ರಾಣೆಬೆನ್ನೂರ

ನಾನೆಂದೆಂದಿಗೂ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮೋದಿ ಬಜೆಟ್: ರವೀಂದ್ರಗೌಡ ಎಫ್‌. ಪಾಟೀಲ

ನಾನೆಂದೆಂದಿಗೂ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮೋದಿ ಬಜೆಟ್: ರವೀಂದ್ರಗೌಡ ಎಫ್‌. ಪಾಟೀಲ

ರಾಣೇಬೆನ್ನೂರು 24 : ಕಳೆದ ಹತ್ತು ವರ್ಷಗಳಿಂದಲೂ ರೈತ ವಿರೋಧಿ ನೀತಿ ಅನುಸರಿಸುತ್ತಲೇ ಬಂದಿದ್ದ ಮೋದಿ, ನಿನ್ನೆಯ ಕೇಂದ್ರದ ಬಜೆಟ್‌ನಲ್ಲಿ ರೈತರಿಗೆ ಯಾವುದೇ ಅನುಕೂಲ ಕಲ್ಪಿಸದೆ ತನ್ನ ಕುರ್ಚಿಯ ಭದ್ರತೆಗಾಗಿ ಬಿಹಾರ ಮತ್ತು ಆಂದ್ರ ರಾಜ್ಯಗಳಿಗೆ ಸಾಕಷ್ಟು ಅನುಕೂಲಮಾಡಿಕೊಟ್ಟು ಕರ್ನಾಟಕದ ಹೆಸರನ್ನೆ ಮರೆತಿರುವುದು ಬೇಸರದ ಸಂಗತಿ. ತೆರಿಗೆ ಕಟ್ಟುವ ವಿಚಾರದಲ್ಲಿ ಶ್ರೀಮಂತರಿಗೆ, ನೌಕರರಿಗೆ ಅನುಕೂಲ ಮಾಡಿಕೊಟ್ಟು ರೈತನೆ ರಾಷ್ಟ್ರದ ಬೆನ್ನೆಲುಬು ಎಂದು ಹೇಳುತ್ತಾ ಆರ್ಥಿಕ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಯಾವುದೇ ಅನುಕೂಲ ಕಲ್ಪಿಸದೆ ರೈತನ ಪಕ್ಕೆಲುಬನ್ನೆ ಮುರಿದು ನಾನೆಂದೆಂದಿಗೂ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆಂದು ರೈತ ಮುಖಂಡ ಹಾಗೂ ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ನಿನ್ನೆಯ ಕೇಂದ್ರದ ಬಜೆಟ್‌ನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ್ಗಕ್ಕೆ, ಎಸ್‌.ಸಿ,, ಎಸ್‌.ಟಿ., ಅಲ್ಪ ಸಂಖ್ಯಾತರಿಗೆ ಯಾವುದೇ ಉಪಯೋಗವಿಲ್ಲದ, ಮಹಿಳೆಯರಿಗೆ ರಕ್ಷಣೆ ಇಲ್ಲದ ಬಜೆಟ್ ಇದಾಗಿದೆ.  

ನಾರಿಯರಿಗೆ ಯಾವುದೇ ಶಕ್ತಿ ಇಲ್ಲದ, ನಿರುದ್ಯೋಗಿಗಳಿಗೆ ಭರವಸೆ ಇಲ್ಲದ, ವಸತಿರಹಿತರಿಗೆ ನಿರಾಸೆ ಮೂಡಿಸಿದ ಬಜೆಟ್ ಇದಾಗಿದ್ದು, ರೈತರಿಗೆ ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ಎಂದು ಹೇಳುತ್ತಾ ಅಂಗೈಯಲ್ಲಿ ಅರಮನೆ ತೋರಿಸಿದಂತಿದೆ ಎಂದು ಪಾಟೀಲರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 


ಸುದ್ದಿ ಓದಿ