ಬರಪೀಡಿತ ಪ್ರದೇಶಗಳಿಗೆ ಸಚಿವ ಆರ್.ಬಿ.ತಿಮ್ಮಾಪೂರ ಭೇಟಿ ನೀಡಿ ವೀಕ್ಷಣೆ
ಜಮಖಂಡಿ 28: ತಾಲೂಕಿನ ಬರಪೀಡಿತ ಪ್ರದೇಶಗಳಾದ ತೊದಲಬಾಗಿ, ಗದ್ಯಾಳ, ಗೋಠೆ, ಕನ್ನೊಳಿ ಹಾಗೂ ಹಲವಾರು ಗ್ರಾಮಗಳಲ್ಲಿ ಕಬ್ಬು, ತೊಗರಿ, ದ್ರಾಕ್ಷೀ, ಗೋವಿನಜೋಳ ಬೆಳೆಹಾನಿಯಾದ ಜಮೀನಗಳಿಗೆ ಅಬಕಾರಿ ಮತ್ತು ಜಿಲ್ಲಾಉಸ್ತುವರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಮಳೆ ಕೊರತೆ ಇದೆ. ಯಾವ ರೀತಿ ನಿಭಾಯಿಸಬೇಕು ನಿಜವಾದ ಸ್ಥಿತಿ ಏನಿದೆ ಅಂತಾ ನಾನು ಸ್ವತಃ ಖುದ್ದಾಗಿ ವಿಕ್ಷಣೆ ಮಾಡಿರುತ್ತೆನೆ. ಜಮಖಂಡಿಯಲ್ಲಿ ಹಲವಾರು ತೊಂದರೆಗಳಿದ್ದು ನೀರು, ದನಕರುಗಳಿಗೆ ಮೇವು, ರೈತರು ತೊಂದರೆ ಅನುಭವಿಸುತ್ತಾ ಇದ್ದಾರೆ. 18690 ಹೆಕ್ಟೆರ ಕಬ್ಬಿನ ಬೆಳೆ, ಸೊಯಾಬಿನ ಮತ್ತು ಸನ್ ಪ್ಲಾವರ. 27.200 ಹೆಕ್ಟರ ಬೆಳೆ ನಾಶವಾಗಿದೆ. ಹೆಸರು 7.0, ತೊಗರಿ 1115 ಹೆಕ್ಟೆರ, ಹೆಸರು 8190 ಹೆಕ್ಟೆರನಷ್ಟು ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಾದ ಅರಿಷಿಣ, ಈರುಳೆ 100 ಹೆಕ್ಟೆರ ಬೆಳೆ ನಾಶವಾಗಿದೆ. ಜನೇವರಿ ತಿಂಗಳಲ್ಲಿ 10 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದು. ಪೆಬ್ರುವರಿ ತಿಂಗಳಲ್ಲಿ 8 ಹಳ್ಳಿಗಳು ಮತ್ತು ಮಾರ್ಚ ತಿಂಗಳಲ್ಲಿ 32 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಶೇ.80 ರಷ್ಟು ರೈತರ ಸಂಪೂರ್ಣ ಬೆಳೆ ಹಾನಿಯಾಗಿದೆ. ಸರ್ಕಾರ ಸದ್ಯದ ಪರಿಸ್ಥಿತಿಯನ್ನು ತೊರಿಸಲಿಕ್ಕೆ ಸಮೀಕ್ಷೆ ಮಾಡತಾ ಇದೆ. ಒಟ್ಟಾರೆ ಭರ ನಿರ್ವಹಣೆಯಲ್ಲಿ ಯಾವುದೇ ರೀತಿಯಿಂದ ತೊಂದರೆಯಾಗದಂತೆ ಸಿಎಂ ರವರು ಅಲ್ಲಿನ ಶಾಸಕರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ತಂಡ ಬರ ಅದ್ಯಯನ ಮಾಡಿಕೊಂಡು ಹೋಗಿದ್ದು ಅದರ ಪ್ರಕಾರ ಆದರೂ ಬರ ಅನುದಾನ ನೀಡಬೇಕಾಗಿತ್ತು ಅದನ್ನು ನೀಡಿಲ್ಲ ಎಂದು ಆರೋಪಿಸಿದರು.
ಬರಪೀಡಿತ ಪ್ರದೇಶಗಳಾದ ತೊದಲಬಾಗಿ ಗ್ರಾಮದ ಕಬ್ಬು ಬೆಳೆ ಹಾನಿ ವೀಕ್ಷಿಸಿ ಗದ್ಯಾಳ ಗ್ರಾಮದಲ್ಲಿ ಇಮಾಮಸಾನ ನದಾಪ್ ಅವರ ಜಮೀನಿನಲ್ಲಾದ ಗೋವಿನ ಜೋಳ ಹಾನಿ ವೀಕ್ಷಿಸಿದರು. ಗೋಠೆ ಗ್ರಾಮದ ಅರ್ಜಿನ ನಾಟಿಕಾರ, ಶಾಂತವ್ವ ನಾಟಿಕಾರ ಅವರ ಜಮೀನಲ್ಲಿ ಹಾನಿಯಾದ ತೊಗರಿ, ಗೋವಿನಜೋಳ ಪರೀಶೀಲಿಸಿ ಮೇವು ಸಂಗ್ರಹಣಾ ಕೇಂದ್ರ ಸ್ಥಾಪನೆ ಮಾಡುವ ಕುರಿತು ಸ್ಥಳ ಪರೀಶೀಲಿಸಿದರು.
ಕನ್ನೊಳ್ಳಿ ಗ್ರಾಮದಲ್ಲಿ ತೊಗರಿ ಬೆಳೆ ಹಾನಿ ವೀಕ್ಷಿಸಿ, ಕಡಪಟ್ಟಿ ಹಂಚಿನಾಳ ಗ್ರಾಮಗಳಲ್ಲಿ ನರೇಗಾ ಕಾಮಗಾರಿ ಪರೀಶೀಲಿಸಿದರು. ಹುನ್ನೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಅನೇಕರು ಹಾಗೂ ಅಧಿಕಾರಿಗಳು ಇದ್ದರು.
ಶಾಸಕರನ್ನು ಹೊರಗಿಟ್ಟ ಅಧಿಕಾರಿಗಳು:
ಜಮಖಂಡಿ ಕ್ಷೇತ್ರಕ್ಕೆ ಜಿಲ್ಲಾಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಬರಪೀಡಿತ ಪ್ರದೇಶಗಳೀಗೆ ಭೆಟ್ಟಿ ನೀಡುವ ಕುರಿತು ಅಧಿಕಾರಿಗಳು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಅವರಿಗೆ ಮಾಹಿತಿ ನೀಡದೆ ಇರುವದರಿಂದ ಶಾಸಕರ ಬೆಂಬಲಿಗರಲ್ಲಿ ತಿವ್ರ ಅಸಮಾಧಾನ ಮೂಡಿಸಿತು, ಅಧಿಕಾರಿಗಳು ಜಮಖಂಡಿಯಲ್ಲಿ ಶಾಸಕರಿಗೆ ಮಾಹಿತಿ ನೀಡದೆ ರಾಜಕಾರಣ ಮಾಡುತಿದ್ದಾರೆ, ಬಿಜೆಪಿ ಶಾಸಕರು ಎಂದು ಅವರನ್ನು ಹೊರಗಿಡುವ ಕಾರ್ಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮಖಂಡಿ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಅಬಕಾರಿ ಮತ್ತು ಉಸ್ತುವರಿ ಸಚಿವ ಆರ್.ಬಿ.ತಿಮ್ಮಾಪೂರ ಜಮೀನಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರೀಶೀಲನೆ ಮಾಡಿದರು.