ಧಾರವಾಡ - ಹುಬ್ಬಳ್ಳಿ

ಪವಿತ್ರ ಶ್ರಾವಣ ಮಾಸದಲ್ಲಿ ಸಿದ್ಧರಾಮ ಮಹಾಸ್ವಾಮಿಜಿ ಅವರನ್ನು ಭೇಟಿ

ಪವಿತ್ರ ಶ್ರಾವಣ ಮಾಸದಲ್ಲಿ  ಸಿದ್ಧರಾಮ ಮಹಾಸ್ವಾಮಿಜಿ ಅವರನ್ನು ಭೇಟಿ

ಹುಬ್ಬಳ್ಳಿ,08: ಪವಿತ್ರ ಶ್ರಾವಣ ಮಾಸದಲ್ಲಿ ಮಹಾತ್ಮರ, ಪುಣ್ಯಪುರುಷರ, ಮಹಾಸ್ವಾಮಿಜಿಗಳ ದರ್ಶನ ಆಶೀರ್ವಾದ ಪಡೆಯುವ ಅಂಗವಾಗಿ ಗದಗ-ಡಂಬಳ ಎಡಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ಅವರನ್ನು ಭೇಟಿ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಗೌರವ ನಮನ, ಪ್ರಣಾಮಗಳನ್ನು ಸಲ್ಲಿಸಿದರು. ದರ್ಶನ ಆಶೀರ್ವಾದ ಪಡೆದರು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಉದ್ದಮಿ ಶಂಕರ ಕೋಳಿವಾಡ, ಅನಿಲ ಲಿಂಗಶೆಟ್ಟರ, ಕಲ್ಲಪ್ಪ ಗುಂಜಾಳ, ಮುಂತಾದವರು ಇದ್ದರು.  

ಗದಗ-ಡಂಬಳ ಎಡಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಕರ್ನಾಟಕದಲ್ಲಿ ಸುಪ್ರಸಿದ್ದ ಮಠವಾಗಿದ್ದು, ಎಲ್ಲ ವರ್ಗದ ಭಕ್ತರನ್ನು ಸೆಳೆಯುವ ಪುಣ್ಯ ತಾಣವಾಗಿದೆ. ಪುಸ್ತಕ ಪ್ರಸಾರ ಕಾರ್ಯದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದೆ. ಬಸವ ತತ್ವದ ಮಠವಾಗಿದ್ದು ಎಲ್ಲರನ್ನು ಗೌರವಿಸುವ, ಸನ್ಮಾನಿಸುವ ವಿಶೇಷತೆ ಹೊಂದಿದೆ. 


ಸುದ್ದಿ ಓದಿ