ಬೆಳಗಾವಿ

ಹತ್ತರಗಿ ರೈತ ಸಂಘದ ಸದಸ್ಯರಿಂದ ಲೋಕೋಪಯೋಗಿ ಸಚಿವರಿಗೆ ಅಭಿನಂದನೆ

ಹತ್ತರಗಿ ರೈತ ಸಂಘದ ಸದಸ್ಯರಿಂದ ಲೋಕೋಪಯೋಗಿ ಸಚಿವರಿಗೆ ಅಭಿನಂದನೆ

ಲೋಕದರ್ಶನ ವರದಿ 

            ಯಮಕನಮರಡಿ 13 : ಸಮೀಪದ ಹತ್ತರಗಿ ಗ್ರಾಮದ ಕರ್ನಾಟಕ ರೈತ ಸಂಘ ಮತ್ತು ಹಸುರ ಸೇನೆ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು ಸನ್ಮಾನ್ಯ ಲೋಕೋಪಯೋಗಿ ಸಚಿವರಿಗೆ ಅಭಿನಂದಿಸಿದ್ದಾರೆ ಹತ್ತರಿಗಿ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿ ಕೊಡುವಂತೆ ಮನವಿ ಪತ್ರವನ್ನು ಮಾನ್ಯ ಸಚಿವರಿಗೆ ಸಲ್ಲಿಸಲಾಗಿತ್ತು ಸದರಿಯವರು ನಮ್ಮ ಮನವಿ ಪತ್ರವನ್ನು ಒಲಂಕುಶವಾಗಿ ಮನವರಿಕೆ ಮಾಡಿಕೊಂಡದ್ದು ನಮಗೆಲ್ಲ ಸಂತೋಷವನ್ನುಂಟು ಮಾಡಿದೆ ಕಾಮಗಾರಿ ಪ್ರಾರಂಭಿಸಲು ಮಾನ್ಯಕರ್ನಾಟಕ ಸರಕಾರ ನೀರಾವರಿ ಇಲಾಖೆ ಸಚಿವರಿಗೆ ನಮ್ಮ ಮನವಿ ಪತ್ರ ಜತೆಗೆ ತಮ್ಮ ಆದೇಶ  ಪತ್ರವನ್ನು ಕಳಿಸಿದ್ದು ನಮ್ಮೆಲ್ಲರಿಗೆ ಖುಷಿ ತಂದುಕೊಟ್ಟಿದೆ ಬಹುದಿನಗಳ ಬೇಡಿಕೆ ಆಗಿರುವ ರೈತರ ನೀರಾವರಿ ಸೌಲಭ್ಯ ಕಾಮಗಾರಿಯು ಕೂಡಲೆ ಪ್ರಾರಂಭವಾದಲ್ಲಿ ರೈತರ ಕನಸು ನನಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

              ಇದರ ಜೊತೆಗೆ ಬಹುದಿನಗಳಿಂದ ಅರ್ಧಟ್ಟಕ್ಕೆ ನಿಂತ ರಸ್ತೆ ಕಾಮಗಾರಿಗಳನ್ನು ಖುದ್ದಾಗಿ ಬಂದು ಪರೀಶೀಲಿಸಿಕೂಡಲೇ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಮತ್ತಷ್ಟು ರೈತರು ತಮ್ಮ ಜಮೀನುಗಳನ್ನು ಸಾಗುವಳಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ರೈತ ಸಂಘದ ಎಲ್ಲ ಸದಸ್ಯರು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ ನಮ್ಮ ರೈತ ಸಂಘದ ಸಂಪೂರ್ಣ ಬೆಂಬಲವನ್ನು ತಮಗೆನೀಡುವುದಾಗಿ ತಮ್ಮ ಭರವಸೆಯನ್ನು ಮುಂದಿಟ್ಟಿದ್ದಾರೆ ಅಲ್ಲದೆ ಮುಂಬರುವ ಜೀಪಂ ಮತ್ತು ತಾಪಂ ಚುನಾವಣೆಯಲ್ಲಿ ನಮ್ಮ ರೈತ ಸಂಘದ ಸದಸ್ಯರಿಗೆ ತಾಲೂಕು ಪಂಚಾಯಿತಿ ಸ್ಥಾನವನ್ನು ಕಲ್ಪಿಸಿ ಕೊಡುವುದರ ಜೊತೆಗೆ ರೈತರನ್ನು ಬದುಕಿಸುತ್ತೀರಿ ಎಂದು ನಂಬಿಕೊಂಡಿರುವ ರೈತ ಬಳಗವು ಕೇಳಿಕೊಂಡಿದ್ದು ಇರುತ್ತದೆ ಹತ್ತರಿ ಗಿ ತಾಪಂ ಸ್ಥಾನವು ಓಬಿಸಿ ಆಗಿದ್ದು ಇರುತ್ತದೆ ಕಾರಣ ಸನ್ಮಾನ್ಯರು ನಮ್ಮ ರೈತ ಸಂಘಕ್ಕೆ ಒಂದು ಸ್ಥಾನವನ್ನು ಮೀಸಲಾಗಿಡಬೇಕೆಂದು ವಿನಂತಿಸಿಕೊಳ್ಳುತ್ತೇವ 


ಸುದ್ದಿ ಓದಿ