ವಾಹನ ಚಾಲಕರ ಸಂಘಟನೆ ವತಿಯಿಂದ ಸೌಮ್ಯಾಗೆ ಸನ್ಮಾನ
ಲೋಕದರ್ಶನ ವರದಿ
ಕಾಗವಾಡ 23: ಸಮಸ್ಯೆಗಳ ನಡುವೆ ಯಶಸ್ವಿ ಕಂಡ ಟಂಟಂ ಚಾಲಕನ ಮಗಳು ಸೌಮ್ಯಾ ಶ್ರೀಶೈಲ್ ಅವಟಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 99.52 ಅಂಕಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಗಿಟ್ಟಿಸಿ ಸಾಧನೆ ಮಾಡಿದ್ದರಿಂದ ಐನಾಪುರ ಹಾಗೂ ಪರಿಸರದಲ್ಲಿಯ ಇನ್ನೂಳಿದ ಟಂಟಂ ಚಾಲಕ ಸಂಘಟನೆ ವತಿಯಿಂದ ರವಿವಾರ ದಿ. 22ರಂದು ವಿದ್ಯಾಥರ್ಿನಿಯನ್ನು ಸನ್ಮಾನಿಸಲಾಯಿತು.
ಬಡತನಕ್ಕೂ ಸಾಧನೆಗೂ ಸಂಬಂಧವಿಲ್ಲ. ಪ್ರತಿಭೆ ಇದ್ದಲ್ಲಿ ಯಶಸ್ಸಿನ ಶಿಖರ ಏರಲು ಖಂಡಿತ ಸಾಧ್ಯ ಎಂಬ ಧ್ಯೇಯೋಕ್ತಿಯನ್ನು ನಿರೂಪಿಸಿರುವ ಈ ವಿದ್ಯಾಥರ್ಿನಿ ಇತರರಿಗೆ ಮಾದರಿಯಾಗಿದ್ದಾಳೆಯೆಂದು ಕನರ್ಾಟಕ ಚಾಲಕರ ಅಥಣಿ ಸಂಘಟಕ ಅಧ್ಯಕ್ಷ ತೌಫಿಕ್ ಮೋಮಿನ್ ಹೇಳಿದರು.
ಐನಾಪುರದ ಪದ್ಮಾವತಿ ವಿದ್ಯಾಲಯದ ವಿದ್ಯಾಥರ್ಿನಿ ಸೌಮ್ಯಾ ಅವಟಿ ಇವಳು 625ರ ಪೈಕಿ 622 ಅಂಕ ಪಡೆದುಕೊಂಡಿದ್ದಾಳೆ. ಇದರಲ್ಲಿ ಕನ್ನಡ 125, ಹಿಂದಿ, ಗಣಿತ, ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಪೆಡದಿದ್ದು, ಇಂಗ್ಲೀಷ್ ವಿಷಯದಲ್ಲಿ 100ಕ್ಕೆ 97 ಅಂಕ ಪಡೆದುಕೊಂಡಿದ್ದಾಳೆ.
ಬಡ ಕುಟುಂಬಯಿದಿದ್ದರಿಂದ ಸ್ವತಂತ್ರವಾಗಿ ಯಾವುದೇ ಕೋಚಿಂಗ್ ವ್ಯವಸ್ಥೆ ಮಾಡಿಕೊಳ್ಳಲಿಲ್ಲಾ. ಪ್ರತಿದಿನ ಸುಮಾರು 15 ಗಂಟೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದಳು. ಇದರಿಂದ ಸೌಮ್ಯಾ ಜೊತೆಗೆ ಅವರ ತಂದೆ-ತಾಯಿಗೂ ವಾಹನ ಚಾಲಕರ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಾಹನ ಚಾಲಕರ ಸಂಘಟನೆ ಅಧ್ಯಕ್ಷ ತೌಫಿಕ ಮೋಮಿನ, ಉಪಾಧ್ಯಕ್ಷ ಸುರೇಶ ಪಡಸಲಗಿ, ನಿದರ್ೇಶಕ ಗುರುರಾಜ ಮಡಿವಾಳರ, ಅಜೀತ ಹಂಚಿಬಟ್ಟಿ, ಯಾಸಿನ ಇನಾಮದಾರ, ನ್ಯಾಯವಾದಿ ಬಿ.ಎಸ್.ಕುಡವಕ್ಕಲಗಿ, ಶಿವಗೌಡ ಚೌಗುಲೆ, ವಿಜಯ ಸರಸಟ್ಟಿ, ಬಾಹುಬಲಿ ಶೆಟ್ಟಿ, ಗುಂಡು ಅಲಗೌಡನವರ, ಮಲಕಾರಿ ಬಾಲಗೂಳ, ಸುನೀಲ ತೋಡಕರ, ಮಹೇಶ ಜಾಧವ, ರಾಕೇಶ ಶೆಟ್ಟಿ, ಸುನೀಲ ಕಾರಚಿ, ಸೇರಿದಂತೆ ಅನೇಕರು ಇದ್ದರು