ಕಾಗವಾಡದಲ್ಲಿ ರಾಜ್ಯೋತ್ಸವ ಕಾಲಕ್ಕೆ ಆವಾಂತರ: ಆಯೋಜಕರ ವಿರುದ್ಧ ಆಕ್ರೋಶ
ಕಾಗವಾಡ 02: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ದಿ1ರಂದು ಕಾಗವಾಡ ಪಟ್ಟಣದ ಚನ್ನಮ್ಮ ಸರ್ಕಲದಲ್ಲಿ ಶಾಸಕರಾದ ಶ್ರೀಮಂತ ಪಾಟೀಲ ಭುವನೇಶ್ವರಿದೇವಿಯ ಭಾವಚಿತ್ರಕೆ ಪೂಜೆ ಸಲ್ಲಿಸಿದರು.
ನಂತರ ಪಟ್ಟಣದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಬಾವುಟದ ಧ್ವಜವನ್ನು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಧ್ವಜಾರೋಹಣ ಮಾಡುತ್ತಿದ್ದಂತೆ ಕಿತ್ತು ಬಂದು ನೆಲಕ್ಕೆ ಉರುಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ ಮತ್ತೆ ಬೇರೆ ಧ್ವಜವನ್ನು ಕಟ್ಟಿ ಧ್ವಜಾರೋಹಣ ನೆರವೇರಿಸಿದ್ದಾರೆ. ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿದ ಪ್ರತಿಯೊಬ್ಬ ಕರ್ನಾಟಕದ ಜನ ನಮ್ಮ ಕನ್ನಡ ಮಾತೆಯ ಮೇಲೆ ಅಪಾರವಾದ ಅಭಿಮಾನ ಗೌರವ ಹೊಂದಿದ್ದು ಯಾವುದೇ ರೀತಿಯ ಅಗೌರವ ಆಗದ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ.
ಶಾಸಕರ ಹೇಳಿಕೆ ಮಾಧ್ಯಮದವರ ಮುಂದೆ
ನಮ್ಮದು ಹೊಸ ತಾಲೂಕು ಇಲ್ಲೊಂದು ಸಣ್ಣದಾದ ಚನ್ನಮ್ಮ ಸರ್ಕಲ್ಯಿದೆ ಆದರೆ ಮಹಾರಾಷ್ಟ್ರ ದಿಂದ ಸಂಕೇಶ್ವರದಿಂದ ಹೈವೆ ಆಗುವದಿದೆ. ಅದೇ ರೀತಿ ವಿಜಯಪುರದಿಂದ ಹೈವೆ ಕೂಡುವದಿದೆ. ಅವರು ಇಲ್ಲಿ ಎಷ್ಟು ಆಕ್ಟಿವೇಷನ ಮಾಡುತ್ತಾರೆ ನೋಡಿ ಇಲ್ಲಿ ಒಂದು ದೊಡ್ಡದಾದ ಸರ್ಕಲ್ ಮಾಡಿ ಆ ಸರ್ಕಲದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ನಿರ್ಮಾಣ ಮಾಡಲು 5 ಲಕ್ಷ ರೂಪಾಯಿ ನೀಡುತ್ತೆನೆ ಹಾಗೂ ಸಾರ್ವಜನಿಕರು ಮೂರ್ತಿ ನಿರ್ಮಾಣ ಮಾಡಲು ಧನ ಸಹಾಯ ಮಾಡಬೇಕೆಂದು ಶಾಸಕ ಶ್ರೀ ಮಂತ ಪಾಟೀಲ ಹೇಳಿದರು.ಕಾಗವಾಡ ತಹಶಿಲ್ದಾರ ರಾಜೇಶ ಬುರ್ಲಿ ಉಪ ತಹಶೀಲ್ದಾರ್ ಅಣ್ಣಾಸಾಬ್ ಕೋರೆ, ಎಂ ಆರ್ ಪಾಟೀಲ್, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಮ್ ಆರ್ ಮುಂಜೆ, ಹಾಗೂ ಸಿಡಿಪಿಒ ಸಂಜೀವಕುಮಾರ ಸದಲಗಿ ಸೆರಿದಂತೆ ವಿವಿಧ ಇಲಾಖೆಯಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.
ಕಾಗವಾಡದಲ್ಲಿ ಕನ್ನಡ ಬಾವುಟಕ್ಕೆ ಅವಮಾನ
ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕನ್ನಡ ಬಾವುಟಕ್ಕೆ ಅವಮಾನವಾಗಿರುವ ಘಟನೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ತಾಲೂಕ ಅಧ್ಯಕ್ಷ ಸಿದ್ದು ಒಡೆಯರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಶಾಸಕ ಶ್ರೀಮಂತ ಪಾಟೀಲ ಕನ್ನಡ ಬಾವುಟ ಧ್ವಜಾರೋಹಣ ಸಂದರ್ಭದಲ್ಲಿ ಬಾವುಟ ಹರಿದು ಕೆಳಗೆ ಬಿದ್ದಿರುವ ಘಟನೆ ಜರುಗಿದೆ. ಈ ಘಟನೆ ಕನ್ನಡ ಅಸ್ಮಿತೆಗೆ ಧಕ್ಕೆಯಾದಂತಾಗಿದೆ. ಅದಲ್ಲದೆ ಮೆರವಣಿಗೆಯಲ್ಲಿ ಆನೆಯ ಸೊಂಡಿಲದಲ್ಲಿ ಕನ್ನಡ ಬಾವುಟವನ್ನು ಕೊಟ್ಟು ಕಟ್ಟಿಗೆಯಿಂದ ಬಾವುಟ ಬಿಚ್ಚಿ ಕೆಳಗೆ ಬಿದ್ದ ಅವಮಾನವಾಗಿರುವ ಘಟನೆ ಜರುಗಿದ್ದು, ಕಾರ್ಯಕ್ರಮದ ಆಯೋಜಕರ ನಿರ್ಲಕ್ಷ ಮತ್ತು ನಾಡ ಧ್ವಜಕ್ಕೆ ಅವಮಾನಿಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಕನ್ನಡ ಅಭಿಮಾನಿಗಳು ಒತ್ತಾಯಿಸಿದ್ದಾರೆ.