ಬೈಲಹೊಂಗಲ

ಪ್ರತಿಯೊಬ್ಬರು ಕನ್ನಡಾಭಿಮಾನ ಮೆರೆಯಲಿ: ಮಂಗಳಾ ಮೆಟಗುಡ್ಡ

ಪ್ರತಿಯೊಬ್ಬರು ಕನ್ನಡಾಭಿಮಾನ ಮೆರೆಯಲಿ: ಮಂಗಳಾ ಮೆಟಗುಡ್ಡ

ಲೋಕದರ್ಶನ ವರದಿ 


ಬೈಲಹೊಂಗಲ 01: ಕನ್ನಡ ಭಾಷೆ ಅನ್ನದ ಭಾಷೆಯಾಗಿದ್ದು ಪ್ರತಿಯೊಬ್ಬರು ಕನ್ನಡಾಭಿಮಾನ ಮೆರೆದು ನಾಡು-ನುಡಿಗೆ ಸೇವೆ ಸಲ್ಲಿಸಿದರೆ ತಾಯ್ನಾಡು ಮತ್ತಷ್ಟು ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಕಸಾಪ ನೂತನ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಹೇಳಿದರು. 

   ಅವರು ಪಟ್ಟಣದ ಪತ್ರಿಬಸವ ನಗರದ ಅನುಭವ ಮಂಟಪದಲ್ಲಿ ಪತ್ರಿ ಬಸವೇಶ್ವರ ಅಭಿವೃದ್ದಿ ಸಂಘ ಹಾಗೂ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಸೋಮವಾರ ನಡೆದ ಚಿನ್ಮಯ ಜ್ಞಾನಿ ಚನ್ನಬಸವೇಶ್ವರ ಜಯಂತಿ, ಕನ್ನಡ ರಾಜ್ಯೋತ್ಸವ ಮಾಸಾಚರಣೆ, ಕಾರ್ತಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಚನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿ, ಯುಗಾಂತರಗಳಿಂದ ಆಚರಣೆಯಲ್ಲಿರುವ ಹಬ್ಬ ಉತ್ಸವಗಳು ಮನುಷ್ಯನ ಮನಸ್ಸನ್ನು ಪ್ರಸನ್ನಗೊಳಿಸಲಿದ್ದು ಯುವಕರು ಸ್ವಾಭಿಮಾನ ಮೂಡಿಸಿಕೊಂಡು ಸಾಗಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಮಾಸಾಚರಣೆಯನ್ನು ಮನೆಯ ಮನದ ಕಾರ್ಯಕ್ರಮವಾಗಿ ರೂಪಿಸಲು ಪ್ರಯತ್ನಿಸಬೇಕೆಂದರು. 

    ಪತ್ರಿ ಬಸವ ನಗರದ ಅಭಿವೃದ್ಧಿ ಸಂಘದಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿಗೆ ಬೇಕಾದಂತಹ ಆದರ್ಶದ ತತ್ವಗಳನ್ನು ಬಸವಾದಿ ಶರಣರು ಸಮಾಜದಲ್ಲಿ ನೀಡಿದ್ದಾರೆ. ಧರ್ಮದ ತಳಹದಿಯ ಮೇಲೆ ಜೀವನ ನಡೆಸಿ ತತ್ವಾಚಾರಗಳನ್ನು ನಿತ್ಯ ಪಠಣ ಮಾಡಿ ಸಾಧನೆ ಮಾಡಿದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯವಾಗುತ್ತದೆ. ಸಾಧಕರಿಗೆ ಪ್ರೇರಣೆಯು ಅತ್ಯವಶ್ಯವಾಗಿದ್ದು ಸಂಘ-ಸಂಸ್ಥೆಗಳು ಅಂಥವರನ್ನು ಗುರಿತಿಸುವ ಪ್ರಯತ್ನ ಮಾಡಬೇಕೆಂದರು.  

    ಕಸಾಪ ನೂತನ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ, ಶಿಕ್ಷಕಿಯರಾದ ಭಾರತಿ ಶೆಟ್ಟರ, ಅಮಜವ್ವಾ ಭೋವಿ, ಕಾಸರಗೋಡಿನ ರಂಗಭೂಮಿ ಕಲಾವಿದ ಮಂಜುನಾಥ, ಸಾಹಿತಿ ಸಂಕೇತ ಮುಳಗುಂದ, ಕರಾಠೆಯ ರಾಜ್ಯ ಪ್ರಶಸ್ತಿ ವಿಜೇತ ಚಿನ್ಮಯ ಸವದಿ, ಮೂಡಬಿದಿರೆಯ ಯಕ್ಷಗಾನ ಕಲಾವಿದ ಸಾತ್ವಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇತರರನ್ನು ಸನ್ಮಾನಿಸಲಾಯಿತು.   

    ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಆಶಾ ಯಮಕನಮರಡಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಂತಿನಾಥ ಮಿರಜಕರ ಷಟಸ್ಥಳ ದ್ವಜಾರೋಹನ ನೆರವೇರಿಸಿದರು. ಮಕ್ಕಳ ಸಾಹಿತಿ ಬ.ವಿ.ನೇಸರಗಿ, ಧಾರವಾಡದ ಹಿರಿಯ ಸಾಹಿತಿ ಲೀಲಾ ಕಲಕೋಟಿ, ಸೋನಕ್ಕ ವಾಲಿ, ಕಸಾಪ ತಾಲೂಕಾ ಮಾಜಿ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ, ಮಂಗಲಾ ಅಕ್ಕಿ, ಗೋದಾವರಿ ಸವದಿ, ರೂಪಾ ಕುಲಕರ್ಣಿ, ಮೀನಾಕ್ಷಿ ಸೂಡಿ, ಕಲಾವತಿ ಕಡಕೋಳ, ವಸುಂಧರಾ ಕಮತ, ಗೌರಿ ಕರ್ಕಿ, ಗೋಧಾವರಿ ಪಾಟೀಲ, ಕುಸುಮಾ ಗದಗ, ಮಡಿವಾಳಪ್ಪ ಸಂಗೊಳ್ಳಿ, ನಾಗನಗೌಡಾ ಪಾಟೀಲ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಮಾರುತಿ ಮಸ್ತನ್ನವರ, ಸುವರ್ಣ ಬಿಜಗುಪ್ಪಿ, ಗೀತಾ ಅರಳಿಕಟ್ಟಿ, ಅನಸೂಯಾ ಮುರಗೋಡ, ಗೀತಾದೇವಿ ಬೇವಿನಗಿಡದ, ಮುಂತಾದವರು ಉಪಸ್ಥಿತರಿದ್ದರು.  

  ಮುಕ್ತಾಯಕ್ಕ ಬಳಗದ ಶರಣೆಯರಿಂದ ಪ್ರಾರ್ಥನೆ ಜರುಗಿತು. ಸಾಹಿತಿ ಅನ್ನಪೂರ್ಣ ಕನೋಜ ಸ್ವಾಗತಿಸಿದರು. ರಾಜೇಶ್ವರಿ ದ್ಯಾಮನಗೌಡ್ರ ನಿರೂಪಿಸಿದರು. ಅನುರಾಧ ಕರಡಿಗುದ್ದಿ ವಂದಿಸಿದರು.  

   ಈಚೆಗೆ ನಿಧನರಾದ ಬದಾಮಿಯ ಶಿವಯೋಗ ಮಂದಿರದ ಅಧ್ಯಕ್ಷ ಹಾಳಕೇರಿಯ ಅನ್ನದಾನೇಶ್ವರ ಮಠದ ಸಂಗನಬಸವ ಶ್ರೀಗಳಿಗೆ ಇದೇ ಸಂದರ್ಭದಲ್ಲಿ ಶ್ರದ್ದಾಂಜಲಿ ಅರ​‍್ಿಸಲಾಯಿತು. ಕವಿಗೋಷ್ಠಿಯಲ್ಲಿ ಪಾಲ್ಗೊಂಡು ವಿಜೇತರಾದ ಸ್ಫರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಹಲವಾರು ಗಣ್ಯ ಮಾನ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ