ಎಸ್ಎಫ್ಐನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ: ಮ್ರತ್ಯುಂಜಯ ಗುದಿಗೇರ
ರಾಣಿಬೆನ್ನೂರ:10 ವಿದ್ಯಾರ್ಥಿಗಳು ಆಳವಾದ ಅಧ್ಯಯನಕ್ಕೆ ಮುಂದಾಗಬೇಕು. ಊರು, ಕುಟುಂಬ, ದೇಶ, ಸಮಾಜದ ಬಗ್ಗೆ ಹೆಚ್ಚಿನ ಕಳಕಳಿ ಹೊಂದಬೇಕು. ಅಭ್ಯಾಸ ಜೊತೆಯಲ್ಲಿ ಹೋರಾಟ ನಡೆಸುತ್ತಾ ಶಿಕ್ಷಣದ ಬಲವರ್ಧನೆಗೆ ಮುಂದಾಗಬೇಕು ಆ ಮೂಲಕ ದೇಶ ಕಟ್ಟಲು ಆಶ್ರಯಾಗಬೇಕು. ಹೋರಾಟಗಳು ಮುಖ್ಯವಾಗಬೇಕು ಎಂದು ಎಸ್ಎಫ್ಐ ಮಾಜಿ ಅಧ್ಯಕ್ಷ ಹಾಗೂ ವಕೀಲ ಮೃತ್ಯುಂಜಯ ಗುದಿಗೇರ ಹೇಳಿದರು.
ಇಲ್ಲಿನ ಮಾರುತಿನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಎಸ್ಎಫ್ಐನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಎಲ್ಲರಿಗೂ ಸಿಗುವಂತೆ ಹೋರಾಟ ನಡೆಸಿ ಅನ್ಯಾಯವನ್ನು ಪ್ರಶ್ನೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಅನ್ಯಾಯಕ್ಕೆ ನ್ಯಾಯವನ್ನು ಕಂಡುಕೊಳ್ಳಲು ಹೋರಾಟದಿಂದ ಮಾತ್ರ ಸಾಧ್ಯ ಎಂದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತಾನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಾದ ಬಸ್ ಸೌಲಭ್ಯ, ವಿದ್ಯಾರ್ಥಿವೇತನ, ವಸತಿ ನಿಲಯ, ಗ್ರಂಥಾಲಯ, ಕುಡಿಯುವ ನೀರು, ಪಠ್ಯಕ್ರಮ ಹಲವಾರು ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದರು.
ಸೌಹಾರ್ಧತೆಯ ಸ್ನೇಹ ಐಕ್ಯತೆಯಿಂದ ಕೂಡಿದ ಈ ದೇಶ ನಾಡು ನುಡಿ, ಶಿಕ್ಷಣದ ಉಳಿವಿಗಾಗಿ ಹೋರಾಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಎಸ್ಎಫ್ಐಗೆ ಸೇರ್ಪಡೆಯಾಗಬೇಕು. ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸೋಣ, ಕ್ಯಾಂಪಸ್ ಡೆಮಾಕ್ರಸಿ ಗಟ್ಟಿಗೊಳಿಸೋಣ ಎಂದು ಹೇಳಿದರು.
ಉಪನ್ಯಾಸಕ ಚುಂದು ನಾಯಕ ಮಾತನಾಡಿ, ಎಸ್ಎಫ್ಐ ವಿದ್ಯಾರ್ಥಿ ಚಳುವಳಿ ಹೆಮ್ಮರವಾಗಿ ಬೆಳೆಯಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ವಿದ್ಯಾರ್ಥಿಗಳು ಸಂಘಟಿತರಾಗಬೇಕು. ಸಂಘಟನೆ ಮೂಲಕ ಶಿಕ್ಷಣದ ಹಕ್ಕುಗಳನ್ನು ಪಡೆಯಬೇಕು. ಕಾಲೇಜ್ ಅಭಿವೃದ್ಧಿ ಮಂಡಳಿ ಮೂಲಕ ಕಾಲೇಜಿನ ಅಭಿವೃದ್ಧಿಗಾಗಿ ನಿಮಗೆ ಕೈ ಜೋಡಿಸುತ್ತೇವೆ ಎಂದು ಶುಭಕೋರಿದರು.
ಪ್ರಾಚಾರ್ಯ ಎಚ್.ಎಂ. ದೊಡ್ಡಬಿಲ್ಲಾ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಉಪಾಧ್ಯಕ್ಷ ನೇಹಾಲ್ ಖಾನ್ ಗಂಗಾವತಿ ಇದ್ದರು. ಕಾಲೇಜಿನ ಗೌತಮ್ ಸಾವಕ್ಕನವರ, ಮಹೇಶ್ ಮರೋಳ, ಬಸವರಾಜ ಕೊಣಸಾಲಿ, ನಾಗರಾಜ ಬಾಗಲದವರ, ಮಸೀಯಾ ಬಾನು, ಲಕ್ಷ್ಮೀ ಎಸ್ ಎಚ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಹೊಸದಾಗಿ ಸದಸ್ಯತ್ವ ಪಡೆದರು.