ಗಣಿ, ಕಂದಾಯ ಇಲಾಖೆ ಹೊಣೆ ಹೋರಬೇಕು: ರವೀಂದ್ರಗೌಡ ಪಾಟೀಲ ಎಚ್ಚರಿಕೆ
ರಾಣೇಬೆನ್ನೂರ,: 6 ಇಟ್ಟಿಗೆ ಭಟ್ಟಿಯವರು ತೋರಿಸುವ ಹಣದಾಸೆಗೆ ಬಲಿಯಾಗಿ ಕೆಲವು ರೈತರು ತಮ್ಮ ಫಲವತ್ತಾದ ಕೃಷಿ ಭೂಮಿಯ ಮಣ್ಣನ್ನು ಮಾರಾಟ ಮಾಡಿದ ಪರಿಣಾಮ ನಿರಂತರ ಸುರಿಯುತ್ತಿರುವ ಮಳೆನೀರು ಮತ್ತು ನದೀನೀರು 10 ರಿಂದ 12 ಅಡಿ ಆಳ ರೈತರ ಹೊಲದಲ್ಲಿ ಕೆರೆ ಮತ್ತು ಹೊಂಡದಂತೆ ತುಂಬಿತುಳುಕುತ್ತಿರುವುದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆಗಳೇ ಮುಖ್ಯ ಕಾರಣವಾಗಿದ್ದು ಇಟ್ಟಿಗೆ ಭಟ್ಟಿಯವರು ಮತ್ತು ಮಣ್ಣು ಮಾರಾಟದ ಲೀಜ್ ಪಡೆದವರು ಕೊಡುವ ಎಂಜಿಲಿನಾಸೆಗೆ ಬಲಿಯಾಗಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನೇ ಮರೆತು ಪ್ರಗತಿಪರ ಚಿಂತಕರು ಹೋರಾಟಗಾರರು ಮುಂದಿನ ದುಷ್ಟ ಪರಿಣಾಮದ ಬಗ್ಗೆ ಎಷ್ಟೇ ದೂರು ನೀಡಿದರೂ ಕ್ಯಾರೆ ಎನ್ನದೆ ಅಧಿಕಾರಿಗಳು ಈ ಅನಾಹುತ ನಡೆಯಲಿಕ್ಕೆ ಕಾರಣೀಕರ್ತರಾಗಿದ್ದಾರೆ. ಕೃಷಿ ವಲಯದ ಈ ಅಡ್ಡ ಪರಿಣಾಮದ ಹೊಣೆಯನ್ನು ನೇರವಾಗಿ ಗಣಿ ಮತ್ತು ಕಂದಾಯ ಇಲಾಖೆಯವರೇ ಹೋರಬೇಕೆಂದು ಪ್ರಗತಿಪರ ಚಿಂತಕ, ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.
ಅವರು ನಿನ್ನೆ ರಾಣೇಬೆನ್ನೂರು ತಾಲೂಕಿನ ತುಂಗಭದ್ರಾ ಮತ್ತು ಕುಮದ್ವತಿ ನದಿಪಾತ್ರದಲ್ಲಿ ಸಂಚರಿಸಿ ಮಣ್ಣು ಮಾರಾಟದಿಂದ ಆಗಿರುವ ಈ ದುಷ್ಟ ಪರಿಣಾಮವನ್ನು ಕಣ್ಣಾರೆ ಕಂಡು ಆಕ್ರೋಶಗೊಂಡು ಈ ಬಗ್ಗೆ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿರುವ ಅವರು ಈ ಹಿಂದೆ ಎಸ್.ಸಿ, ಎಸ್.ಟಿ ಜನಾಂಗದ ನಿರ್ಗತಿಕರಿಗೆ ಬದುಕುಕಟ್ಟಿಕೊಳ್ಳಲೆಂದು 1888 ನೇ ಸಾಲಿನಲ್ಲಿ ಆಗಿನ ಮುಂಬೈ ಗೌರ್ನಮೆಂಟ್ ಇನಾಮಬುಲೇಶನ್ ಆ್ಯಕ್ಟನ ಅಡಿಯಲ್ಲಿ ‘ಚಾಕರಿ’ ಜಮೀನಿನ ಫಲತವತ್ತಾದ ಮಣ್ಣನ್ನು ಈ ಬಡ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಣದ ಆಮೀಷ ತೋರಿಸಿ ಇಟ್ಟಿಗೆ ಭಟ್ಟಿಯವರು ಮತ್ತು ಮಣ್ಣು ಕ್ವಾರಿ ಲೀಜ್ ಪಡೆದವರು ಸುಮಾರು ವರ್ಷಗಳಿಂದ ಅಕ್ರಮವಾಗಿ ಈ ಮಣ್ಣು ಸಾಗಾಟ ಮಾಡುತ್ತಾ ಫಲತ್ತಾದ ರೈತರ ಕೃಷಿ ಭೂಮಿಯನ್ನು ಬರಡನ್ನಾಗಿ ಮಾಡಿ ಮಳೆಗಾಲದ ಇಂತಹ ಸಂದರ್ಭದಲ್ಲಿ ಆ ಹೊಲಗಳೆನ್ನೆಲ್ಲಾ ಕೆರೆ ಕಟ್ಟೆಗಳನ್ನಾಗಿ ಮಾಡುತ್ತಿದ್ದರೆ ಅಕ್ಕಪಕ್ಕದ ಅಮಾಯಕ ರೈತರ ಜಮೀನುಗಳಿಗೆ ಈ ನಿಂತ ನೀರಿನಿಂದ ಆಗುತ್ತಿರುವ ತೊಂದರೆ ವಿನಾಃಕಾರಣ ನಷ್ಟ ಅಷ್ಟಿಷ್ಟಲ್ಲಾ, ಇದೇ ರೀತಿ ಪರಿಸ್ಥಿತಿ ಮುಂದುವರಿದು ಫಲವತ್ತಾದ ಕೃಷಿಭೂಮಿ ಇಂತಹ ಮಣ್ಣುಗಳ್ಳರಿಂದ ಬರಡು ಭೂಮಿಯಾದರೆ ಮುಂದಿನ ದಿನಮಾನಗಳಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುವ ಕ್ಷೇತ್ರ ಕಡಿಮೆಯಾದರೆ ಆಹಾರದ ಅಭಾವವಾಗಿ ಮನುಷ್ಯರನ್ನು ಮನುಷ್ಯನೇ ಕೊಂದು ತಿನ್ನುವ ಪರಿಸ್ಥಿತಿ ಬಂದರೆ ಅಚ್ಚರಿ ಪಡಬೇಕಾಗಿಲ್ಲ. ವಿಜ್ಞಾನ ಎಷ್ಟೇ ಮುಂದುವರೆದರೂ ಆಹಾರ ಧಾನ್ಯಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಪಾಟೀಲರು ಸರಕಾರ ಒಂದು ಕಡೆ ಎಸ್.ಸಿ/ ಎಸ್.ಟಿ. ಜನಾಂಗದವರಿಗೆ ಸರಕಾರ ಕೊಟ್ಟ ‘ಚಾಕರಿ’ ಜಮೀನನ್ನು ಮಾರಾಟ ಮಾಡಬಾರದೆಂದು ಆದೇಶ ಮಾಡುತ್ತಿದೆ. ಇನ್ನೊಂದು ಕಡೆ ತಮ್ಮ ಸರಕಾರದ ವಿವಿಧ ಇಲಾಖೆಗಳ ಮುಖಾಂತರ ಈ ರೀತಿ ಅನಾಹುತ ಮಾಡಿಸಿ ಬಹುದೊಡ್ಡ ಪ್ರಮಾಣದ ಹಣದ ಭ್ರಷ್ಟಾಚಾರ, ಅವ್ಯವಹಾರ ನಡೆಯಲಿಕ್ಕೆ ಅನುವು ಮಾಡಿಕೊಡುತ್ತಿದೆ.
ಈ ಅಕ್ರಮ ಮಣ್ಣನ್ನು ಹೇರಿಕೊಂಡು ದೊಡ್ಡ ದೊಡ್ಡ ಲಾರಿಗಳು ಸುಸ್ಥಿತಿಯಲ್ಲಿರುವ ಗ್ರಾಮೀಣ ಭಾಗದ ಸಿ.ಸಿ. ರಸ್ತೆಗಳನ್ನು, ಡಾಂಬರ ರಸ್ತೆಗಳನ್ನು ಹಾಳು ಮಾಡುತ್ತಿದ್ದರೆ ಇದನ್ನು ನಿಯಂತ್ರಿಸಿ ಟನ್ಎಜ್ ನಿಗದಿಪಡಿಸಿ ದಂಡವಿಧಿಸಿ ತಪ್ಪಿತಸ್ಥರ ಮೇಲೆ ಕಾನೂನು ಜಾರಿಗೆ ತರಬೇಕಾದ ಆರ್.ಟಿ.ಓ ಮತ್ತು ಪೊಲೀಸ್, ಪಿ.ಡಬು.್ಲಡಿ ಇಲಾಖೆಗಳು ಈ ಹೆಸರಿನಿಂದ ಲೂಟಿ ಹೊಡೆಯುತ್ತಿವೆ. ಫಲವತ್ತಾದ ಕೃಷಿಭೂಮಿ ಈ ರೀತಿಯಾಗಿ ಭರಡಾಗುತ್ತಿದ್ದರೆ ಪ್ರಸಕ್ತ ಸಂದರ್ಭದಲ್ಲಿ ಪ್ರತಿ ವರ್ಷಕ್ಕೆ ಒಂದೊಂದು ತಾಲೂಕಿನಲ್ಲಿ 1500 ರಿಂದ 2000 ಎಕರೆ ಫಲವತ್ತಾದ ಕೃಷಿಭೂಮಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಲೇಓಟ್ (ವಸತಿ ಪ್ರದೇಶ) ವಾಗಿ ಮಾರ್ಾಡಾಗುತ್ತಿದೆ. ಅನಧಿಕೃತ ಲೇಓಟಗಳ ಹಾವಳಿ ಹೇಳತೀರಿದು. ನಿಯಂತ್ರಿಸಬೇಕಾದ ಜಿಲ್ಲಾಧಿಕಾರಿಗಳ ಕಛೇರಿ, ರಜಿಸ್ಟರ್ ಮತ್ತು ಸಬ್ ರಜಿಸ್ಟರ್ ಕಛೇರಿಗಳು ಅಕ್ರಮ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಅನುಸರಿಸುತ್ತಾ ಅಕ್ರಮಕ್ಕೆ ಅನುವು ಮಾಡಿಕೊಡುತ್ತದೆ. ಜೊತೆಗೆ ರೈತ ಆರ್ಥಿಕ ಅಭಿವೃದ್ಧಿಗಾಗಿ ವಾಣಿಜ್ಯ ಬೆಳೆಗಳಿಗೆ ಮಾರುಹೋಗಿ ಶುಂಠಿ, ಕಬ್ಬು, ಅಡಿಕೆ, ಸಾಗವಾನಿ ವಿವಿಧ ತಳಿಯ ಫಲಪುಷ್ಪಗಳಿಗೆ ಒತ್ತು ನೀಡುತ್ತಿದ್ದು ಆಹಾರದ ಬೆಳೆಗಳಿಗೆ ವಿದಾಯ ಹೇಳುತ್ತಿದ್ದಾನೆ.
ಅಡಿಕೆ ಬೆಳೆಗಾರರಂತು ಹೆಚ್ಚಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ‘ಇಮಾಮ್ (ಚಾಕರಿ) ಜಮೀನು ಮತ್ತು ಇತರೇ ಜಮೀನುಗಳಲ್ಲಿಯ ಫಲವತ್ತಾದ ಮಣ್ಣು ಈ ರೀತಿ 10 ರಿಂದ 12 ಅಡಿಯಷ್ಟು ಮಾರಾಟವಾದರೆ ಬೆಳೆ ಬೆಳೆಯುವುದಾದರೂ ಹೇಗೆ? ಈ ಭೂಮಿ ಈ ಕ್ಷಣದಿಂದಲೇ ಬರಡು ಭೂಮಿಯಾಗಿ ಮಾರ್ಾಡಾಗುತ್ತದೆ. ಹೀಗೆಯೇ ಮುಂದುವರೆದರೆ ದೇಶದಲ್ಲಿ ಆಹಾರದ ಅಭಾವ ಉಂಟಾಗಿ ಆಹಾರಕ್ಕೆ ಈ ಹಿಂದೆ ನಮ್ಮ ಪೂರ್ವಜರು ಪರದಾಡಿದಂತೆ ಪರಿದಾಡುವ ಪರಿಸ್ಥಿತಿ ಬಂದೊದಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ಪಾಟೀಲರು 50 ವರ್ಷಗಳ ಹಿಂದೆ ದೇಶದಲ್ಲಿ ಇಂತಹ ಭೀಕರ ಆಹಾರದ ಅಭಾವ ಉಂಟಾಗಿ ಆಹಾರಕ್ಕೆ ‘ಹಾಹಾಕಾರ’ ಎದ್ದಾಗ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ‘ಹಸಿರುಕ್ರಾಂತಿ’ ಘೋಷಿಸಿ ಗರೀಬಿ ಹಠಾವೋ ಜಾರಿಗೆ ತಂದಿದ್ದನ್ನು ಸ್ಮರಿಸಿರುವ ಪಾಟೀಲರು ಜಿಲ್ಲಾಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕು ಇಲ್ಲದಿದ್ದರೆ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸಿದಾಗ ಈ ಬಗ್ಗೆ ಗಮನ ಸೆಳೆಯುವ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಪಾಟೀಲರು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಸಿದ್ದಾರೆ.