ರಾಣೆಬೆನ್ನೂರ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ: ಹೊನ್ನಾಳಿ ಶ್ರೀಗಳು

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ: ಹೊನ್ನಾಳಿ ಶ್ರೀಗಳು

ರಾಣೆಬೆನ್ನೂರು 19:  ಧರ್ಮ ಸಂಸ್ಕಾರದ ಬದುಕು ಪ್ರತಿಯೊಬ್ಬ ನಾಗರಿಕರು ಅನುಸರಿಸಬೇಕಾದ ಅಗತ್ಯವಿದೆ ಎಂದು ಹೊನ್ನಾಳಿ ಹಿರೇಕಲ್ಮಮಠದ ಡಾ: ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳವರು ನುಡಿದರು. ಅವರು ಇಲ್ಲಿನ ಮೃತ್ಯುಂಜಯನಗರದ ಚೆನ್ನೇಶ್ವರ ಮಠದಲ್ಲಿ ನಡೆದ ಮಾಸಿಕ ಹುಣ್ಣಿಮೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಶರಣರು ಹೇಳಿದಂತೆ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ವಾಸ್ತವ ಸತ್ಯವನ್ನು ಅರಿಯದೆ ಹೋದರೆ ಬದುಕಿನಲ್ಲಿ ಭವಿಷ್ಯವನ್ನು ಕಾಣಲು ಸಾಧ್ಯವಾಗಬಾರದು ಅದಕ್ಕಾಗಿ ಧಾನ ಧರ್ಮ ಪರೋಪಕಾರ ಗುಣಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಲಿಂಗಾಯಿತ ಸಮಾಜ ನಿವೃತ್ತ ನೌಕರರ ಸಂಘದ ಕೋಶಾಧ್ಯಕ್ಷ  ಎಸ್‌.ಎಂ.ಸಂಕಮ್ಮನ ವರ್ ಅವರು ಶ್ರೀಗಳಿಗೆ  10 ಸಾವಿರ ರೂ ಗುರುಕಾಣಿಕೆಯನ್ನು ಸಮರ​‍್ಿಸಿ  ಆಶೀರ್ವಾದ ಪಡೆದರು ಲಿಂಗವಂತ ಸಮಾಜ ನಿವೃತ್ತ ನೌಕರರ ಸಂಘದಿಂದ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ಶ್ರೀಗಳು ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು. ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ  ವಿ ಎಸ್ ಹಿರೇಮಠ, ಸಂಘದ ಮಾಜಿ ಅಧ್ಯಕ್ಷ  ಎಸ್ ಎಂ ಜಂಗಳೇರ, ಆಡಳಿತ ಮಂಡಳಿ ಉಪಾಧ್ಯಕ್ಷ  ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ಬಸವರಾಜ ಪಟ್ಟಣಶೆಟ್ಟಿ ಸದಸ್ಯರುಗಳು ಮತ್ತು ಶ್ರೀಮಠದ ಕಾರ್ಯದರ್ಶಿ ಪ್ರೊ ಅ. ಸಿ.ಹಿರೇಮಠ್, ಸೇರಿದಂತೆ ಮತ್ತಿತರ ಗಣ್ಯರು ಸೇವಕರ್ತರು ಉಪಸ್ಥಿತರಿದ್ದರು ಸಂಗೀತ ಕಲಾವಿದ ಗುಡ್ಡಪ್ಪ ಹಿಂದಿನ ಮನಿ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು 


ಸುದ್ದಿ ಓದಿ