ಜೈನ ಮುನಿ ಮಹಾರಾಜರ ಹತ್ಯೆ ಖಂಡಿಸಿ ಬೃಹತ್ ಮೌನ ಪ್ರತಿಭಟನೆ
ಜಮಖಂಡಿ 11: ಪಂಚಮಸಾಲಿ ಮಠಾಧೀಶರ ಒಕ್ಕೂಟ ಹಾಗೂ ಜಮಖಂಡಿ ತಾಲ್ಲೂಕಿನ ವಿವಿಧ ಮಠಾಧೀಶರಿಂದ ಬೆಳಗಾವಿ ಜಿಲ್ಲೆಯ ಹಿರೇಕೋಡಿ ನಂದಿ ಪರ್ವತ ಕಾಮಕುಮಾರ ನಂದಿ ಜೈನ ಮುನಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ. ಬೃಹತ್ ಮೌನ ಪ್ರತಿಭಟನೆಯನ್ನು ನಡೆಸಿದ್ದರು.
ನಗರದ ಎ.ಜಿ.ದೇಸಾಯಿ ವೃತ್ತದಿಂದ ಹೊರಟ ಮೌನ ಪ್ರತಿಭಟನೆ ಮೆರವಣಿಗೆ ತಾಲೂಕ ಆಡಳಿತ ಮಿನಿ ವಿಧಾನ ಸೌಧವನ್ನು ತಲುಪಿ. ತಹಶೀಲ್ದಾರ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲಿಸಲಾಯಿತು.
ಅತ್ಯಂತ ಶಾಂತ ರೀತಿಯಿಂದ ಅಹಿಂಸಾ ತತ್ವದ ಆಧಾರದ ಮೇಲೆ ಸಹಭಾಳ್ವೆ ನಡೆಸುತ್ತಿರುವ ಜೈನ ಸಮಾಜ ದೇಶದ ಆರ್ಥಿಕ ಪ್ರಗತಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದಿದೆ. ಆದರೆ ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಶ್ರೀಗಳನ್ನು ಬರ್ಬರ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಸರಕಾರ ನೀಡಬೇಕು. ವಿವಿಧ ಮಠಾಧೀಶರಿಗೆ ಸೂಕ್ತ ಭದ್ರತೆಯನ್ನು ಕಲ್ಲಿಸಬೇಕೆಂದು ಪಂಚಮಸಾಲಿ ಒಕ್ಕೂಟದ ಶ್ರೀ ಮಹಾದೇವ ಶಿವಾಚಾರ್ಯ ಶ್ರೀಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ದೇಶದಲ್ಲಿ ಶ್ರೀಗಳಿಗೆ ಮತ್ತು ಮುನಿಗಳಿಗೆ ಬಹಳ ಗೌರವವನ್ನು ನೀಡುವ ದೇಶವಾಗಿದೆ. ಬೆಳಗಾವಿ ಜಿಲ್ಲೆಯ ಹಿರೇಕೋಡಿಯ ಕಾಮಕುಮಾರ ನಂದಿ ಜೈನ ಮುನಿಗಳ ಹತ್ಯೆ ಮಾಡಿರುವದು ಯಾರು ಕೂಡಾ ಸಹಿಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಸರಕಾರ ಕ್ರಮ ವಹಿಸುತ್ತದೆ ಎಂಬ ವಿಶ್ವಾಸ ಇದೆ. ಜೈನ ಧರ್ಮ ಶ್ರೇಷ್ಠವಾದ ಧರ್ಮವಾಗಿದೆ. ಅಹಿಂಸಾ ತತ್ವವಾಗಿದೆ. ಯಾರಿಗೂ ತೊಂದರೆಯನ್ನು ನೀಡದ ಧರ್ಮ. ಇಂತಹ ಧರ್ಮದ ಜೈನ ಮುನಿಗಳ ಅಮಾನವೀಯ ಕೃತ್ಯ ಅತ್ಯಂತ ನೋವಿನ ಸಂಗತಿ. ಈ ಕೃತ್ಯದಲ್ಲಿ ಭಾಗಿಯಾದ ತಪ್ಪಿಸ್ಥರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು, ಸಿದ್ದಲಿಂಗದೇವರು ಕುಂಚನೂರ, ಲಕ್ಷ್ಮಣ ಮುತ್ಯಾ ಆಲಗೂರ, ಸ್ವರೂಪಾನಂದ ಶ್ರೀಗಳು ಕೊಳಿಗುಡ್ಡ, ಪರಮಾನಂದ ಶ್ರೀಗಳು ಹೊಸೂರ, ಶಿವಪುತ್ರ ಅವಧೂತರು ಲಿಂಗನೂರ, ಸಿದ್ದಾನಂದ ಶ್ರೀಗಳು ಬುದ್ನಿ, ಪ್ರಭುದೇವರು ಕೊಣ್ಣೂರ, ಸಕ್ಕಮಹಾದೇವಿ ತಾಯಿ ಚಿಕ್ಕಪಡಸಲಗಿ, ಅನುಸೂಯಾ ತಾಯಿ ತುಂಗಳ, ಶಿವಾನಂದ ಶ್ರೀಗಳು ಚಿಕ್ಕಲಕಿ ಕ್ರಾಸ್,ಸಿದ್ದಾರೂಡ ಶರಣರು ಹಿಪ್ಪರಗಿ,ಗುರುಪಾದ ಶರಣರು ಹಿಪ್ಪರಗಿ,ಶಿವಾಣಮದ ಶರಣರು ಹಿಪ್ಪರಗಿ, ಬಸಯ್ಯ ಶ್ರೀಗಳು ನಾವಲಗಿ, ಸದಾಶಿವ ಚಕ್ರವರ್ತಿ ಶ್ರೀಗಳು ಜಮಖಂಡಿ, ಬಸಯ್ಯ ಶ್ರೀಗಳು ಮಧುರಖಂಡಿ, ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಪ್ರದೀಪ ಮಡಟಗುಡ್ಡ ಶರಣರು ಜಮಖಂಡಿ, ಮಾಜಿ ಜಿ,ಪಂ,ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಅಭೇಂದ್ರಕುಮಾರ ನಾಂದ್ರೇಕರ, ವರ್ಧಮಾನ ನ್ಯಾಮಗೌಡ ಸೇರಿದಂತೆ ನೂರಾರು ಜೈನ ಸಮಾಜದ ಮುಖಂಡರು ಮತ್ತು ಮಹಿಳೆಯರು ಮೌನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.