ರಾಣೆಬೆನ್ನೂರ

ಇಟಗಿ-ಹಲಗೇರಿ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಇಟಗಿ-ಹಲಗೇರಿ ರಸ್ತೆ ಕಾಮಗಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ರಾಣೇಬೆನ್ನುರು, 19: ರೈತರ ಫಲವತ್ತಾದ ಕೃಷಿಭೂಮಿಯ ಮಧ್ಯದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಳಿಂದ ಆಗಾಗ ವಿದ್ಯುತ್ ಶಾರ್ಟ ಸರ್ಕ್ಯೂಟ್ ಆಗಿ ಬೆಂಕಿ ಪ್ರಕರಣಗಳು ಜರುಗಿ ರೈತರು ಅಪಾರ ವೆಚ್ಚ ಮಾಡಿ ಬೆಳೆದ ಕಬ್ಬು ಮತ್ತು ಮೆಕ್ಕೆಜೋಳದಂತಹ ಎತ್ತರದ ಬೆಳೆಗಳು ಬೆಂಕಿಗೆ ಆಹುತಿಯಾಗಿ ರೈತರಿಗೆ ಆಗುತ್ತಿದ್ದ ಅಪಾರ ನಷ್ಟವನ್ನು ತಪ್ಪಿಸಲು ಹೆಸ್ಕಾಂ ಇಲಾಖೆಯವರು ಇಲಾಖಾ ಖರ್ಚಿನಿಂದಲೇ ಆ ವಿದ್ಯುತ್ ಕಂಬಗಳನ್ನು ಜಮೀನಿನ ರಸ್ತೆ ಬದಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಮತ್ತು ತೀರಾ ಹದಗೆಟ್ಟಿರುವ ಹರಿಹರ-ಸಮ್ಮಸಗಿ (ಇಟಗಿ-ಹಲಗೇರಿ) ರಸ್ತೆಯ ಕಾಮಗಾರಿಯನ್ನು ತುರ್ತು ಪ್ರಾರಂಭಿಸಬೇಕೆಂದು ಒತ್ತಾಯಿಸಿ ನಾಳೆ 21, ರ ಶುಕ್ರವಾರ ಬೆಳಗ್ಗೆ 11 ಘಂಟೆಗೆ ಇಟಗಿ ಹತ್ತಿರ ಹೆಸ್ಕಾಂ ಕಛೇರಿಗೆ ಬೀಗ ಜಡಿದು ಹರಿಹರ-ಸಮ್ಮಸಗಿ ರಸ್ತೆ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ರೈತ ಮುಖಂಡ ರವೀಂದ್ರಗೌಡ  ಪಾಟೀಲ ಎಚ್ಚರಿಸಿದ್ದಾರೆ.  

ಹೆಸ್ಕಾಂನವರ ಬೇಜವಾಬ್ದಾರಿತನದಿಂದ ರೈತರು ಬೆಳೆದ ಕೊಯ್ಲಿಗೆ ಬಂದ ಕಬ್ಬಿನ ಬೆಳೆಗೆ ಇತ್ತೀಚೆಗೆ ಈ ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ರೈತರಿಗೆ ಲಕ್ಷ ಲಕ್ಷ ನಷ್ಟವಾಗುತ್ತಿದ್ದು ಇಂತಹ ಬೆಂಕಿ ಪ್ರಕರಣಗಳು ನೀರಾವರಿ ಪ್ರದೇಶದಲ್ಲಿಯೇ ಅತೀ ಹೆಚ್ಚು ಜರುಗುತ್ತಿದ್ದು ರೈತರ ಅನುಮತಿ ಇಲ್ಲದೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಮಾಡಿಕೊಂಡ ಒಳ ಒಪ್ಪಂದವೇ ಇಂತಹ ಅನಾಹುತಕ್ಕೆ ಕಾರಣವಾಗಿದೆ. ರೈತರಿಗೆ ಮಾಹಿತಿ ನೀಡಿದೆ ಅವರ ಅನುಮತಿ ಪಡೆಯದೆ ಮನಸೋ ಇಚ್ಛೆ ಎಲ್ಲಂದರಲ್ಲಿ ಕೃಷಿ ಜಮೀನಿನ ಮಧ್ಯದಲ್ಲಿ ವಿದ್ಯುತ್ ಲೈನ್ ಎಳೆದು ದರ​‍್ ಮೆರೆದಿರುವ ಅಧಿಕಾರಿಗಳು ಈ ವಿದ್ಯುತ್ ಕಂಬಗಳ ಸ್ಥಳಾಂತರದ ವೆಚ್ಚವನ್ನು ಇಲಾಖೆಯಿಂದಲೇ ಭರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಯಾವುದೇ ಪರಿಸ್ಥಿತಿಯಲ್ಲಿ ರೈತರಿಗೆ ಆ ವೆಚ್ಚ ಭರಿಸಲಿಕ್ಕೆ ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಅಂದು ಈ ಭಾಗದ ನೊಂದ ರೈತರೆಲ್ಲರೂ ಸೇರಿ ಬೃಹತ್ ಪ್ರಮಾಣದಲ್ಲಿ ಹೆಸ್ಕಾಂ ಇಲಾಖೆಯವರ ವಿರುದ್ಧ ನಡೆಸುವ ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಳ್ಳುವರು ಮತ್ತು ಹರಿಹರ-ಸಮ್ಮಸಗಿ ರಸ್ತೆಯ ಬಗ್ಗೆ ಬೇಜವಾಬ್ದಾರಿತನ ವಹಿಸಿರುವ ಲೋಕೋಪಯೋಗಿ ಇಲಾಖೆಯವರ ನಿರ್ಲಕ್ಷತನವನ್ನು ಕೂಡ ಈ ಸಂದರ್ಭದಲ್ಲಿ ರಸ್ತೆ ತಡೆ ಮಾಡುವ ಮೂಲಕ ಖಂಡಿಸಲಾಗುವುದು. ಅಂದು ಆಗುವ ಎಲ್ಲಾ ಅಡೆತಡೆಗಳಿಗೆ ಸಾರ್ವಜನಿಕ ತೊಂದರೆಗೆ ಇಲಾಖೆಯವರೆ ಮುಖ್ಯ ಕಾರಣ ಎಂದು ಪ್ರತಿಭಟನೆಯ ಮುಂಚಣಿ ನಾಯಕ ರವೀಂದ್ರಗೌಡ  ಪಾಟೀಲ ತಿಳಿಸಿದ್ದಾರೆ. 


ಸುದ್ದಿ ಓದಿ