ಇಂಡಿ

ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಳ್ಳುದನ್ನು ವಿರೋಧಿಸಿ ಕಾರ್ಯಕರ್ತೆಯರ ಬೃಹತ ಪ್ರತಿಭಟನೆ

ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಳ್ಳುದನ್ನು ವಿರೋಧಿಸಿ ಕಾರ್ಯಕರ್ತೆಯರ ಬೃಹತ ಪ್ರತಿಭಟನೆ


ಇಂಡಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಕಂದಾಯ ಇಲಾಖೆಯ ದಾಖಲೆಗಳು ಮನೆ ಬಾಗಲಿಗೆ ಗ್ರಾಮಗಳಲ್ಲಿ ತಲುಪಿಸುವದು, ಸರ್ವೇ ಕಾರ್ಯದಲ್ಲಿ ಬೂತ್ ಮಟ್ಟದ ಕೆಲಸ ಹಚ್ಚುವದು ಮತ್ತು ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಳ್ಳುದನ್ನು ವಿರೋಧಿಸಿ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು.  

ಅಂಬೇಡ್ಕರ ವೃತ್ತದಿಂದ ಪ್ರತಿಭಟನಾ ರಾ​‍್ಯಲಿ ಮೂಲಕ ಹೊರಟ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ, ಬಸವೇಶ್ವರವರ ವೃತ್ತದ ಮೂಲಕ ತಾಲೂಕ ಆಡಳಿತ ಸೌಧ ತಲುಪಿ ಅಲ್ಲಿ ಬೃಹತ್ ಸಭೆಯಾಗಿ ಮಾರ​‍್ಪಟಟಿತು. 

ಅಲ್ಲಿ ಮಾತನಾಡಿದ ಸಿ.ಐ.ಟಿ.ಯು ಅಧ್ಯಕ್ಷೆ ಭಾರತಿ ವಾಲಿ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಮಕ್ಕಳು, ಗರ್ಭೀಣಿ, ಬಾಣಂತಿಯರ ಪಾಲನೆ ಸೇರಿದಂತೆ ನಾನಾ ಕಾರ್ಯದೊತ್ತಡದ ನಡುವೆ ಸಿಲುಕುವ ಕಾರ್ಯಕರ್ತರಿಗೆ ಯಾವದೇ ಕೆಲಸ ಹಚ್ಚಬಾರದು ಎಂದರು.  

ಜೆ.ಸಿ.ಟಿ.ಓ ಅಧ್ಯಕ್ಷ ಬಾಳು ಜೇವೂರ, ಭೀಮಾಶಂಕರ ಪೂಜಾರಿ, ಕಾಳಮ್ಮ ಬಡಿಗೇರ, ಗೌರವಾಧ್ಯಕ್ಷೆ ಪಾಟೀಲ  ಮಾತನಾಡಿದರು.  

ರೇಖಾ ಕಬಾಡೆ, ಪಾರ್ವತಿ ಧಾರೆಕರ, ರೇಣುಕಾ ವನಜಕರ, ಶ್ರೀದೇವಿ ಜಾಧವ, ಸುನಂದಾ ಶಿವೂರ, ಬೋರಮ್ಮ ಎಬುನಾವಾಡಿ, ಸುರೇಖಾ ಪಡ್ಡಗಣ್ಣನವರ, ಲಲಿತಾ ಹೂಗಾರ, ಶಾರದಾ ಗಿರಣಿ ಮತ್ತಿತರಿದ್ದರು.  


ಸುದ್ದಿ ಓದಿ