ಹೂವಿನ ಹಡಗಲಿ

ಮುದೇನೂರು :ಆಂಜನೇಯ ಸ್ವಾಮಿಯ ರಥೋತ್ಸವ

ಮುದೇನೂರು :ಆಂಜನೇಯ ಸ್ವಾಮಿಯ ರಥೋತ್ಸವ

ಲೋಕದರ್ಶನ ವರದಿ

ಹೂವಿನಹಡಗಲಿ30: ತಾಲೂಕಿನ ಮುದೇನೂರು ಗ್ರಾಮದ ಆಂಜನೇಯ ಸ್ವಾಮಿಯ ರಥೋತ್ಸವ ಗುರುವಾರ ಸಂಜೆ 5.30ಕ್ಕೆ ವಿಜೃಂಭಣೆಯಿಂದ ಜರುಗಿತು. ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಕಲ ವಾಧ್ಯಗಳೊಂದಿಗೆ ರಥದ ಬಳಿ ಬಂದು ಮೂರು ಸುತ್ತು ಪ್ರದಕ್ಷಿಣಿ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಮಾಳ,ನಂದಿಕೋಲು ರಥೋತ್ಸವಕ್ಕೆ ಮೆರುಗು ತಂದವು.

ಸ್ವಾಮಿಯ ರಥವೇರುತ್ತಿದ್ದಂತೆ ಭಕ್ತರು ಜಯ ಘೋಷ ಹಾಕಿದರು. ಗ್ರಾಮದ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಸ್ವಾಮಿಗೆ ಮತ್ತು ರಥಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಪಾದಗಟ್ಟಿಯವರೆಗೂ ಸಾಗಿ ಪುನ: ಮೂಲ ಸ್ಥಳ ತಲುಪಿತು.

ಸುದ್ದಿ ಓದಿ