ರಾಣೆಬೆನ್ನೂರ

ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು

ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು

ರಾಣಿಬೆನ್ನೂರ 14: ನರೇಂದ್ರ ಮೋದಿಜಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರವ ಹಿನ್ನಲೆಯಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಹಾಗೂ ಅಭಿಮಾನಿ ಬಳಗದಿಂದ  ರವಿವಾರ ನಗರದ ಕುರುಬಗೇರಿಯ ಶ್ರೀ ಈಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. 

ಈ ಸಂದರ್ಭದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಮೂರನೇ ಬಾರಿಗೆ ಜನರಿಂದ ಆಯ್ಕೆಗೊಂಡ ಏಕೈಕ ಪ್ರಧಾನಿ ನರೇಂದ್ರ ಮೋದಿಜಿಯವರು. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವುದರ ಮೂಲಕ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ. ಇವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ನೋಡಬೇಕೆಂಬ ಅಭಿಮಾನಿಗಳ ಮತ್ತು ಪಕ್ಷದ ಕಾರ್ಯಕರ್ತರ ಆಸೆ ನೆರವೇರಿದೆ ಎಂದರು. 

ಮೋದಿಜಿಯವರ ಪ್ರಾಮಾಣಿಕ ಸೇವೆಯನ್ನು ಕಂಡು ಎನ್‌ಡಿಎ ಸೇರಿದಂತೆ ಇತರೆ ಪಕ್ಷದವರು ಬೆಂಬಲ ಸೂಚಿಸಿ ಮೋದಿಯವರನ್ನೇ ಪ್ರಧಾನಮಂತ್ರಿಯಾಗಿ ಮಾಡುವ ಕನಸು ಇಂದು ನನಸಾಗಿದೆ. ಮುಂದಿನ ದಿನಮಾನಗಳಲ್ಲಿ ಮೋದಿಯವರ ಆಡಳಿತದಲ್ಲಿ ಯಾವುದೇ ಅಡತಡೆ ಬಾರದೆ, ದೇಶದ ಒಳಿತಿಗಾಗಿ ಮೋದಿಯವರು ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರಕ್ಕೆ ಯಾರದೂ ಅಡ್ಡಿ ಆತಂಕ ಬಾರದೆ ಸುಸೂತ್ರವಾಗಿ ಆಡಳಿತ ನಡೆಸಲಿ ಎಂಬ ಸದುದ್ದೇಶದಿಂದ ಈಶ್ವರ ದೇವಸ್ಥಾನದಲ್ಲಿ ಇಂದು ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು ಎಂದರು. 

ಮೋದಿಯವರ ಪ್ರಮಾಣವಚನ ಸ್ವೀಕಾರ ಸಂದರ್ಭದ ಕ್ಷಣಗಳನ್ನು ವೀಕ್ಷಿಸಲು ಬೃಹತ್ತಾದ ಎರಡು ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ 10 ಸಾವಿರ ಜನರಿಗೆ ಗೋದಿ ಹುಗ್ಗಿ, ಮುಳಗಾಯಿ ಪಲ್ಯ, ಅನ್ನ ಸಾಂಬಾರ, ಬೀರಂಜಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. 


ಸುದ್ದಿ ಓದಿ