ಬೈಲಹೊಂಗಲ

ಯುವಕ ಕಾಣೆ

ಯುವಕ ಕಾಣೆ

ಬೈಲಹೊಂಗಲ 13: ಪಟ್ಟಣದ ಗುಂಡ್ಲೂರ ಚಾಳದ ಯುವಕನೊಬ್ಬ ಡಿ.7 ರಂದು ಮನೆಯಿಂದ ಹೋದವನು ಕಾಣೆಯಾಗಿದ್ದಾನೆಂದು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

ಬಸವರಾಜ ಚಂದ್ರಪ್ಪ ಬೈಲವಾಡ (22) ಕಾಣೆಯಾದ ಯುವಕ. ಡಿ.7 ರಂದು ಟಗರಿನ ಷರತ್ತಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಬೈಕ್ ತೆಗೆದುಕೊಂಡು ಹೋದವನು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ. ಮೈಮೇಲೆ ಹಳದಿ ಬಣ್ಣದ ಶರ್ಟ ಮತ್ತು ಕರಿ ಬಣ್ಣದ ನೈಟ ಪ್ಯಾಂಟ್ ಧರಿಸಿದ್ದು, ಗೋದಿಗೆಂಪು ಮೈಬಣ್ಣ, ಎತ್ತರ 5.2 ಇದ್ದು, ಉದ್ದ ಮುಖ, ಹಣೆ ಮೇಲೆ 3 ಬೊಟ್ಟು ವಿಭೂತಿ ಧರಿಸಿರುತ್ತಾನೆ. ಈ ಚಹರೆ ಪಟ್ಟಿಯುಳ್ಳ ಕಾಣೆಯಾದ ಯುವಕನ ಮಾಹಿತಿ ಸಿಕ್ಕಲ್ಲಿ ಬೈಲಹೊಂಗಲ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ : 08288-233133, ಮೊ.ನಂ.9480804037 ಸಂಪರ್ಕಿಸುವಂತೆ ತಿಳಿಸಲಾಗಿದೆ. 


ಸುದ್ದಿ ಓದಿ