ರಾಣೆಬೆನ್ನೂರ

ಮಾಸಿಕ ಹುಣ್ಣಿಮೆ ಧಾರ್ಮಿಕ ಕಾರ್ಯಕ್ರಮ

ಮಾಸಿಕ ಹುಣ್ಣಿಮೆ ಧಾರ್ಮಿಕ ಕಾರ್ಯಕ್ರಮ

ರಾಣಿಬೆನ್ನೂರ 25:  ಧರ್ಮಾಚರಣೆ ಇಲ್ಲದೇ ಇರುವುದೇ ಇತ್ತೀಚೆಗೆ ನಡೆಯುತ್ತಿರುವ ನಮ್ಮ ಸುತ್ತಮುತ್ತಲಿನ ಅಪರಾಧಿಕ ಘಟನೆಗಳಿಗೆ ಕಾರಣವಾಗಿದೆ. ನಮ್ಮ ಧರ್ಮ ಕರ್ಮದ ಅರಿವಿಟ್ಟುಕೊಂಡು ನಾವು ಬಾಳಬೇಕು.  ಯೋಗ ಮಾಡುವ ಮೂಲಕ ಆರೋಗ್ಯವಂತರಾಗಿ ಆಯುಷ್ಯವಂತರಾಗೋಣ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಇಲ್ಲಿನ ಮೃತ್ಯುಂಜಯನಗರದ ಚೆನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಈಚೆಗೆ ಹೊನ್ನಾಳಿ ಚೆನ್ನಮಲ್ಲಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು  ಕಾರಹುಣ್ಣಿಮೆ ಮಾಸಿಕ ಧರ್ಮ ಸಭೆ ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಆಧುನಿಕತೆಯ ಭರಾಟೆಯಲ್ಲಿರುವ ನಮಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ನಮ್ಮ ಆರೋಗ್ಯದ ಕಡೆ ಗಮನಹರಿಸುವುದನ್ನು ಮತ್ತೊಮ್ಮೆ ನೆನಪು ಮಾಡಿಕೊಟ್ಟಿದೆ. ವಿಶ್ವಕ್ಕೆ ಗುರುವಾಗಿರುವ ಭಾರತದಲ್ಲಿ ನಡೆಸಿದ್ದ ಋಷಿಮುನಿಗಳು ವಯಸ್ಸಿಗನಗುಣವಾಗಿರುವ ಯೋಗಾಸನಗಳನ್ನು ಕಂಡುಕೊಂಡು ನಮಗೆ ನೀಡಿದ್ದಾರೆ. ವಯಸ್ಸಿಗನುಸಾರವಾಗಿ ಯೋಗಾಸನಗಳನ್ನು ನಾವು ಮಾಡಬೇಕು ಎಂದರು. 

ಕೋಣಂದೂರು ಮಠದ ಅಭಿನವ ಸಿದ್ದವೀರೇಶ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಭಕ್ತಿ ಭಾವದ ಕುರಿತು ಧರ್ಮವು ಬಾಳಿನ ಬೆಳಕಾಗಿದೆ. ಧರ್ಮವೇ ಜೀವನದ ಆತ್ಮವಾಗಿದೆ. ಧರ್ಮಾಚರಣೆಯೇ ನಮ್ಮ ದೇಶದ ಸಂಪತ್ತಾಗಿದೆ. ಅಂಗೈಯೊಳಗೆ ನಮ್ಮ ಆರೋಗ್ಯವಿದೆ ಎಂದರು. 

ಕೊಟ್ಟೂರು ಕುಟುಂಬದ ಸದಸ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಹೊನ್ನಪ್ಪ ಹೊನ್ನಪ್ಪನವರ ವಿಶೇಷವಾದ ಉಪನ್ಯಾಸ ನೀಡಿದರು. 

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪಾಠ ಶಾಲೆಯ ವಟುಗಳು ಹಾಗೂ ದಾನೇಶ್ವರಿ ಜಾಗೃತ ಅಕ್ಕನ ಬಳಗದ ಪದಾಧಿಕಾರಿಗಳು ಯೋಗಾಸನ ಪ್ರದರ್ಶನ ಮಾಡಿದರು.   

 ಸಂಗೀತ ಕಲಾವಿದರಾದ ಗುಡ್ಡಪ್ಪ ಹಿಂದಿನಮನಿ, ರಜನಿ ಕರಿಗಾರ, ಯುವರಾಜ ಸೋಮನಾಥ್ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. 

ಬಸವರಾಜಪ್ಪ ಪಟ್ಟಣಶೆಟ್ಟಿ , ಬಿದ್ದಾಡೆಪ್ಪ ಚಕ್ರಸಾಲಿ, ಅಮೃತ ಗೌಡ ಹಿರೇಮಠ, ಜಗದೀಶ ಮಳಿಮಠ,ವಿ ಎಂ ಕರ್ಜಗಿ, ಶ್ರೀ ಜ್ಯೋತಿ ಬಣ್ಣದ , ಸೋಮನಾಥ ಹಿರೇಮಠ , ಮೃತ್ಯುಂಜಯ ಪಾಟೀಲ, ರಾಚಯ್ಯ ಶಾಸ್ತ್ರಿ, ಗೌರಿಶಂಕರ ಸ್ವಾಮಿ ನೆಗಳೂರಮಠ, ಎಂ.ಕೆ. ಹಾಲಸಿದ್ದಯ್ಯ, ಗಾಯತ್ರಿ ಕುರುವತ್ತಿ, ಭಾಗ್ಯಶ್ರಿ ಗುಂಡಗಟ್ಟಿ ಅಶ್ವಿನಿ ಕುಮಾರ ಅಜ್ಜೇ ವಡಿಯರಮಠ, ಪರಮೇಶ ಎಸ್ .ಕಲಾಲ, ಫಕ್ಕೀರೇಶ ಭಸ್ಮಾಂಗಿಮಠ, ವಿ. ವಿ. ಹರಪನಹಳ್ಳಿ, ಕಸ್ತೂರೆಮ್ಮ ಪಾಟೀಲ ಉಪಸ್ಥಿತರಿದ್ದರು. 


ಸುದ್ದಿ ಓದಿ