ಸಂಜೀವಿನಿ ಮಹಿಳಾ ಒಕ್ಕೂಟದ ಮಾಸಿಕ ಸಭೆ
ಕಾಗವಾಡ 24: ಗ್ರಾಮ ಪಂಚಾಯಿತಿ ಶಿರಗುಪ್ಪಿ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಮಾಸಿಕ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪರ್ಣಾ ಪಾಟೀಲ್ ಮತ್ತು ಉಪಾಧ್ಯಕ್ಷರಾದ ಶೃತಿ ಸಚೀನ ಕಾಂಬಳೆ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಶ್ರೀ ಭಜಂತ್ರಿ ಹಾಗೂ ಕಾಗವಾಡ ತಾಲೂಕಿನ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ವಂಟಗೊಡೆ ಬಿಆರ್ಿ ಮಹಾದೇವಿ ವಂಟಗೊಡೆ ಮತ್ತು ಒಕ್ಕೂಟದ ಎಲ್ಲ ಸದಸ್ಯರು ಉಪಸ್ಥಿತರಿದ್ದರು
ಆನಂದ ವಂಟಗೊಡೆ ಅವರು ಸಭೆ ಕುರಿತು ಕೌಶಲ್ಯ ಅಭಿವೃದ್ಧಿ ತರಬೇತಿಗಳ ಬಗ್ಗೆ ಉದ್ಯಮಶೀಲತೆ ಮತ್ತು ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಕಾರ್ಯಕ್ರಮಗಳ ಬಗ್ಗೆ 12ರೂ. ಮತ್ತು 330 ರೂ.ಇನ್ಸೂರೆನ್ಸ್‌ಸಂಘ, ಸಂಘಗಳ ಸಾಲ ಸೌಲಭ್ಯಗಳ. ಬಗ್ಗೆ ಮತ್ತು. ಎಂ ಎಲ್‌ಆರ್ ಎಂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪರ್ಣಾ ಪಾಟೀಲ್ ಅವರು 5 ಹೊಸ ಉದ್ಯೋಗಗಳ ಬಗ್ಗೆ ಸಲಹೆ ಮತ್ತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರು. ಕಾರ್ಯದರ್ಶಿ ಮತ್ತು ಸದಸ್ಯರು ಹಾಜರಿದ್ದರು.