ಶಿಗ್ಗಾವ್

ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆ

ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆ

ಶಿಗ್ಗಾವಿ 06:   ನನ್ನ ಕ್ಷೇತ್ರವ್ಯಾಪ್ತಿಯ ಜನರ ಭಾವನೆಗೆ ಬೆಲೆ ಕೊಡುವ ಒಬ್ಬ  ಸಾಮಾನ್ಯ ಸಂಸದನಾಗಿ ಕಳೆದ 30 ವರ್ಷಗಳಿಂದ ರಾಜಕೀಯ ಸೇವೆಯಲ್ಲಿದ್ದೇನೆ ಎಂದು  ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಷಿ ಹೇಳಿದರು. 

ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ದುಂಡಶಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 5 ಲಕ್ಷ ಕೋಟಿಯಲ್ಲಿ ಜೆಜೆಎಂ ಯೋಜನೆ ಪ್ರಗತಿಯಲ್ಲಿದೆ ಮೋದಿಯವರ ನೀರಿನ ಅಭಾವವನ್ನ ನೀಗಿಸುವ  ಪರಿಲಕ್ಪನೆಯಿಂದ ಇದು ಸಾಧ್ಯವಾಗಿದೆ, ಶಿಗ್ಗಾವಿ- ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ 6 ವೇ ಸೇರಿದಂತೆ ಒಟ್ಟು 39 ರಸ್ತೆಗಳನ್ನ ಅಭಿವೃದ್ದಿ ಮಾಡಲಾಗಿದೆ, ದೇಶದಲ್ಲಿ ಬದಲಾವಣೆಯಾಗುತ್ತಿದೆ, ಆರ್ಥಿಕತೆಯಲ್ಲಿ ದುರ್ಭಲ ದೇಶ ಭಾರತ ಎಂದು ಹೇಳಲಾಗುತ್ತಿತ್ತು, ಆದರೆ ಇಂದು ಆರ್ಥಿಕತೆಯಲ್ಲಿ ಬಾರತ ವಿಶ್ವಕ್ಕೆ 5 ನೇ ಸ್ಥಾನದಲ್ಲಿದೆ, ಭಾಜಪ ಸದೃಢ ಪಕ್ಷವಾಗಿದೆ, ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಅಧಿಕಾರ ಕೊಡಲು ಸಾದ್ಯವೇ ?  ಪಾಕಿಸ್ಥಾನ ಜಿಂದಾಬಾದ್ ಎಂದವರ ನಾಲಿಗೆ ಸೀಳಿದರೆ ಭಾರತ ಸುಭದ್ರವಾಗಿರುತ್ತದೆ ಪ್ರತಿಯೊಬ್ಬ ಕಾರ್ಯಕರ್ತರನ್ನ ಗುರುತಿಸುವ ಕಾರ್ಯವನ್ನ ಮುಂದಿನ ದಿನದಲ್ಲಿ ಮಾಡುತ್ತೇವೆ ಎಂದು ಬರವಸೆ ನೀಡಿದರು. 

ಬಿಜೆಪಿ ಮುಖಂಡ ಶಶಿಧರ ಯಲಿಗಾರ  ಮಾತನಾಡಿ ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 14 ಸಾವಿರ ಮತಗಳನ್ನ ಪಡೆದಿದ್ದು ಇದನ್ನು ಸೇರಿಸಿ 60 ಸಾವಿರ ಮತಗಳ ಅಂತರದಿಂದ ಜೋಷಿಯವರನ್ನ ಮತ್ತೊಮ್ಮೆ ಗೆಲ್ಲಿಸಿ ಮೋದಿಯವರನ್ನ ಮತ್ತೋಮ್ಮೆ ಪ್ರಧಾನಿಯವರನ್ನಾಗಿ ಮಾಡಲು ಪಣ ತೊಟ್ಟಿದ್ದೇನೆ, ಪಾಕಿಸ್ಥಾನದವರೇ ಮೋದಿಯವರನ್ನ ಕಳೆದುಕೊಳ್ಳಬೇಡಿ ಎಂದು ಹೇಳುತ್ತಿರುವಾಗ ನನ್ನ ಮಾತೃ ಪಕ್ಷಕ್ಕೆ ಮರಳಿ ಬಂದು ನನ್ನ ಕೈಲಾದ ಸೇವೆ ಮಾಡಲು ಇಚ್ಚಿಸಿದ್ದೇನೆ ಎಂದರು. 

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಕೇಂದ್ರ ಬಿಜೆಪಿ ಸರಕಾರ ಅಭಿವೃದ್ದಿ ಮಾಡುತ್ತಿದ್ದರೆ, ರಾಜ್ಯ ಕಾಂಗ್ರೇಸ್ ಸರಕಾರದ ದುರಾಡಳಿತ ಮುಂದುವರೆದಿದೆ, ಅಭಿವೃದ್ದಿಗೆ ಸರ್ಕಾರದಲ್ಲಿ ದುಡ್ಡೆ ಇಲ್ಲ, ರಾಜ್ಯ ಕಾಂಗ್ರೇಸ್ ಸರಕಾರ  ಇದೊಂದು ಬಂಡಲ್ ಸರ್ಕಾರವಾಗಿದೆ, ಭಯೋತ್ಪಾದಕರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು, ರಾಷ್ಟ್ರದ ನಿರ್ಮಾಣಕ್ಕಾಗಿ ಜೋಷಿಯವರನ್ನ ಗೆಲ್ಲಿಸಬೇಕಿದೆ ಮತ್ತೆ ಮೋದಿಯವರ ಕೈ ಬಲ ಪಡಿಸಬೇಕಿದೆ ಎಂದರು. 

ಭಾಜಪ ತಾಲೂಕಾದ್ಯಕ್ಷ  ಶಿವಾನಂದ ಮ್ಯಾಗೇರಿ ಮಾತನಾಡಿ, ಮೋದಿಯವರ ದೂರದೃಷ್ಟಿಯ ಸುಭದ್ರ ಭಾರತ ನಿರ್ಮಾಣಕ್ಕೆ ಮೋದಿಯವರನ್ನ ಜೋಷಿಯವರ ಮೂಲಕ ಬೆಂಬಲಿಸೋಣ, ಅಂತ್ಯೋದಯ ಪರಿಕಲ್ಪನೆ, ವಿಕಸಿತ ಭಾರತಕ್ಕೆ ಮೋದಿಯವರನ್ನ ಬೆಂಬಲಿಸುವ ಜೊತೆಗೆ ಪ್ರಲ್ಹಾದ್ ಜೋಷಿಯವರನ್ನ ಗೆಲ್ಲಿಸೋಣ ಎಂದರು. 

ಈ ಸಂದರ್ಭದಲ್ಲಿ ನರಹರಿ ಕಟ್ಟಿ, ತಿಪ್ಪಣ್ಣ ಸಾತಣ್ಣವರ, ಶೋಭಾ ನಿಸ್ಸಿಮಗೌಡ್ರ, ಸುಭಾಸ್ ಚೌಹಾಣ್, ಡಾ. ಮಲ್ಲೇಶಪ್ಪ ಹರಿಜನ, ಕೊಣನಕೇರಿ ಗ್ರಾಪಂ ಸದಸ್ಯ  ಬಸವರಾಜ ನಾರಾಯಣಪೂರ, ಕುಮಾರ ಮಾಸನಕಟ್ಟಿ, ಬಸವಣ್ಣೇವ್ವ ಶಿಗ್ಗಾವಿ, ಹನುಮವ್ವ ದೇವಗಿರಿ,  ಹನುಮಂತಪ್ಪ ತೆಮ್ಮಿನಕೊಪ್ಪ, ಚನ್ನಪ್ಪ ಬಿಂದ್ಲಿ, ರಾಜಣ್ಣ ಕಾಮನಹಳ್ಳಿ, ಪರಶುರಾಮ ಹಿರೇಮಠ ಸೇರಿದಂತೆ  ಭಾಗದ ಭಾಜಪ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು. 


ಸುದ್ದಿ ಓದಿ