ಕಾಗವಾಡ

ಸಚಿವ ಶ್ರೀಮಂತ ಪಾಟೀಲ ಹುಟ್ಟುಹಬ್ಬ ಆಚರಣೆ

ಸಚಿವ ಶ್ರೀಮಂತ ಪಾಟೀಲ ಹುಟ್ಟುಹಬ್ಬ ಆಚರಣೆ
ಕೆಂಪವಾಡದಲ್ಲಿ ಸಚಿವ ಶ್ರೀಮಂತ ಪಾಟೀಲ ಇವರ 66ನೇ ಹುಟ್ಟು ಹಬ್ಬ ಆಚರಿಸುತ್ತಿರುವಾಗ ಅವರ ಅಭಿಮಾನಿಗಳು.

ಕಾಗವಾಡ 31:ಕ್ಷೇತ್ರದ ಶಾಸಕ ಹಾಗೂ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರ 66ನೇ ಹುಟ್ಟು ಹಬ್ಬ ಅವರ ಪತ್ನಿ, ಪುತ್ರರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಆಚರಿಸಿದರು.

ಕೆಂಪವಾಡ ಸಕ್ಕರೆ ಕಾರ್ಖಾನೆ ಸಭಾ ಭವನದಲ್ಲಿ ಅವರ ಅಭಿಮಾನಿಗಳು ನೇತ್ರ ತಪಾಸಣೆ ಶಿಬಿರ ಮತ್ತು ಅಥಣಿ ರಕ್ತಭಂಡಾರ ಹಾಗೂ ಶಿರಗಾಂವಕರ ಬ್ಲಡ್ ಬ್ಯಾಂಕ್ ಇವರಿಂದ ರಕ್ತದಾನ ಶಿಬಿರ ನೆರವೇರಿತು. ಶಿಬಿರದಲ್ಲಿ ಸಚಿವರ ಅಭಿಮಾನಿ ಕಾರ್ಯಕರ್ತರು ರಕ್ತದಾನ ಮಾಡಿದರು. 6 ಅಂಗವಿಕಲರಿಗೆ ತ್ರಿಚಕ್ರ ವಾಹನ ಹಂಚಿದರು.

ಸಚಿವರ ಪುತ್ರರಾದ ಶ್ರೀನಿವಾಸ ಪಾಟೀಲ, ಯೊಗೇಶ ಪಾಟೀಲ, ಸುಶಾಂತ ಪಾಟೀಲ ಆಗಮಿಸಿದ ಎಲ್ಲ ಕಾರ್ಯಕರ್ತರನ್ನು ಸ್ವಾಗತಿಸಿದರು.

ಸಚಿವ ಶ್ರೀಮಂತ ಪಾಟೀಲ ಪ್ರತಿವರ್ಷ ಹುಟ್ಟು ಹಬ್ಬ ಆಚರಿಸುತ್ತಿರುವ ಬಗ್ಗೆ ಹೇಳುವಾಗ, ಇದೊಂದು ಕಾರ್ಯಕರ್ತರು ಮತ್ತು ನಮ್ಮ ಮಧ್ಯದಲ್ಲಿ ಸ್ನೇಹ ಸಮ್ಮೇಳನ. ಪ್ರತಿಯೊಬ್ಬರ ಸುಖ-ದುಃಖ ವಿಚಾರಿಸಿಕೊಂಡು ಸಿಹಿ ಹಂಚಿ ಕಾರ್ಯಕ್ರಮ ಆಚರಿಸುತ್ತೇವೆ. ಅದರೊಂದಿಗೆ ಅಂಗವಿಕಲರಿಗೆ ತ್ರೀಚಕ್ರ ವಾಹನ, ಸೈನಿಕರಿಗಾಗಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.

ಶಿಬಿರದಲ್ಲಿ ತಾಲೂಕಾಡಳಿತ ಅಧಿಕಾರಿ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು, ಅಥಣಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ, ಬಿಜೆಪಿ ಮುಖಂಡರಾದ ಆರ್.ಎಂ.ಪಾಟೀಲ, ನಾನಾಸಾಹೇಬ ಅವತಾಡೆ, ಅಪ್ಪಾಸಾಹೇಬ ಅವತಾಡೆ, ಅಭಯಕುಮಾರ ಅಕಿವಾಟೆ, ವಿನಾಯಕ ಬಾಗಡಿ, ಶೇಡಬಾಳ ಪಟ್ಟಣ ಪಂಚಾಯತಿ ಅಧ್ಯಕ್ಷ ರವೀಂದ್ರ ಕಾಂಬಳೆ, ಉಗಾರ ಬುದ್ರುಕ ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸುದ್ದಿ ಓದಿ