ಗುಳೇಗುಡ್ಡ

ಮುಖ್ಯಾಧಿಕಾರಿಯಾಗಿ ಮಠಪತಿ, ಕೊನೆಗೂ ಅಧಿಕಾರ ಹಸ್ತಾಂತರಿಸಿದ ಜ್ಯೋತಿ ಗಿರೀಶ

ಮುಖ್ಯಾಧಿಕಾರಿಯಾಗಿ ಮಠಪತಿ, ಕೊನೆಗೂ ಅಧಿಕಾರ ಹಸ್ತಾಂತರಿಸಿದ ಜ್ಯೋತಿ ಗಿರೀಶ
ಗುಳೇದಗುಡ್ಡ ಪುರಸಭೆಗೆ ಚಿದಾನಂದ ಮಠಪತಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

ಗುಳೇದಗುಡ್ಡ 26: ಪಟ್ಟಣ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಗಳಾಗಿದ್ದ ಜ್ಯೋತಿ ಗಿರೀಶ ಅವರು ಗುರುವಾರ ಪುರಸಭೆಯಲ್ಲಿ ಸಿಬ್ಬಂದಿಯಾಗಿದ್ದ ಚಿದಾನಂದ ಮಠಪತಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದ ಘಟನೆ ಜರುಗಿತು. 

ಅಧಿಕಾರಕ್ಕಾಗಿ ನಡೆದ ಜಟಾಪಟಿ: ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಅವರು ಗುಳೇದಗುಡ್ಡ ಪುರಸಭೆಗೆ ಪ್ರಭಾರಿಗಳಾಗಿದ್ದರು. ವಾರದಲ್ಲಿ 3ದಿನ ಗುಳೇದಗುಡ್ಡ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಸರ್ಕಾರದ ನಿರ್ದೆಶನದಂತೆ ಜಿಲ್ಲಾಧಿಕಾರಿಗಳು ಮಠಪತಿ ಅವರಿಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಆದೇಶ ನೀಡಿದ್ದರು. ಅದನ್ನು ಮಧ್ಯಾಹ್ನ ಪುರಸಭೆಯಲ್ಲಿ ಜ್ಯೋತಿ ಗಿರೀಶ ಅವರಿಗೆ ತೋರಿಸಿದ ತಕ್ಷಣ ಅವರು ಆದೇಶವನ್ನು ಒಪ್ಪಲಿಲ್ಲ, ಮಠಪತಿ ಅವರಿಗೆ ಅಧಿಕಾರ ಹಸ್ತಾಂತರಿಸಲು ಮೀನಾವೇಶ ಮಾಡಿದರು. ಈ ಸಂದರ್ಭದಲ್ಲಿ ಮಠಪತಿ ಅವರ ಪರವಾಗಿ ಪುರಸಭೆಯ ಕೆಲವು ಸದಸ್ಯರು ವಾಗ್ವಾದಕ್ಕಿಳಿದರು, ಆದರೂ ಗಿರೀಶ ಅವರು ಜಗ್ಗಲಿಲ್ಲ ಸುಮಾರ ಅರ್ಧಗಂಟೆವರೆಗೆ ನಡೆದ ಈ ಅಧಿಕಾರ ಹಸ್ತಾಂತರದ ಹೈಡ್ರಾಮಾ ಕೊನೆಗೆ ಸುಕಾಂತ್ಯದಲ್ಲಿ ಕೊನೆಗೊಂಡಿತು. 

ಪ್ರಭಾರಿ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಅವರು ಚಿದಾನಂದ ಪಠಪತಿ ಅವರಿಂದ ಆದೇಶ ಪತ್ರ ಪಡೆದು ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಕಾಶ ಮುರಗೋಡ, ವೈ.ಆರ್.ಹೆಬ್ಬಳ್ಳಿ, ಸದಸ್ಯರಾದ ಸಂತೋಶ ನಾಯನೆಗಲಿ, ಉಮೇಶ ಹುನಗುಂದ, ರಫೀಕ ಕಲ್ಬುರ್ಗಿ ಸೇರಿದಂತೆ ಇನ್ನೂ ಅನೇಕರು ಹಾಜರಿದ್ದರು.

ಸುದ್ದಿ ಓದಿ