ಬಜೆಟ್ ಮಂಡನೆಯಲ್ಲಿ ಸದಸ್ಯರ ಗದ್ದಲ
ಜಮಖಂಡಿ 07: ನಗರಸಭೆಯ ಆಯ,ವ್ಯಯದ ಎಲ್ಲ ಮೂಲದಿಂದ 2352,60 ರೂ,ಲಕ್ಷಗಳ ಆದಾಯ ಮತ್ತು ಖರ್ಚು ವೆಚ್ಚಗಳು ಸೇರಿ 2347,86 ರೂ,ಲಕ್ಷ ಅಳವಡಿಸಿಕೊಂಡು 4,74 ಲಕ್ಷ ರೂ,ಗಳ ನೀರೀಕ್ಷಿತ ಉಳಿತಾಯವನ್ನು ಹೊಂದಿದೆಂದು ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ತಿಳಿಸಿದರು.
ನಗರಸಭೆಯ ಸಭಾ ಭವನದಲ್ಲಿ ನಡೆದ 2023-24 ನೇ ಸಾಲಿನ ಬಜೇಟ್ ಮಂಡನೆಯಲ್ಲಿ ಮಾತನಾಡಿದ ಅವರು, ಬೀದಿ ಬದಿ ದೀಪಗಳು, ಪಾದಚಾರಿ ಪುಟ್ಪಾತ್ಗಳು, ಚರಂಡಿಗಳು, ಒಳಚರಂಡಿಗಳು, ಗಾರ್ಡನ ಅಭಿವೃದ್ಧಿಗಳು, ಡೀಜೀಟಲ್ ಮಾದರಿಯ ಜಾಹೀರಾತುಗಳು, ಸ್ಮಶಾನ ಅಭಿವೃದ್ಧಿ, ಏರೆಹುಳ ಗೊಬ್ಬರ ಘಟಕ ಅಭಿವೃದ್ಧಿ, ಹೊಸ ಮಾದರಿಯ ಎಲ್ಲ ಸರ್ಕಲ್ಗಳ ಅಭಿವೃದ್ಧಿ, ರಸ್ತೆಗಳು, ಸಂಚಾರಿ ದೀಪಗಳು, ಶೌಚಾಲಯಗಳು, ಎಸ್,ಡಿ,ಪಿ ಘಟಕ ಸೇರಿದಂತೆ ವಿವಿಧ ಬಗ್ಗೆಯ ಅಭಿವೃದ್ಧಿಗೆಯನ್ನು ಮಾಡುವ ಗುರಿಯನ್ನು ಹೊಂದಿದೆ ಎಂದರು.
ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಬಜೇಟ್ ಮಂಡನೆಯನ್ನು ತಿಳಿಸುತ್ತಿದಂತೆ. ಮಾಜಿ ನಗರಸಭೆಯ ಅಧ್ಯಕ್ಷ ಸಿದ್ದು ಮೀಶಿ ಮಾತನಾಡಿ, ಬುಕ್ಲೇಟ್ ಓದುವದು ಬೇಡರಿ. ಒಟ್ಟು ಖರ್ಚು,ವೆಚ್ಚಗಳ ಬಗ್ಗೆ ಮಾತ್ರ ತಿಳಿಸಿ ಎಂದರು. ನಗರಸಭೆ ಸದಸ್ಯ ಕುಶಾಲ ವಾಗಮೋರೆ ಮಾತನಾಡಿ, ಈ ಹಿಂದೆ 4 ಕೋಟಿ ರೂ, ಬಜೇಟ್ನಲ್ಲಿ ನನ್ನ ವಾರ್ಡಿನಲ್ಲಿ 1,ರೂ,ಗಳನ್ನು ಸಹ ಹಾಕಿಲ್ಲ. ಹೀಗಾದರೆ ವಾರ್ಡ ಅಭಿವೃದ್ದಿ ಮಾಡಲು ಹೇಗೆ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.
ರಾಜು ತೆಲಸಂಗ ಮಾತನನಾಡಿ, ಸ್ಮಶಾನ ಅಭಿವೃದ್ಧಿಗೆ ಮೀಸಲು ಇಟ್ಟಿರುವ ಹಣವನ್ನು ದುರ್ಬಳಕ್ಕೆ ಮಾಡಿ. ಯಾವುದೇ ಸ್ಮಶಾನಗಳ ಅಭಿವೃದ್ಧಿಯನ್ನು ಮಾಡಿರುವುದಿಲ್ಲ ಎಂದು ಆರೋಪಿಸಿದರು. ವಾರ್ಡ ನಂ,6 ರ ಸದಸ್ಯೆನಿ ಮಾತನಾಡಿ, ನನ್ನ ವಾರ್ಡನಲ್ಲಿ ರಸ್ತೆಗಳು ತೆಗ್ಗು,ಗುಂಡಿಗಳು ಬಿದ್ದು ವಯೋವೃದ್ದರು ಬಿದ್ದು ಕೈ,ಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಅಧ್ಯಕ್ಷ ಹಾಗೂ ಕಮೀಷನರ ಗಮನಕ್ಕೆ ತಂದರು ಕ್ಯಾರೆ ಮಾಡುತ್ತಿಲ್ಲ. ಹೀಗಾದರೆ ನಾನು ನಗರಸಭೆಯ ಮುಂದೆ ಪೆಂಡಾಲ ಹಾಕಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಗುರುಪಾದ ಮೆಂಡಿಗೇರಿ, ವಿನಾಯ ಗೌಳಿ, ಪ್ರಶಾಂತ ಶೆಂಕ್ರ್ಪಗೋಳ, ರಾಜು ಚಿಕ್ಕನಾಳ, ಪ್ರಶಾಂತ ಚರಕಿ ಸೇರಿಕೊಂಡು ಬಿಜೆಪಿ ಸದಸ್ಯರನ್ನು ಯಾವುದೇ ಅನುದಾನ ನೀಡದೆ ಕಡೆಗಣಿಸುತ್ತಿದ್ದರಿ. ನಿಮ್ಮ ಮನಸಿಗೆ ಬಂದಂತೆ ಕೆಲಸ ನಿರ್ವಹಿಸುತ್ತಿದಿರಿ. ಇಲ್ಲಿ ಹೇಳುವರು ಇಲ್ಲ. ಕೇಳುವರು ಇಲ್ಲದಂತೆಯಾಗಿದೆ ನಗರಸಭೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದಂತೆ ನಗರಸಭೆಯ ಅಧ್ಯಕ್ಷ ದಾನೇಶ ಘಾಟಗೆ ವೇದಿಕೆಯಿಂದ ಕೆಳಗೆ ಇಳಿದು ಬಂದು ಎಲ್ಲರನ್ನು ಸಮಾಧಾನ ಪಡಿಸುವ ಪ್ರಸಂಗ ನಡೆಯಿತು.
ಮಾಜಿ ನಗರಸಭೆ ಉಪಾಧ್ಯಕ್ಷೆ ಮಲ್ಲವ್ವ ಪಾಯಗೊಂಡ ಮಾತನಾಡಿ, ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿಯೊಂದು ಕೆಲಸಕ್ಕೆ ಲಂಚವನ್ನು ಕೇಳುತ್ತಿದಾರೆ. ಮನೆಯ ಉತ್ತಾರೆಗಳನ್ನು ನೀಡಬೇಕಾದರೆ 5 ಸಾವಿರದಿಂದ 10 ಸಾವಿರದವರೆಗೆ ಹಣವನ್ನು ಕೇಳುತ್ತಿದ್ದಾರೆಂದು ಜನ ನಮ್ಮ ಮುಂದೆ ಬಂದು ಹೇಳುತ್ತಿದ್ದಾರೆ. ನಗರಸಭೆಯಲ್ಲಿ ಹೇಳುವರು ಇಲ್ಲ, ಕೇಳುವರು ಇಲ್ಲ ಎಂದು ನಗರಸಭೆಯ ಆವರಣದಲ್ಲಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ನಗರಸಭೆಯ ಅಧ್ಯಕ್ಷ ದಾನೇಶ ಘಾಟಗೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ ಶಿಂಧೆ, ಉಪಾಧ್ಯಕ್ಷೆನಿ ಪಕಾಲಿ ವೇದಿಕೆಯಲ್ಲಿ ಉಪಸ್ಥಿತರಿದರು. ಇಲ್ಲಿನ ನಗರಸಭೆಯಲ್ಲಿ ನಡೆದ 23-24ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಸದಸ್ಯರ ಗದ್ದಲ. ಅಧ್ಯಕ್ಷ ಸಮಾಧಾನ ಪಡಿಸುತ್ತಿರುವುದು,