ಇಂಡಿ

ಮಾನಸಿಕ ಜನಜಾಗೃತಿ ಕಾರ್ಯಕ್ರಮ

ಮಾನಸಿಕ ಜನಜಾಗೃತಿ ಕಾರ್ಯಕ್ರಮ

ಇಂಡಿ: ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪರಿಸರ ಸ್ವಚ್ಛತೆಯೇ ಕಾರಣ ಎಂಬ ಭಾವನೆ ಹೊಂದಿದ್ದ ಮಹಾತ್ಮಾ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಚ್ಛ ಇಂಡಿ, ಸ್ವಚ್ಛ ಪ್ಲಾಸ್ಟಿಕ್ ಮುಕ್ತ ಮಾಡೋಣ ಎಂದು ಪುರಸಭೆ ಕಿರಿಯ ಆರೋಗ್ಯ ನೀರಿಕ್ಷಕ ಎಲ್‌.ಎಚ್‌. ಸೋಮುನಾಯ್ಕ ಹೇಳಿದರು. 

ಅವರು ಶುಕ್ರವಾರ ಪಟ್ಟಣದ ಪುರಸಭೆ ಕಾರ್ಯಲಯದ ಎದುರಿಗೆ ನೈರ್ಮಲ್ಯ ಮತ್ತು ನಿಷೇಧಿತ ಪ್ಲಾಸ್ಟಿಕ್ ಕವರ, ಸ್ಯಾನಿಟೇಷನ್‌-ಡೇ ಹಾಗೂ ಮಾನಸಿಕ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಗಾಂಧೀಜಿ ಅವರು ಇರುವಾಗಲೇ ಹಲವು ವರ್ಷಗಳ ಹಿಂದೆಯೇ ಸ್ವಚ್ಛ ಭಾರತ ಆಂದೋಲನ ರೂಪುಗೊಂಡಿದ್ದು. ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ ಎಂಬ ಗಾಂಧೀಜಿ ಅವರ ಆಶಯದಂತೆ ನಾಗರಿಕರು ಸ್ವಚ್ಛತೆಯ ಬಗ್ಗೆ ಜಾಗೃತಿರಾಗಬೇಕು. ಪ್ಲಾಸ್ಟಿಕ್ ಬಳೆಕೆಯನ್ನು ಬಿಟ್ಟು, ಬಟ್ಟ್ಟೆಯ ಚೀಲಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಇಂಡಿ ತಾಲೂಕು ನಿರ್ಮಾಣಕ್ಕೆ ಸಹಕರಿಸಬೇಕು ಎಂದರು. 

ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ನಜೀರ ಮುಲ್ಲಾ, ಚಂದು ಕಾಲೇಬಾಗ, ಮುತ್ತು ಮುರಾಳ, ಶ್ರೀಶೈಲ ಹಾದಿಮನಿ, ಹುಚ್ಚಪ್ಪ ಶಿವಶರಣ, ಸೇರಿದಂತೆ ಪುರಸಭೆಯ ಪೌರ ಕಾರ್ಮಿಕರು ಇದ್ದರು. 


ಸುದ್ದಿ ಓದಿ