ಶಿಗ್ಗಾವ್

ಬೇಡಿಕೆ ಈಡೇರಿಸಬೇಕೆಂದು ಸಚಿವ ಬೊಮ್ಮಾಯಿಯವರಿಗೆ ಮನವಿ

ಬೇಡಿಕೆ ಈಡೇರಿಸಬೇಕೆಂದು ಸಚಿವ ಬೊಮ್ಮಾಯಿಯವರಿಗೆ ಮನವಿ

ಶಿಗ್ಗಾವ 25: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು, ವಿಳಂಭವಾದಲ್ಲಿ ಮುಂಬರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು, ಬೆಳಗಾಂವ ಲೋಕಸಭಾ ಉಪಚುನಾವಣೆಯಲ್ಲಿ ಮಾದಿಗರ ಮತಗಳು ನಿರ್ಣಾಯಕವಾಗಿರುತ್ತವೆ, ಆದ ಕಾರಣ ಶೀಘ್ರವಾಗಿ ಈ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಪಟ್ಟಣದ ಪ್ರವಾಸಿ ಮಂದಿರಲ್ಲಿ ಮನವಿ ಅರ್ಪಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು ಸತ್ಯಯುಗ ಆರಂಭದಕ್ಕಿಂತಲೂ ಮುಂಚೆ ಈ ಭೂಮಿಯು ನೀರಾಕಾರವಾಗಿತ್ತು, ಅಂತಹ ಕಾಲಘಟ್ಟದಲ್ಲಿ ತಾವರೆ ಎಲೆಯ ಮೇಲೆ ನೀರಿನಲ್ಲಿ ತೆಲಾಡುತ್ತಾ ಹೋಗುವ ವ್ಯಕ್ತಿಯೇ ಆದಿಜಾಂಭವಂತ ಋಷಿಮುಣಿ, ಈ ಮಹಾನ್ ಋಷಿಮುನಿ ಪುರಸನೆ ಮಾದಿಗ ಜನಾಂಗದ ಮೂಲ ಪುರುಷ ಈ ಜಾಂಭವಂತ, ಋಷಿಮುಣಿಗಳಿಂದಲೇ ಆಕಾಶ, ಭೂಮಿ, ಲೋಕ, ಜನ, ಸೃಷ್ಠಿಯಾಯಿತು ಎಂಬುದಾಗಿ ಕುರುಹು ಇದೆ, ಈ ಜಗತ್ತಿನಲ್ಲಿ ಇತಿಹಾಸದ ಪುರಾಣ ಮತ್ತು ರಾಮಾಯಣ ಮಹಾಭಾರತ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಮಾದಿಗರ ಧರ್ಮ ನೀತಿಯನ್ನು ಇಡಿ ಜಗತ್ತಿಗೆ ಸಾರಿ ಹೇಳಿದ ಮಾನವ ಕುಲದ ಅಧಿಪತಿ ಜಂಭೂ ದ್ವೀಪದ ಮಹಾರಾಜನೇ ಆಧಿಜಾಂಭವಂತ ಋಷಿ ಆ ಜಾಂಭವಂತನ ವಂಶಸ್ಥರಾದ ಮಾದಿಗರು.

ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಎ. ನಾರಾಯಣಸ್ವಾಮಿ ರವರು ಚಿತ್ರದುರ್ಗ ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಸರಕಾರಿ ಕಾರ್ಯಕ್ರಮ ಉದ್ಘಾಟನೆ ಮಾಡಲು ಹೋದಾಗ ಇವರು ಅಸ್ಪಶೃಸ್ಯರು ಅನ್ನುವ ಒಂದೇ ಕಾರಣಕ್ಕೆ ಇಡೀ ಗ್ರಾಮವೇ ಹಾಕಿದ್ದು ತಮಗೆ ತಿಳಿದ ವಿಷಯ ಎಲ್ಲಾ ಜಿಲ್ಲೆಯಲ್ಲಿ ಅಸ್ಪಶೃಸ್ಯತೆಯು ಜೀವಂತವಿದೆ ಈ ಸಮಾಜವನ್ನು ಮುಖ್ಯ ವಾಹಿನಿಗೆ ತರಲು 2021 ರಂದು ಜರುಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ, ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹನಮಂತಪ್ಪ ಆಲ್ಕೋಡ ವಿ.ಪ ಸದಸ್ಯ ಆರ್.ಬಿ.ತಿಮ್ಮಾಪೂರ 

ದಲಿತ ರಾಜ್ಯ ಮುಖಂಡ ಡಿ.ಎಸ್.ಮಾಳಗಿ, ಮುಖಂಡರಾದ ಕರಿಯಪ್ಪ ಕಟ್ಟಿಮನಿ, ಹನಮಂತಪ್ಪ ಮಾದರ, ಯಲ್ಲಪ್ಪ ಬಿ. ಹರಿಜನ, ನಾಗರಾಜ ಮಾಳಗಿ, ಎಸ್.ಎಫ್.ಮಣಕಟ್ಟಿ, ಉಡಚಪ್ಪ ಮಾಳಗಿ, ಹೊನ್ನಪ್ಪ ತಗಡಿಮನಿ, ಮಾಲತೇಶ ಯಲ್ಲಾಪೂರ, ಸಿದ್ದಪ್ಪ ಹರಿಜನ, ಭೀಮಣ್ಣ ಹೊಟ್ಟೂರ, ಶಿವಾನಂದ ಮಾದರ, ತಾಯಪ್ಪ ಬೆಂಡಲಗಟ್ಟಿ, ಬಸಪ್ಪ ನಿಡಗುಂದಿ, ಲಕ್ಷ್ಮಣ ಕನವಳ್ಳಿ, ಬಸವರಾಜ ಕಟ್ಟಿಮನಿ ಸೇರಿದಂತೆ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಸುದ್ದಿ ಓದಿ