ಧಾರ್ಮಿಕ ಪೂಜೆ ವಿಧಿ ವಿಧಾನಗಳಿಗೆ ನೈಸರ್ಗಿಕವಾದ ಗಣಪನನ್ನು ಬಳಸಲು ಮೆಹಂದಳೆ ಕರೆ
ರಾಣೇಬೆನ್ನೂರು:ಸೆ 16 : ನೈಸರ್ಗಿಕವಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಮಣ್ಣಿನ ಗಣೇಶನನ್ನೇ ಪೂಜಿಸಿ-ಪರಿಸರ ಹಾನಿ ತಡೆಗಟ್ಟಲು ಸರ್ವರೂ ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಪರಿಸರ ಪ್ರೇಮಿ ಡಾ.ಜಿಜೆ ಮೆಹೆಂದಳೆ ಹೇಳಿದರು.
ತಾಲೂಕಿನ ಕುಮಾರ ಪಟ್ಟಣಂ ಗ್ರಾಮದಲ್ಲಿ ಮಣ್ಣಿನಿಂದ ತಯಾರಿಸಿರುವ ಗಣಪತಿಗಳು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೆರೆ. ಬಾವಿ,ಹಳ್ಳ,ನದಿಗಳಲ್ಲಿ ಹೂಳು ತುಂಬಿ ನೀರಿನ ಶೇಖರಣೆ ಕಡಿಮೆಯಾಗಿದ್ದು, ಭೂಮಿ ಮೇಲೆ ನೀರು ಅತ್ಯಲ್ಪವಾಗುತ್ತಿದೆ. ಪರಿಸರ ಪ್ರೇಮಿಗಳಾದ ನಾವು ಗಣೇಶ ಚತುರ್ಥಿ ಸಮಯದಲ್ಲಿ ಪಿ.ಓ.ಪಿ ಗಣೇಶ ಮೂರ್ತಿ ತಂದು ಪೂಜಿಸದೆ. ಮಣ್ಣಿನಿಂದ ಮಾಡಿದ ಗಣೇಶನ್ನು ಪೂಜಿಸಿ ಮನೆಯ ಆವರಣದಲ್ಲಿ ಪಾತ್ರೆಯಲ್ಲಾಗಲಿ, ಬಕೇಟನಲ್ಲಾಗಲಿ ವಿಸರ್ಜಿಸಿ, ಅದೇ ಮಣ್ಣನ್ನು ತಮ್ಮ ಹೂದೋಟದ ಗಿಡಗಳ ಬುಡದಲ್ಲಿ ಹಾಕುವುದು ಉತ್ತಮ. ಹೀಗೆ ಮಾಡಿದಲ್ಲಿ ತೋಟದ ನೆಲ ಸೇರಿ ಮಣ್ಣಿನ ನೈಸಗರ್ಿಕವಾಗಿ ನಡೆದುಕೊಂಡು ಬಂದಿರುವ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಂದ ಪರಿಸರ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗುವುದು ಎಂದರು.ಕೆರೆ. ಬಾವಿ,ಹಳ್ಳ,ನದಿಗಳಲ್ಲಿ ಹೂಳು ತುಂಬಿ ನೀರಿನ ಶೇಖರಣೆ ಕಡಿಮಿಯಾಗಿದ್ದು, ಭೂಮಿ ಮೇಲೆ ನೀರು ಅತ್ಯಲ್ಪವಾಗುತ್ತಿದೆ. ಪರಿಸರ ಪ್ರೇಮಿಗಳಾದ ನಾವು ಗಣೇಶ ಚತುರ್ಥಿ ಸಮಯದಲ್ಲಿ ಪಿ.ಓ.ಪಿ ಗಣೇಶ ಮೂರ್ತಿ ತಂದು ಪೂಜಿಸದೆ. ಮಣ್ಣಿನಿಂದ ಮಾಡಿದ ಗಣೇಶನ್ನು ಪೂಜಿಸಿ ಮನೆಯ ಆವರಣದಲ್ಲಿ ಪಾತ್ರೆಯಲ್ಲಾಗಲಿ, ಬಕೇಟನಲ್ಲಾಗಲಿ ವಿಸರ್ಜಿಸಿ, ಅದೇ ಮಣ್ಣನ್ನು ತಮ್ಮ ಹೂದೋಟದ ಗಿಡಗಳ ಬುಡದಲ್ಲಿ ಹಾಕುವುದುಉತ್ತಮ. ಹೀಗೆ ಮಾಡಿದಲ್ಲಿ ಮಣ್ಣು ನಮ್ಮತೋಟದ ನೆಲ ಸೇರಿ ಮಣ್ಣಿನ ಫಲವತ್ತತೆ ಹೆಚ್ಚಾಗಬಹುದು ಎಂದರು.
ಗಣೇಶನ ಹಬ್ಬದಲ್ಲಿ ಕೋಟ್ಯಾನುಗಟ್ಟಲೇ ಗಣೇಶನ ವಿಗ್ರಹಗಳು ನದಿ,ಬಾವಿ ಸೇರುವದನ್ನು ತಪ್ಪಿಸಬಹುದು. ಹನಿ ಹನಿ ಸೇರಿ ಹಳ್ಳವಾದಂತೆ ಪ್ರತಿ ವರ್ಷವೂ ಅಲ್ಪಅಲ್ಪ ವಾಗಿ ಗಣೇಶ ಮೂರ್ತಿಯನ್ನು ನದಿ,ಕೆರೆ,ಬಾವಿಗಳಲ್ಲಿ ವಿಸರ್ಜಿಸಿದಲ್ಲಿ ಹೂಳು ತುಂಬಿ ಭೂಮಿಯ ಅಂತರ್ಜಲ ಕಡಮೆ ಯಾಗುತ್ತದೆ. ಪರೋಕ್ಷವಾಗಿ ನಾವು ಪರಿಸರ ಸಮತೋಲನ ಕಾಪಾಡಿದಂತಾಗುವುದು ಎಂದರು. ರಾಸಾಯನಿಕ ಬಣ್ಣಗಳು ಕಣ್ಣಿಗೆ ಸುಂದರವಾಗಿ ಕಂಡರೂ, ಮುಂದೆ ಅನೇಕ ದಿನಗಳವರೆಗೆ ನೀರಿನಲ್ಲಿ ಕರಗದೇ ಪ್ರಕೃತಿ ಮೇಲೆ ಪರಿಣಾಮ ಬಿರುತ್ತದೆ. ನೈಸಗರ್ಿಕ ನೀರು ಬಣ್ಣಗಳು ಪ್ರಕೃತಿದತ್ತವಾಗಿರುವುದರಿಂದ ನಿರಾಯಾಸವಾಗಿ ಕರಗಿ ಭೂಮಿಯ ಮಣ್ಣಲ್ಲಿ ಯಾವುದೇ ದುಷ್ಪರಿಣಾಮ ಬಿರುವದಿಲ್ಲ.
ಈ ನಿಟ್ಟಿನಲ್ಲಿ ಕುಮಾರಪಟ್ಟಣದ ಧನ್ಯೋಸ್ಮೀ ಸಂಘಟನೆಯ ಯುವಕಲಾಕಾರ ಶ್ಯಾಮಾಚಾರಿ ವಿ.ಬಿ.ಮಣ್ಣಿನಲ್ಲೆ ಗಣೇಶಗಳನ್ನು ರಚಿಸಿ ಯುವ ಕಲಾಕಾರರಿಗೆ ಮಾದರಿಯಾಗಿದ್ದಾರೆ. ಎಂದು ಮೆಹೆಂದಳೆ ಅವರು ಹೇಳಿದರು. ಕುಮಾರಪಟ್ಟಣದ ಧನ್ಯೋಸ್ಮೀ ಸಂಘಟನೆಯ ಯುವಕಲಾಕಾರ ಶ್ಯಾಮಾಚಾರಿ ವಿ.ಬಿ.ಮಣ್ಣಿನಲ್ಲೇ ಗಣೇಶಗಳನ್ನು ರಚಿಸಿ ಯುವಕಲಾಕಾರರಿಗೆ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರ