ಕು. ಸಿಂಚನಾ ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ
ಕು. ಸಿಂಚನಾ ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ
ಧಾರವಾಡ 23: ಜನತಾ ಶಿಕ್ಷಣ ಸಮಿತಿ ವಿದ್ಯಾಗಿರಿಯ ಅಂಗ ಸಂಸ್ಥೆಯಾದ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಮೃತ್ಯುಂಜಯ ನಗರ ಧಾರವಾಡ, ಈ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾದ ಕು. ಸಿಂಚನಾ ಪಾಟೀಲ ಇವಳು, ಉತ್ತರ ಕರ್ನಾಟಕದ ಎಕ್ಸಲೆಂಟ್ ಲೇಡಿಜ್ ಕ್ಲಬ್ ಕಲ್ಚರಲ್ ಆ್ಯಕ್ಟಿವೀಟೀಸ್ ಚಿಲ್ಡ್ರನ್ ಆ್ಯಂಡ್ ವಿಮನ್ರವರು ಆಯೋಜಿಸಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದ ಇವಳಿಗೆ 85 ಸಾವಿರ ನಗದು ಬಹುಮಾನ ಹಾಗೂ ಒಂದು ಚಿನ್ನದ ನಾಣ್ಯವನ್ನು ಬಹುಮಾನವಾಗಿ ಪಡೆದಿರುತ್ತಾಳೆ. ಇವಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ಅಜಿತ ಪ್ರಸಾದರವರು ಹಾಗೂ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾಧ್ಯೆಯರವರು ಮತ್ತು ಶಾಲೆಯ ಮುಖ್ಯೋಪಾಧ್ಯಾಯನಿಯವರಾದ ತ್ರಿವೇಣಿ ಆರ್ ರವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.