ಮನರಂಜನೆ

ಇಂದ್ರಜಿತ್ ಲಂಕೇಶ್ ವಿರುದ್ಧ ಮೇಘನಾ ರಾಜ್ ದೂರು: ಬಹಿರಂಗ ಕ್ಷಮಾಯಾಚನೆಗೆ ಆಗ್ರಹ

ಇಂದ್ರಜಿತ್ ಲಂಕೇಶ್ ವಿರುದ್ಧ ಮೇಘನಾ ರಾಜ್ ದೂರು: ಬಹಿರಂಗ ಕ್ಷಮಾಯಾಚನೆಗೆ ಆಗ್ರಹ

ಬೆಂಗಳೂರು, ಸೆಪ್ಟೆಂಬರ್ 05: ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ನಟ ಹಾಗೂ ಪತಿ ಚಿರಂಜೀವಿ ಹೆಸರು ಪ್ರಸ್ತಾಪಿಸಿದ್ದ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ನಟಿ ಮೇಘನಾ ರಾಜ್ ಫಿಲ್ಮ್ ಛೆಂಬರ್ ಗೆ ಪತ್ರ ಬರೆದಿದ್ದಾರೆ. 

ಇಂದ್ರಜಿತ್ ಮಾತಿನಿಂದ ಮನಸ್ಸಿಗೆ ತುಂಬಾ ನೋವಾಗಿದೆ.  ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಪತ್ರದಲ್ಲಿ ದೂರಿದ್ದಾರೆ. 

“ಇತ್ತೀಚೆಗೆ ಮೃತಪಟ್ ಯುವ ನಟನ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ನಡೆಸಲಾಗಿದೆ.  ಅವರಿಗೂ ಡ್ರಗ್ಸ್ ನಂಟಿದ್ದಿರಬಹುದು” ಎಂದು ಇಂದ್ರಜಿತ್ ಶಂಕೆ ವ್ಯಕ್ತಪಡಿಸಿದ್ದರು.

ಇಂದ್ರಜಿತ್ ಹೇಳಿಕೆಗೆ ಎಲ್ಲೆಡೆಯಿಂದ ಟೀಕೆ ಕೇಳಿಬಂದ ಕಾರಣ, ತಮ್ಮ ಮಾತು ವಾಪಸ್ ತೆಗೆದುಕೊಂಡಿರುವುದಾಗಿಯೂ, ಕ್ಷಮೆ ಕೋರುವುದಾಗಿಯೂ ಹೇಳಿದ್ದರು.

ಆದರೆ ಮೇಘನಾ ರಾಜ್ ಗೆ ಇದರಿಂದ ತೃಪ್ತಿಯಾಗಿಲ್ಲ.  “ಗರ್ಭಿಣಿಯಾಗಿರುವ ನನಗೆ ಇಂದ್ರಜಿತ್ ಅವರ ಮಾತನನ್ನು ಅರಗಿಸಿಕೊಳ್ಳಲು, ತಡೆದುಕೊಳ್ಳಲು ಆಗಿಲ್ಲ. ಬಹಳ ನೋವಾಗುತ್ತಿದೆ. ಮಾನಸಿಕವಾಗಿ ಕುಗ್ಗಿದ್ದೇನೆ.  ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಯಾಚಿಸಬೇಕು” ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. 

ಸುದ್ದಿ ಓದಿ