ಯರಗಟ್ಟಿ

ಯರಗಟ್ಟಿಯಲ್ಲಿ ಬೃಹತ್ ಪ್ರತಿಭಟನೆ

ಯರಗಟ್ಟಿಯಲ್ಲಿ ಬೃಹತ್ ಪ್ರತಿಭಟನೆ

ಯರಗಟ್ಟಿ 11: ಸತೀಶ ಜಾರಕಿಹೊಳಿ ಅವರ ವಿರುದ್ಧ ಅಪಪ್ರಚಾರ ಷಡ್ಯಂತ್ರ ಖಂಡಿಸಿ ಯರಗಟ್ಟಿ ತಾಲೂಕಿನ  ವಿವಿಧ ಸಂಘಟನೆಗಳಿಂದ ಸತ್ತಿಗೇರಿ  ಸರ್ಕಲ್  ದಿಂದ ಯರಗಟ್ಟಿ ಸಂಗೋಳ್ಳಿ ರಾಯಣ್ಣ  ವೃತ್ತದವರೆಗೆ ಪ್ರಗತಿಪರ  ಚಿಂತಕರು ಎಲ್ಲಾ ಸಮಾಜದ ಮುಖಂಡರು ದಲಿತ ಸಂಘರ್ಷ ಸಮಿತಿಗಳು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವದು. 

ಪ್ರತಿನಿಧಿಗಳು ಮುಖಂಡರು ಕಾರ್ಯಕರ್ತರು ಸತೀಶ ಜಾರಕೀಹೊಳಿ ಅಭಿಮಾನಿಗಳು ನೇತೃತ್ವದಲ್ಲಿ ಯರಗಟ್ಟಿಯಲ್ಲಿ ಬೃಹತ್ ಪ್ರತಿಭಟನೆ ಮೂಲಕ ತಹಶೀಲ್ದಾರಗೆ ಮನವಿ ಎಂದು ಯರಗಟ್ಟಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಆರ್‌. ವಿ. ಪಾಟೀಲ, ಎಚ್‌. ಎಸ್‌. ಗಂಗರಡ್ಡಿ, ಎಮ್‌. ಎನ್‌. ಗಡ್ಡಿ, ಚಾಯಪ್ಪ  ಹುಂಡೇಕಾರ, ಮಲಿಕಸಾಬ ಬಾಗವಾನ, ಪ್ರಕಾಶ ಚನ್ನಮೇತ್ರಿ, ಸುರೇಶ ಬಡಿಗೌಡ್ರ, ಶಂಕರ ಇಟ್ನಾಳ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ