ಬೂತ್ ಮಟ್ಟದ ಕಾರ್ಯಕರ್ತರ ಸಭೆ
ಶಿಗ್ಗಾವಿ 06: ಕೋವಿಡ್ ಸಮಯದಲ್ಲಿ 130 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿ ಜೀವದಾನಮಾಡಿದ, ಅಕ್ಕಿ ನೀಡಿ ಬಡವರ ಹಸಿವು ನೀಗಿಸಿದ, ಕುಡಿಯಲು ಮನೆ, ಮನೆಗೆ ನೀರು ಹರಿಸಿದ ನೆಚ್ಚಿನ ಪ್ರಧಾನಿ ಮೋದಿಜಿಯವರಿಗೆ ಬೆಂಬಲ ವ್ಯಕ್ತಪಡೆಸಲು ಮಾನ್ಯ ಪ್ರಲ್ಹಾದ ಜೋಶಿ ಯವರಿಗೆ ಮತ ನೀಡುವಂತೆ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತದಾರ ಪ್ರಭುಗಳಲ್ಲಿ ಮನವಿ ಮಾಡಿದರು.
ಬಂಕಾಪೂರ ಪಟ್ಟಣದ ದಶರತ್ ಕಲಘಟಗಿ ಯವರ ಬಯಲು ಜಾಗೆಯಲ್ಲಿ ಬಂಕಾಪುರ, ಕುಂದೂರ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ಬಡವರಿಗೆ ಅಕ್ಕಿ ನೀಡಿದ್ದು, ಮೋದಿಜಿಯವರಾದರೆ, ಭಾಗ್ಯದ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿರುವರು ಕಾಂಗ್ರೇಸ್ ನವರು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಜಾತಿ, ಮತ, ಪಂಥ ಬದಿಗಿಟ್ಟು ದೇಶಕ್ಕಾಗಿ ಸರ್ವರೂ ಬಿಜೆಪಿ ಅಭ್ಯರ್ಥಿಗಳಿಗೆ ಮತಚಲಾಯಿಸುವಮೂಲಕ ಮೋದಿಜಿಯವರಿಗೆ ಬೆಂಬಲಸೂಚಿಸಬೇಕು. ನುಡಿದಂತೆ ರಾಮ ಮಂದಿರ ಲೋಕಾರೆ್ಣಗೋಂಡಿದೆ. ರಾಮರಾಜ್ಯ ಸ್ಥಾಪನೆಯೋಂದೇ ನಮ್ಮ ಮುಂದಿನ ಗುರಿಯಾಗಿದೆ ಎಂದು ಹೇಳಿದರಲ್ಲದೇ, ಮೋದಿಜಿಯವರ ಕರೆಗೆ ಓಗೋಟ್ಟು ಹಾವೇರಿ ಲೋಕಸಭೆಗೆ ಸ್ಫರ್ಧಿಸಿದ್ದೇನೆ ಹೋರತು ನಿಮ್ಮಿಂದ ದೂರವಾಗಲು ಅಲ್ಲ. ನಾನೇಂದು ನಿಮ್ಮವನೇ ನಿಮ್ಮಿಂದ ದೂರವಾಗಲಾರೆ ಎಂದು ಜನರತ್ತ ಕೈ ಬೀಸಿದರು.
ಧಾರವಾಡ ಲೋಕಸಭಾ ಅಭ್ಯರ್ಥಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಭಾರತೀಯ ಟೆಕ್ನಾಲಜಿ ಬಳಸಿ 5 ಜಿ ನೆಟ್ವರ್ಕನ್ನು ಬಿಡುಗಡೆಗೋಳಿಸಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ದೇಶದಲ್ಲಿ 110 ಸ್ವದೇಶಿ ಮೋಬೈಲ್ ಪ್ಯಾಕ್ಟರಿ ಸ್ಥಾಪಿಸಿ ನಿರೂದ್ಯೋಗಿಗಳಿಗೆ ಉದ್ಯೋಗವನ್ನು ನೀಡಿದ ಕೀರ್ತಿ ವಿಶ್ವನಾಯಕ ಮೋದಿಜಿಯವರಿಗೆ ಸಲ್ಲುತ್ತದೆ. ವಿಶ್ವದ ಅತಿದೊಡ್ಡ ವಿಮೆ ಯಾವುದಾದರೂ ಇದ್ದರೆ, ಅದು ಆಯುಷ್ಮಾಮ ಭಾರತ ಯೋಜನೆಯಾಗಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಧಾರವಾಡ ಲೋಕಸಭಾ ಕ್ಷೇತ್ರದ 2,51,812 ಜನ ಉಚಿತ ಚಿಕಿತ್ಸೆಯ ಸದುಪಯೋಗ ಪಡೆಸಿಕೋಂಡಿದ್ದಾರೆ. ನನ್ನ ಕ್ಷೇತ್ರದ ಶಾಲೆಗಳಿಗೆ 21,600 ಡೆಸ್ಕ ವಿತರಣೆಮಾಡಲಾಗಿದೆ. 158 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟಕ್ಲಾಸ್ ಅಳವಡಸಲಾಗಿದೆ. ಹಳೆಯ ಅಂಗನವಾಡಿಗಳನ್ನು ತೆರವುಗೋಳೀಸಿ ನೂತನ ಸುಸಜ್ಜಿತ ಅಂಗನವಾಡಿಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ದರ್ಣ ಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಉಜ್ವಲ ಯೋಜನೆ, ಮುದ್ರಾಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ವೃತ್ತಿಪರ ತರಬೇತಿ, ಮಾತೃ ವಂದನಾ ಯೋಜನೆ ಸೇರಿದಂತೆ ಹಲವಾರು ಯೋಜನೆಯನ್ನು ಜಾರಿಗೆ ತರಲಾಗಿದೆ. ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವ ಸಂಕಲ್ಫ ಮೋದಿಜಿಯವರದಾಗಿದ್ದು, ಮೋದಿಜಿಯವರನ್ನು ಪುನ: ಪ್ರಧಾನಿಯನ್ನಾಗಿಸಲು ನನಗೆ ಮತ ನೀಡುವಂತೆ ಪತದಾರ ಪ್ರಭುಗಳಲ್ಲಿ ಮನವಿ ಮಾಡಿದರು.
ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಮಲ್ಲೇಶಪ್ಪ ಹರಿಜನ, ಉಷಾ ಬಿಳೆಕುದರಿ, ಡಿ.ಎಸ್.ಮಾಳಗಿ, ಶಶಿಧರ ಹೊನ್ನಣ್ಣವರ, ಲಿಂಗರಾಜ ಹಳವಳ್ಳಿ, ಚಂದ್ರು ಬೆಳವತ್ತಿ ಮಾತನಾಡಿದರು. ಮುಖಂಡರಾದ ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಎಸ್.ವಿ.ಗೌರಿಮಠ, ಎಮ್.ಎಸ್.ಪಾಟೀಲ, ಬಸವರಾಜ ನಾರಾಯಣಪುರ, ಹೊನ್ನಪ್ಪ ಹೂಗಾರ, ಶೋಭಾ ನಿಸ್ಸಿಮಗೌಡ್ರ, ಉಮೆಶ ಅಂಗಡಿ, ಮಂಜಪ್ಪ ತಳವಾರ, ರಾಜು ಟೊಪಣ್ಣವರ, ನಾಸೀರಅಹಮ್ಮದ ಹಲ್ಡೆವಾಲೆ ಸೇರಿದಂತೆ ಬೂತ್ ಮಟ್ಟದ ಕಾರ್ಯಕರ್ತರು ಅಫಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.