ಹರ್ಷನ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿ
ಕಾಗವಾಡ 27: ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಹರ್ಷನ ಹತ್ಯೆಯನ್ನು ಖಂಡಿಸಿ ಕಾಗವಾಡ ವಿಧಾನಸಭಾ ಮತಕ್ಷೇತ್ರದ ವಾಪ್ತಿಯ ಮಧಬಾವಿ ಗ್ರಾಮದಲ್ಲಿ ತಾಲೂಕಾ ವಿಶ್ವ ಹಿಂದು ಪರಿಷತ್ತ ಮತ್ತು ಬಜರಂಗದಳದ ಕಾರ್ಯಕರ್ತರು ಶುಕ್ರವಾರ ದಿ. 25 ರಂದು ಸಂಜೆ ಬೃಹತ್ ಪ್ರತಿಭಟನೆಯ ರಾ್ಯಲಿ ಮಾಡಿ ತಾಲೂಕಾ ಆಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ, ಕಾಗವಾಡ ಗುರುದೇವಾಶ್ರಮದ ಶ್ರೀ ಯತೀಶ್ವರಾನಂದ ಸ್ವಾಮಿಜಿ ಹಾಗೂ ವಿಶ್ವ ಹಿಂದು ಪರಿಷತ್ತ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ಡಾ. ಅಮೋಲ ಸರಡೆ ಅವರ ನೇತೃತ್ವದಲ್ಲಿ ಕಾರ್ಯಕಕರ್ತರು ಒಂದುಗೂಡಿ ಪ್ರತಿಭಟನಾ ರಾ್ಯಲಿ ಏರಿ್ಡಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹರ್ಷ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮನವಿ ಪತ್ರ ಅರ್ಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಶ್ರೀ ಯತೀಶ್ವರಾನಂದ ಸ್ವಾಮಿಜಿ ಹಾಗೂ ಡಾ. ಅಮೋಲ ಸರಡೆ ಮಾತನಾಡಿ ಶಿವಮೊಗ್ಗದ ನಗರ ಕೋಟೆ ಪ್ರಖಂಡದ ಬಜರಂಗದಳ ಸಹ ಸಂಯೋಜಕ ಶ್ರೀ ಹರ್ಷನ ಅವರನ್ನು ದೇಶದ್ರೋಹಿ ಸಂಘಟನೆಗಳಾದ ಪಿಎಫ್ಆಯ್ ಮತ್ತು ಎಸ್ಡಿಪಿಆಯ್ ಪಾತಕರಿಂದ ಭೀಕರ ಹತ್ಯೆ ಎಸಗಲಾಗಿದೆ.
ಇದನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಇದು ಸಾಮಾನ್ಯ ಹತ್ಯೆಯಾಗಿರದೇ ದೇಶದ್ರೋಹಿ ಸಂಚಿನ ಹತ್ಯೆಯಾಗಿರುವುದರಿಂದ ಇದರ ತನಿಖೆಯನ್ನು ಕೇಂದ್ರ ತನಿಖಾದಳಗಳಾದ ಎನ್ಆಯ್ಎ ಮತ್ತು ಸಿಬಿಆಯ್ ಗೆ ಒಪ್ಪಿಸಿ ಈ ಹತ್ಯೆಯ ಹಿಂದಿರುವ ಸಮಾಜ ಘಾತುಕರ ಸಂಚನ್ನು ಜಯಲಿಗೆಳೆದು ಹತ್ಯೆ ಎಸಗಿದ ದೇಶ ದ್ರೋಹಿಗಳಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಪದೇ ಪದೇ ಇಂತಹ ಕೃತ್ಯಗಳನ್ನು ನಡೆಸಿ ಸಾಮಾಜಿಕ ಶಾಂತಿಯನ್ನು ಕದಡುತ್ತಿರುವ ದೇಶದ್ರೋಹಿ ಸಂಘಟನೆಗಳಾದ ಪಿಎಫ್ಆಯ್ ಮತ್ತು ಎಸ್ಡಿಪಿಆಯ್ ಗಳನ್ನು ಕರ್ನಾಟಕ ಸರ್ಕಾರವು ಈ ಕೂಡಲೇ ನಿಷೇಧಿಸಬೇಕೆಂದು ಡಾ. ಅಮೋಲ ಸರಡೆ ಸರ್ಕಾರವನ್ನು ಒತ್ತಾಯಿಸಿದರು. ಹತ್ಯೆಗೊಳಗಾದ 26 ರ ಹರೆಯದ ಹರ್ಷ ಬಡ ಕುಟುಂಬದಿಂದ ಬಂದಿದ್ದು ವಯಸ್ಸಾದ ತಂದೆ ತಾಯಿಗಳಿಗೆ ಆಧಾರವಾಗಿದ್ದ, ಕರ್ನಾಟಕ ಸರ್ಕಾರ ಹತ್ಯೆಗೊಳಗಾದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ.ಗಳನ್ನು ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳನ್ನು ಡಾ. ಅಮೋಲ ಸರಡೆ ಒತ್ತಾಯಿಸಿದರು.
ಈ ಸಮಯದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಕಾಗವಾಡ ಗುರುದೇವಾಶ್ರಮದ ಪ.ಪೂ. ಶ್ರೀ ಯತೀಶ್ವರಾನಂದ ಸ್ವಾಮಿಜಿ, ವಿಶ್ವ ಹಿಂದು ಪರಿಷತ್ತ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ಡಾ. ಅಮೋಲ ಸರಡೆ, ವಿಶ್ವ ಹಿಂದು ಪರಿಷತ್ತನ ಕೃಷ್ಣಾ ಶಿಂಧೆ, ಸಂಜಯ ತೆಲಸಂಗ, ಶಿವಾನಂದ ಮಗದುಮ್, ಅನೀಲ ನಾವಲಿಗೇರ,ಸೌರಭ ಕುಲಕರ್ಣಿ, ಅಪ್ಪು ಚೌಗುಲಾ, ಬಾಳು ಮಗದುಮ್, ಪ್ರಕಾಶ ಜಾಲಿಹಾಳಕರ, ವಿನಾಯಕ ಶೇಡಬಾಳ, ಪ್ರವೀಣ ಕೆಂಪವಾಡೆ, ಸೌರಭ ಕುಲಕರ್ಣಿ, ಗೀರೀಶ ಪಾಟೀಲ, ರಾಜಗೊಂಡ ಪಾಟೀಲ, ತಾಲೂಕಿನ ಪ್ರತಿ ಗ್ರಾಮಗಳ ವಿಶ್ವ ಹಿಂದು ಪರಿಷತ್ತ ಬಜರಂಗದಳದ ಪದಾಧಿಕಾರಿಗಳು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.