 ರಲ್ಲಿ ರೂ. 9ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯ ಭೀಮು ಕಲಾಲ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಶಿವಾನಂದ ದುರ್ಗಿ, ಶಿವು ಬಡಿಗೇರ, ಅಶೋಕ ಯಡ್ರಾಮಿ, ಮಂಜುನಾಥ ಪಾಟೀಲ, ಈಶ್ವರ ಪಾಟೀಲ, ಶರಣು ಪಾಟೀಲ, ಆನಂದ ದುರ್ಗಿ ಸೇರಿದಂತೆ ಅನೇಕರಿದ್ದರು.