ಇಂಡಿ

ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮಕ್ಕೆ ಶೇ.100 ರಷ್ಟು ಫಲಿತಾಂಶ

ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮಕ್ಕೆ ಶೇ.100 ರಷ್ಟು ಫಲಿತಾಂಶ

ಇಂಡಿ 21: ತಾಲೂಕಿನ ಅಥರ್ಗಾ ಗ್ರಾಮದ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.100ರಷ್ಟಾಗಿದೆ. 

ಶಾಲೆಯ 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 37 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 9 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ  ಭಾಷೆಯಲ್ಲಿ 4 ವಿದ್ಯಾರ್ಥಿಗಳು 125 ಕ್ಕೆ 125 ಅಂಗ  ಗಳಿಸಿದ್ದಾರೆ. ಹಿಂದಿ ಭಾಷೆಯಲ್ಲಿ 12 ವಿದ್ಯಾರ್ಥಿಗಳು 100 ಕ್ಕೆ ನೂರು ಅಂಕ, ಗಣಿತ ವಿಷಯದಲ್ಲಿ 5 ವಿದ್ಯಾರ್ಥಿಗಳು 100 ಕ್ಕೆ ನೂರು ಅಂಕ, ಸಮಾಜ ವಿಜ್ಞಾನ ವಿಷಯದಲ್ಲಿ 5 ವಿದ್ಯಾರ್ಥಿಗಳು 100 ಕ್ಕೆ ನೂರು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 

ಶಾಲೆಯ ವಿದ್ಯಾರ್ಥಿ ರಾಮನಗೌಡ ಅಂಕಲಗಿ 98.40 ಅಂಕ ಪಡೆದು ಶಾಲೆಗೆ ಪ್ರಥಮ, ಭಾಗ್ಯಾ ಯರಗಲ್ 98.24 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಪ್ರದೀಪ ಸಿಂದಗಿ 97.76 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ