ಕಾಗವಾಡ

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ, ಸಿಬ್ಬಂದಿಗಳ ಸಭೆ

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ, ಸಿಬ್ಬಂದಿಗಳ ಸಭೆ

ಕಾಗವಾಡ 31: ತಾಲೂಕಾ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಯೋಜನೆಯಡಿಯಲ್ಲಿ ಕೋವಿಡ್ ನಿರ್ವಹಣಾ ಕಿಟ್ ಬಗ್ಗೆ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಾಗವಾಡ ತಾಲೂಕಾ ಪಂಚಾಯತಿ ಇಓ ವೀರಣಗೌಡ ಎಗಣಗೌಡರ ಇವರ ಅಧ್ಯಕ್ಷತೆಯಲ್ಲಿ ಕೆ.ಎಚ್‌.ಪಿ.ಟಿ ತಾಲೂಕಾ ಸಂಯೋಜಕ ರಾಮಗೌಡ ಬಿ. ಸರಬಡಗಿ ಮಾಹಿತಿ ನೀಡಿದರು. 

ಶನಿವಾರ ದಿ. 30ರಂದು ಕಾಗವಾಡ ತಾಲೂಕಾ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಾ ಮಟ್ಟದ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಕೋವಿಡ್ ನಿರ್ವಹಣಾ ಕಿಟ್ ವಿತರಿಸಿ ಅವರು ಮಾತನಾಡಿದರು. 

ರಾಜ್ಯದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಹೆಲ್ತ್‌ ಅಸೋಶಿಯೇಶನ್ ಟ್ರಸ್ಟ್‌ ಹಾಗೂ ಜಿಪಂ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ಅಭಿಯಾನ ಯೋಜನೆ ಇಡೀ ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ಅದರಂತೆ ಕಾಗವಾಡ ತಾಲೂಕಿನ ಗ್ರಾಮಗಳಲ್ಲಿ ಕೋವಿಡ್ ನಿರ್ವಹಣಾ ಬಗ್ಗೆ ಮನೆ-ಮನೆಗೆ ತಲುಪಿ ಮಾಹಿತಿ ನೀಡಬೇಕೆಂದರು. 

ದೇಶದ ನಾಲ್ಕು ರಾಜ್ಯಗಳಲ್ಲಿ ಅನೇಕ ವರ್ಷಗಳಿಂದ ಕರ್ನಾಟಕ ಹೆಲ್ತ್‌ ಪ್ರಮೋಶನ್ ಟ್ರಸ್ಟ್‌ ಸಂಸ್ಥೆ ಸಮಾಜದಲ್ಲಿ ವಿಧಾಯಕ ಕಾರ್ಯಗಳಿಂದ ಜನರ ಆರೋಗ್ಯ ಸುಸ್ಥಿತಿಗೆ ಉತ್ತಮ ಕಾರ್ಯ ಮಾಡುತ್ತಾ ಬಂದಿದೆ ಎಂದರು. 

ಸಿಡಿಪಿಓ ಸಂಜೀವಕುಮಾರ ಸದಲಗೆ, ತಾಲೂಕಾ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ, ಡಾ. ಸುರೇಂದ್ರ ಹೊನಕಾಂಬಳೆ, ಕೆ.ಎಚ್‌.ಪಿ.ಟಿ, ಅಥಣಿ ತಾಲೂಕಾ ಸಂಯೋಜಕರಾದ ಪ್ರವೀಣ, ಚಿಕ್ಕೋಡಿ ತಾಲೂಕಾ ಸಂಯೋಜಕರಾದ ಮಹಾಂತೇಶ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ