ಕಾಗವಾಡ

ವೈದ್ಯಾಧಿಕಾರಿ ಡಾ.ಪುಷ್ಪಲತಾ, ಸಿಬ್ಬಂದಿ ಕಾರ್ಯ ಶ್ಲಾಘನೀಯ: ಜಮಾದಾರ

ವೈದ್ಯಾಧಿಕಾರಿ ಡಾ.ಪುಷ್ಪಲತಾ, ಸಿಬ್ಬಂದಿ ಕಾರ್ಯ ಶ್ಲಾಘನೀಯ: ಜಮಾದಾರ

ಶೇಡಬಾಳ 02: ಕೊರೋನಾ ಹಾವಳಿಯ ಮಧ್ಯದಲ್ಲಿಯೂ ಕಳೆದ ಎರಡು ವರ್ಷಗಳಿಂದ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುಷ್ಪಲತಾ ಸುಣ್ಣದಕಲ್ ಹಾಗೂ ಅವರ ಸಿಬ್ಬಂದಿ ವರ್ಗದವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಗವಾಡ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅಸ್ಲಂ ಜಮಾದಾರ ಹೇಳಿದರು. 

ಅವರು ಗುರುವಾರ ದಿ.1 ರಂದು ವೈದ್ಯರ ದಿನಾಚರಣೆಯ ಅಂಗವಾಗಿ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಸ್ಲಿಂ ಸಮಾಜದವರು ಏರಿ​‍್ಡಸಿದ್ದ ಡಾ.ಪುಷ್ಪಲತಾ ಸುಣ್ಣದಕಲ್ ಹಾಗೂ ಸಿಬ್ಬಂದಿ ವರ್ಗದವರ ಸತ್ಕಾರ ಸಮಾರಂಭದಲ್ಲಿ ವೈದ್ಯರನ್ನು ಸತ್ಕರಿಸಿ ಮಾತನಾಡುತ್ತಿದ್ದರು.  

ದೇಶ ಹಾಗೂ ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳು ಹಾಗೂ ಸಿಬ್ಬಂದಿಗಳ ಕುರಿತು ಹಲವಾರು ಅಪಸ್ವರಗಳು ಕೇಳಿ ಬಂದಿದ್ದರೂ ಕೂಡ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗಳು ಮಾತ್ರ ಜನರ ಪಾಲಿಗೆ ವೈದ್ಯೋ ನಾರಾಯಣೋ ಹರಿ ಎಂಬುವಂತೆ ಕಾರ್ಯ ನಿರ್ವಹಿಸಿ ಈ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಕೆಲವೊಂದು ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರೂ ಕೂಡ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಬಡ ಜನರ ಪಾಲಿಗೆ ಸಂಜೀವೀನಿಯಾಗಿ ಕಾರ್ಯನಿರ್ವಹಿಸಿವೆ ಎಂದರು. ಅವರ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು. 

ಈ ಸಮಯದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಅಸ್ಲ್‌ಂ  ಜಮಾದಾರ, ಕಾಶಿಮ್ ಮುಲ್ಲಾ, ಮೌಲಾನಾ ಮೀರಾಸಾಬ, ಮೆಹಬೂಬ ಜುಗಳೆ, ಸದ್ದಾಂ ಕೋರ್ಬು, ಅಲ್ಲಾಭಕ್ಷ ಮುಲ್ಲಾ, ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ