ನೂತನ ಬಿಎಲ್ ಡಿ ಸೌಹಾರ್ದ ಬ್ಯಾಂಕ್ ಶಾಖೆಗೆ ಸಚಿವ ಪಾಟೀಲ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ : 24: ಬಿಎಲ್ಡಿ ಶಿಕ್ಷಣ ಸಂಸ್ಥೆಯು ಶ್ರೇಷ್ಠವಾದ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದು. ಹತ್ತು ಸಾವಿರ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಇದ್ದಾರೆ. ಅದರ ಜೊತೆಗೆ ಬಿಎಲ್ಡಿ ಸೌಹಾರ್ದ ಬಾಂಕ್ ಕೂಡಾ ತನ್ನ ಶಾಖೆಯನ್ನು ಬೆಳೆಸುತ್ತಿದೆ.ಈ ಭಾಗದ ರೈತರು. ವ್ಯಾಪರಸ್ಥರು ಆರ್ಥಿಕತೆಯಿಂದ ಬೆಳೆಯಬೇಕೆಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ಬಿ.ಎಲ್.ಡಿ ಸೌಹಾರ್ದ ಬ್ಯಾಂಕ್ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಮಖಂಡಿ ಪಟವರ್ಧನ ಮಹಾರಾಜ ಮೂಲಕ ಇದೊಂದು ಶೈಕ್ಷಣಿಕ ಮತ್ತು ಸಂಸ್ಕಾರವನ್ನು ಹೊಂದಿದ ಪ್ರದೇಶವಾಗಿದೆ. ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕ್ ಆಡಳಿತ ಮಂಡಳಿಯ ಸಹಕಾರ ಬಹಳ ಮುಖ್ಯವಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲು ಎರಡು ಸಂಸ್ಥೆಯಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಬ್ಯಾಂಕ್ಗಳಲ್ಲಿ ಸಾಲವನ್ನು ಪಡೆದುಕೊಳ್ಳುವ ಗ್ರಾಹಕರು. ಅದೆ ಸಾಲವನ್ನು ಮರಳಿ ತುಂಬುವ ಸಮಯದಲ್ಲಿ ಸರಿಯಾದ ಸಮಯಕ್ಕೆ ತುಂಬುವದಿಲ್ಲ. ಇದರಿಂದ ಬ್ಯಾಂಕ್ ಆಡಳಿತ ಮಂಡಳಿಯು ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಗ್ರಾಹಕರ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ಪಡೆದುಕೊಂಡಿರುವ ಸೌಹಾರ್ದ ಬ್ಯಾಂಕ್ ಆಗಿದೆ ಎಂದರು.
ಇಂದಿನ ದಿನಮಾನದಲ್ಲಿ ಸಂಸ್ಥೆಗಳನ್ನು ನಡೆಸಿಕೊಳ್ಳುವದು ಕಷ್ಟದಾಯವಾಗಿದೆ. ಶಿಸ್ತು, ಶ್ರದ್ಧೆಯಿಂದ ಆಡಳಿತ ಮಂಡಳಿಯಿಂದರೆ ಸಂಸ್ಥೆ ಬೆಳೆಯುತ್ತಿದ್ದೆ. ಈ ಭಾಗದಲ್ಲಿ ಸಂಪೂರ್ಣ ನೀರಾವರಿಯನ್ನು ಮಾಡಲಾಗಿದ್ದು. ಗಲಗಲಿ ಬ್ಯಾರೇಜ್ನಿಂದ ಕೆಲವು ಗ್ರಾಮಗಳು ನೀರಾವರಿ ಹೊಂದಿವೆ. ವಿದ್ಯುತ್ ಸಮಸ್ಯೆ ಇದೆ. ಹತ್ತು ಸಾವಿರ ಮೆಗಾವ್ಯಾಟ್ ಇದ್ದು. ಇವಾಗ ಮತ್ತೇ ಆರು ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಕಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದ ಹಿನ್ನಲೆಯಲ್ಲಿ ನೀರಿನ ಅಭಾವದಿಂದ ಹನ್ನೊಂದು ಸಾವಿರ ಮೆಗಾವ್ಯಾಟ್ ಬದಲಾವಣೆಯಾಗಿದೆ. ನಮ್ಮ ಸರಕಾರ ಹೆಸ್ಕಾಂ ಇಲಾಖೆಗೆ ನೂರು ಕೋಟಿ ರೂ, ನೀಡಲಾಗಿದೆ. ಕಲ್ಲಿದ್ದಲು ಖರೀದಿಸಲು ಅತೀ ಶೀಘ್ರದಲ್ಲಿ ಟೆಂಡರ್ ಕರೆಯಲಾಗುತ್ತದೆ. 850 ಮೆಗಾವ್ಯಾಟ್ ಸ್ವಲ್ಪ ತೊಂದರೆಯಾಗಿದೆ. ಇಂಡಸ್ಟ್ರೀಸ್ನಲ್ಲಿ ಮತ್ತೇ ಪವರಬೇಕಾಗಿದೆ. ಸಿಎಂ ಅವರು ಸಹಕಾರ ನೀಡುತ್ತಿದ್ದಾರೆ ಎಂದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಬಿ,ಎಲ್,ಡಿ ಸಂಸ್ಥೆ ಎಂದರೆ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಹತ್ತು ಸಾವಿರ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಬಿಎಲ್ಡಿ ಸೌಹಾರ್ದ 150 ಕೋಟಿ ವ್ಯವಹಾರ ನಡೆಯುತ್ತಿದೆ. ಇದರ ಸದುಪಯೋಗವನ್ನು ರೈತರು, ಕೃಷಿಕರು, ವ್ಯಾಪರಸ್ಥರು ಪಡೆದುಕೊಳ್ಳಬೇಕು. ಜಮಖಂಡಿ ಜಿಲ್ಲೆಯಾಗುವ ಎಲ್ಲ ಸ್ಥಾನಮಾನ ಹೊಂದಿದೆ. ಕಬ್ಬು ಬೆಳೆಗಾರರು, ಕೃಷಿಕರು, ಸಕ್ಕರೆ ಕಾರ್ಖಾನೆಗಳು ಹೊಂದಿದ್ದೆ. ಇಲ್ಲಿನ ವ್ಯಾಪಾರ, ವಹಿವಾಟಗಳು ಅತೀ ಹೆಚ್ಚು ನಡೆಯುತ್ತಿದೆ. ಈ ಭಾಗದ ಕಡೆಗೆ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯುತ್ ಸೌಕರ್ಯದ ವ್ಯವಸ್ಥೆಯನ್ನು ಕೂಡಾ ಮಾಡುವಬೇಕು. ಕಲ್ಲಿದ್ದಲು ಖರೀದಿಸಿ ಸಂಪೂರ್ಣವಾಗಿ ವಿದ್ಯುತ್ ಪೂರೈಕೆಯನ್ನು ಮಾಡಬೇಕೆಂದು ಸಚಿವ ಎಂ,ಬಿ,ಪಾಟೀಲರಿಗೆ ಮನವಿ ಮಾಡಿಕೊಂಡರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಆರ್ಥಿಕವಾಗಿ ಮುಂದುವರೆದ ತಾಲ್ಲೂಕು ಜಮಖಂಡಿಯಾಗಿದೆ. ಈ ಭಾಗ ಇನಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಬಿಎಲ್ಡಿ ಶಿಕ್ಷಣ ಸಂಸ್ಥೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಅದೇ ಸಂಸ್ಥೆಯಲ್ಲಿ ನಮ್ಮ ತಂದೆಯವರು ಹಾಗೂ ನಾನು ಕೂಡಾ ಶಿಕ್ಷಣ ಮುಗಿಸಿದೆವೆ. ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಗಳು ಬರಗಾಲ ಪೀಡಿತ ಪ್ರದೇಶವಾಗಿದ್ದವು. ಸಚಿವರಾದ ಎಂ,ಬಿ ಅವರೀಂದ ಇವಾಗ ಸಂಪೂರ್ಣವಾಗಿ ನೀರಾವರಿ ಹೊಂದಿವೆ. ತುಬಚಿ ಏತನೀರಾವರಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಬಾಗಲಕೋಟ, ಜಮಖಂಡಿ, ಕುಡಚಿ ರೈಲು ಮಾರ್ಗವನ್ನು ಆದಷ್ಟು ಬೇಗನೆ ಕಾಮಗಾರಿಯಾನ್ನು ಮುಗಿಸಬೇಕು. ಇದರಿಂದ ಈ ಭಾಗವು ಕೈಗಾರಿಕೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಠೇವಣಿದಾರ ಗ್ರಾಹಕರಿಗೆ ಪ್ರಮಾಣ ಪತ್ರವನ್ನು ಸಚಿವ ಎಂ.ಬಿ.ಪಾಟೀಲ ನೀಡಿದರು. ವೇದಿಕೆಯಲ್ಲಿ ವಿಪ ಸದಸ್ಯ ಸುನೀಲಗೌಡ ಪಾಟೀಲ ಇದ್ದರು. ಮುತ್ತಿನಕಂತಿ ಮಠದ ಶ್ರೀಗಳು ಆರ್ಶಿವಚನ ನೀಡಿದರು. ದಾನೇಶ್ವರಿ ಕಲ್ಯಾಣಶೆಟ್ಟಿ ಪ್ರಾರ್ಥನಿಸಿದರು, ಅರುಣಕುಮಾರ ಶಹಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಶ್ರೀನಿವಾಸ ಕಟ್ಟಿಮನಿ ನಿರೂಪಿಸಿ,ವಂದಿಸಿದರು.